Home namma chikmagalur chikamagalur 2.25 ಲಕ್ಷ ರೂ ಮಾಂಗಲ್ಯ ಸರ ಕಳ್ಳತನ
chikamagalurCrime NewsHomeLatest Newsnamma chikmagalur

2.25 ಲಕ್ಷ ರೂ ಮಾಂಗಲ್ಯ ಸರ ಕಳ್ಳತನ

Share
Share

ಚಿಕ್ಕಮಗಳೂರು:  ಚಂದ್ರನಗರ ನಿವಾಸಿ ವೃದ್ಧ ಮಹಿಳೆ ಒಬ್ಬರು ವಾಕ್ ಮಾಡುತ್ತಿದ್ದ ವೇಳೆ ಚಿನ್ನದ ಮಾಂಗಲ್ಯದ ಸರಗಳ್ಳತನ ಆಗಿರುವುದಾಗಿ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಎಂದಿನಂತೆ  ಮನೆಯಿಂದ ವಾಕ್ ಹೊರಟು ಚಂದ್ರನಗರ ದಾಟಿ ಕೆಂಪನಹಳ್ಳಿ ಕಡೆ ರಸ್ತೆಯಲ್ಲಿ ವಾಕ್ ಮಾಡಿಕೊಂಡು ಬಂದು ಸಾಯಿಬಾಬ ಸಾಮೀಲ್ ದಾಟಿ ಬರುವಾಗ ಮಂಡಿ ನೋವಾಗಿದ್ದರಿಂದ ರಸ್ತೆಯ ಪಕ್ಕದಲ್ಲಿದ್ದ ಸೇತುವೆ ಮೇಲೆ ಕುಳಿತು ವಿಶ್ರಾಂತಿಯನ್ನು ಪಡೆಯುತ್ತಿದ್ದ ಸಮಯದಲ್ಲಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮಾಸ್ಕ್ ಧರಿಸಿ ಸ್ಕೂಟಿಯಲ್ಲಿ ಕರ್ಕಿಪೇಟೆ ಕಡೆಯಿಂದ ಬಂದವರು ಹತ್ತಿರ ಬಂದು ಏನೋ ಮಾತನಾಡಿದ್ದು, ಅದು ನನಗೆ ಸರಿ ಕೇಳಿಸಿರುವುದಿಲ್ಲ.

ನಂತರ ಅಲ್ಲಿಂದ ಅವರು ಸ್ಕೂಟಿಯಲ್ಲಿ ಮುಂದೆ ಹೋದಂತೆ ಮಾಡಿ ಪುನಃ ಸ್ಕೂಟಿಯನ್ನು ಹಿಂದಕ್ಕೆ ತಿರುಗಿಸಿಕೊಂಡು ಬಂದಿದ್ದು ಅ?ರಲ್ಲಿ ನಾನು ಎದ್ದು, ಹೊರಟು ನಿಂತಿದ್ದಾಗ ನನ್ನನ್ನು ಅಡ್ಡಗಟ್ಟಿ ತಡೆದು ಏಕಾಏಕಿಯಾಗಿ ಸ್ಕೂಟಿಯ ಹಿಂದೆ ಕುಳಿತಿದ್ದ ಅಪರಿಚಿತ ವ್ಯಕ್ತಿಯು ನನ್ನ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ ಸುಮಾರು ೪೫ ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಂಡಾಗ ಕೂಡಲೆ ನಾನು ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಕಿರುಚಾಡಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ನನಗೆ ಜೀವ ಬೆದರಿಕೆ ಹಾಕಿ ನನ್ನ ಕುತ್ತಿಗೆ ಹಿಡಿದು ಸೇತುವೆ ಮೇಲೆ ತಳ್ಳಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಜೊರಾಗಿ ತಳ್ಳಿದ ಪರಿಣಾಮ ನನ್ನ ಬಲ ಮೊಣಕೈಗೆ ರಕ್ತಗಾಯಗಳಾಗಿರುತ್ತದೆ.

ಎರಡು ಜನರು ಕಪ್ಪು ಬಣ್ಣದ ಜರ್ಕೀನ್ ಧರಿಸಿರುತ್ತಾರೆ. ನನ್ನ ಮಾಂಗಲ್ಯ ಚಿನ್ನದ ಸರದ ಬೆಲೆ ಅಂದಾಜು ೨,೨೫,೦೦೦/- ರೂ ಆಗಿರುತ್ತದೆ. ನನಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರನ್ನು ನೀಡಿದ್ದು. ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಭರಣ ಕಳ್ಳತನ:  ನಗರದ ಶ್ರೀ ಕತ್ರಿಮಾರಮ್ಮನ ದೇವಸ್ಥಾನದ ಹತ್ತಿರ ಇರುವ ಬಸ್ ನಿಲ್ದಾಣದಿಂದ ಮಹಿಳೆಯೊಬ್ಬರು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸಖರಾಯಪಟ್ಟಣಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಆಭರಣ ಕಳ್ಳತನ.

