Home namma chikmagalur chikamagalur ಬಿಜೆಪಿ ಟಿಕೆಟ್ ಭ್ರಮೆಯಿಂದ ವೆಂಕಟೇಶ್ ಹೊರಬರಲಿ
chikamagalurHomeLatest Newsnamma chikmagalur

ಬಿಜೆಪಿ ಟಿಕೆಟ್ ಭ್ರಮೆಯಿಂದ ವೆಂಕಟೇಶ್ ಹೊರಬರಲಿ

Share
Oplus_16908288
Share

ಚಿಕ್ಕಮಗಳೂರು : ಶಾಸಕ ಹೆಚ್.ಡಿ ತಮ್ಮಯ್ಯನವರನ್ನು ಪ್ರತಿ ನಿತ್ಯ ವಿರೋಧಿಸಿದರೆ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಭ್ರಮೆಯಿಂದ ಕುರುವಂಗಿ ವೆಂಕಟೇಶ್ ಅವರು ಹೊರಬರಲಿ ಎಂದು ಕೆ.ಪಿ.ಪಿ ಸಂಶೋಧನಾ ವಿಭಾಗದ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್.ಡಿ ತಮ್ಮಯ್ಯನವರಿಂದ ದಲಿತರಿಗೆ ರಕ್ಷಣೆ ಇಲ್ಲ ಎಂದು ಸುಳ್ಳು ಆರೋಪ ಮಾಡಿರುವ ಬಿಜೆಪಿ ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷರು ಎಷ್ಟು ಜನ ದಲಿತರಿಗೆ ನ್ಯಾಯ ಒದಗಿಸಿದ್ದಾರೆ ಎಂದು ಬಹಿರಂಗ ಪಡಿಸಲಿ ಎಂದರು.

ತಮ್ಮ ಸ್ವಾರ್ಥಕ್ಕಾಗಿ ಪ್ರತಿ ದಲಿತ ಕಾಲೋನಿಗಳಲ್ಲಿ ಇದ್ದ ಅಂಬೇಡ್ಕರ್ ಯುವಕ ಸಂಘಗಳನ್ನು ಹೊಡೆದು ಆಳುವ ನೀತಿ ಅನುಸರಿಸಿ ದಲಿತ ಕಾಲೋನಿಗಳಲ್ಲಿ ಬ್ರಿಟಿಷ್ ನೀತಿಯಿಂದ ದಲಿತ ಯುವಕರ ಒಗ್ಗಟ್ಟನ್ನು ಹಿಬ್ಬಾಗ ಮಾಡಿದ ಕೀರ್ತಿ ವೆಂಕಟೇಶ್ ಅವರಿಗೆ ಸಲ್ಲುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಾರೆ ಎಂದು ಅವರ ಅಣ್ಣನವರು ಜಿಲ್ಲಾ ಪಂಚಾಯತಿ ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡಿ ಹಾಸ್ಟೆಲ್‌ನಲ್ಲಿ ಇರುವ ದಲಿತ ವಿದ್ಯಾರ್ಥಿಗಳನ್ನು ಅವಮಾನಿಸಿದಾಗ ಬಿಜೆಪಿ ದಲಿತ ಮುಖಂಡರು ಎಲ್ಲಿ ಅಡಗಿ ಕುಳಿತಿದ್ದರುಎಂದು ಲೇವಡಿ ಮಾಡಿದರು.

ಸಿ.ಟಿರವಿ ದಲಿತಪರ ಹೋರಾಟಗಾರರನ್ನು ಅರ್ಬನ್ ನಕ್ಸಲರು ಎಂದು ಕರೆಯುವ ಮೂಲಕ ಹೋರಾಟಗಾರರನ್ನು ಅಪಹಾಸ್ಯ ಮಾಡಿ ಅವಮಾನಿಸಿದಾಗ ಈ ವೈಟ್ ಕಾಲರ್ ಬಿಜೆಪಿಯ ದಲಿತ ನಾಯಕರು ಯಾಕೆ ಬಾಯಿಗೆ ಬೀಗ ಹಾಕಿಕೊಂಡಿದ್ದರುಎಂದು ಪ್ರಶ್ನಿಸಿದರು.

ದಲಿತರ ಬಗ್ಗೆ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷರಿಗೆ ನಿಜವಾಗಿಯೂ ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ, ಬಿಜೆಪಿಯಲ್ಲಿ ಎಸ್ಸಿ ಘಟಕಕ್ಕೆ ಬೇರೆ ದಲಿತ ನಾಯಕರಿಗೆ ಅವಕಾಶ ನೀಡದೆ ಸಾರ್ವಕಾಲಿಕ ಅಧ್ಯಕ್ಷರಾಗಿ ಯಾಕೆ ಉಳಿದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ.ಎಂದು ಸವಾಲೆಸೆದರು.

ಇನ್ನಾದರೂ ಈ ರೀತಿಯ ದುಷ್ಟ ರಾಜಕಾರಣವನ್ನು ಬಿಟ್ಟು ಸಮಾಜದ ಒಳಿತಿಗಾಗಿ, ಸಾಧ್ಯವಾದರೆ ಚಿಕ್ಕಮಗಳೂರಿನ ಅಭಿವೃದ್ಧಿಗೆ ಆರೋಗ್ಯಕರ ಸಲಹೆಗಳನ್ನು ನೀಡಲಿ ಈ ರೀತಿಯ ವ್ಯರ್ಥ ಕೆಲಸಗಳನ್ನು ಬಿಟ್ಟು ಉತ್ತಮ ನಾಯಕರಾಗುವ ಕಡೆ ಗಮನ ಹರಿಸಲಿ ಎಂದರು.

ಗೋಷ್ಟಿಯಲ್ಲಿ ಗ್ಯಾರಂಟಿಸಮಿತಿ ತಾಲ್ಲೋಕು ಅಧ್ಯಕ್ಷಮಲ್ಲೇಶ್ ಸ್ವಾಮಿ,ಯುವಘಟಕದ ಅಧ್ಯಕ್ಷ ಲಾಕೇಶ್,ಲಕ್ಯಾಸಂತೋಷ್ ಕುರುವಂಗಿ ರಾಜೇಶ್ ಇದ್ದರು.

Let Venkatesh come out of the illusion of BJP ticket.

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...