ಫೆ. ೨೫ರ ಬುಧವಾರ ಮಧ್ಯಾಹ್ನ ಸುಮಾರು ೦೨.೪೫ ರಿಂದ ೩.೦೦ ಘಂಟೆ ಸಮಯದಲ್ಲಿ ಸಖರಾಯಪಟ್ಟಣಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಬಸ್ ಹತ್ತಿ ಬಸ್ಸಿನೊಳಗೆ ಮುಂದಕ್ಕೆ ಹೋಗಿ ನಿಂತು ಕೊಂಡು ತನ್ನ ಬ್ಯಾಗಿನ ಜಿಪ್‌ಗಳನ್ನು ತೆರೆದು ಆಭರಣಗಳ ಇರುವಿಕೆ ಕುರಿತು ಖಚಿತಪಡಿಸಿಕೊಂಡು ಎರಡು ಬ್ಯಾಗಿನ ಜಿಪ್ ಅನ್ನು ಮತ್ತೆ ಹಾಕಿ ಬ್ಯಾಗನ್ನು ನನ್ನ ತೊಡೆ ಮೇಲೆ ಇಟ್ಟು ಕೊಂಡು ಪ್ರಯಾಣ ಮಾಡುತ್ತಾರೆ.

ಸಖರಾಯಪಟ್ಟಣ ಬಂದಾಗ ಇಳಿದು ಒಂದೆರೆಡು ಹೆಜ್ಚೆ ಹಾಕುತ್ತಾ ತನ್ನ ಬ್ಯಾಗಿನ ಕಡೆ ನೋಡಿಕೊಂಡಾಗ ತನ್ನ ಬ್ಯಾಗಿನ ಜಿಪ್ ತೆರೆದು ಕೊಂಡಿದ್ದು ಕಂಡುನಂದಾಗ. ಬಸ್ ನಿಲ್ದಾಣದಲ್ಲಿ ಬ್ಯಾಗನ್ನು ಪರಿಶೀಲಿಸಲು ಹೆದರಿಕೊಂಡೆ ಕಾರಣ ಒಡವೆಗಳು ನನ್ನ ಬ್ಯಾಗಿನಲ್ಲಿ ಇದ್ದ ಕಾರಣ ಅಲ್ಲೆ ಪರಿಶೀಲಿಸದೇ ನನ್ನ ಸೊಸೆಯ ಅಕ್ಕನ ಮನೆಗೆ ಹೋಗಿ ಬ್ಯಾಗನ್ನು ಪರೀಸೀಲಿಸಿದಾಗ ಬ್ಯಾಗಿನ ಒಳಗೆ ಇನ್ನೊಂದು ಬ್ಯಾಗಿನ ಜಿಪ್ ಸಹ ತರೆದಿತ್ತು ಹಾಗೂ ಈ ಬ್ಯಾಗಿನ ಒಳಗೆ ಬಾಕ್ಸ್‌ನಲ್ಲಿ ಇಟ್ಟಿದ್ದ ಒಡವೆ ಕಳ್ಳತನವಾಗಿತ್ತು ಎಂದು ದೂರಿನಲ್ಲಿ ತಿಳಿಸಿರುತ್ತಾರೆ.

ಕಳ್ಳತನವಾದ ನನ್ನ ಒಡವೆಗಳಲ್ಲಿ ೪೦ ಗ್ರಾಂ ಎರಡು ಬಳೆಗಳು, ೩೫ಗ್ರಾಂ ಒಂದು ಜೊತೆ ಜೇಡದ ನೆಕ್ಲಸ್, ೫ ಗ್ರಾಂ ಒಂದು ಜೊತೆ ಜೇಡದ ಓಲೆಗಳು ಒಟ್ಟು ೮೦ ಗ್ರಾಂಗಳ ಒಡವೆಗಳಾಗಿರುತ್ತವೆ. ಸದರಿ ಈ ಒಡವೆಗಳ ಇಂದಿನ ಬೆಲೆ ಸುಮಾರು ೧೦,೬೪,೦೦೦/- (ರೂಪಾಯಿ ಹತ್ತು ಲಕ್ಷದ ಆರವತ್ತು ನಾಲ್ಕು ಸಾವಿರ) ಗಳಾಗಿರುತ್ತವೆ. ಕಳ್ಳತನವಾದ ಒಡವೆಗಳನ್ನು ಹುಡುಕಿ ಪತ್ತೆ ಹಚ್ಚಿ ಕೊಡಬೇಕಾಗಿ ಕೋರಿ ದೂರನ್ನು ನೀಡಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

Rs 2.25 lakh gold chain stolen

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...