Home namma chikmagalur chikamagalur 35 ಲಕ್ಷ ರೂ.ವೆಚ್ಚದ ಗ್ರಾಮಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
chikamagalurHomeLatest Newsnamma chikmagalur

35 ಲಕ್ಷ ರೂ.ವೆಚ್ಚದ ಗ್ರಾಮಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

Share
Share

ಚಿಕ್ಕಮಗಳೂರು: ಗ್ರಾಮಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳು ತಮಗೆ ದೊರಕಿದ ಅವಕಾಶವನ್ನು ಜನರ ಕಲ್ಯಾಣಕ್ಕಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ತಾಲೂಕಿನ ಬೆಳವಾಡಿಯಲ್ಲಿ ೩೫ ಲಕ್ಷ ರೂ.ವೆಚ್ಚದ ಗ್ರಾಮಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಗ್ರಾಮಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೂ ಎಲ್ಲ ಚುನಾಯಿತ ಪ್ರತಿನಿಗಳಿಗೆ ಅವರದ್ದೇ ಆದ ಹಲವು ಜವಾಬ್ದಾರಿ ಮತ್ತು ಸೇವೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ  ಎಂದರು

ಆದರೆ, ನೇರವಾಗಿ ಜನರ ಕೈಗೆ ಸಿಕ್ಕಿ ಅವರ ಸಮಸ್ಯೆ ಬಗೆಹರಿಸುವಂತಹ ಅವಕಾಶ ಇರುವಂತಹದ್ದು ಗ್ರಾಮಪಂಚಾಯಿತಿ ಮತ್ತಿತರೆ ಸ್ಥಳೀಯ ಸಂಸ್ಥೆಗಳ ಪ್ರತಿನಿಗಳಿಗೆ ಮಾತ್ರ. ದೊರಕಿರುವ ಈ ಅವಕಾಶವನ್ನು ಸ್ಥಳೀಯ ಸಂಸ್ಥೆಗಳ ಪ್ರತಿನಿಗಳು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಸಮಸ್ಯೆ ಹೇಳಿಕೊಂಡು ಬಂದ ಜನರಿಗೆ ಸಹಕರಿಸಬೇಕು ಎಂದು ಹೇಳಿದರು.

ಕುಡಿಯುವ ನೀರು, ಸ್ವಚ್ಧತೆ ಮತ್ತು ಬೀದಿದೀಪ ಇಷ್ಟು ಸಮಸ್ಯೆಗಳನ್ನು ಗ್ರಾ.ಪಂ.ನಲ್ಲಿ ಬಗೆಹರಿಸಿದಲ್ಲಿ ಅರ್ಧ ಸಮಸ್ಯೆಗೆ ಪರಿಹಾರ ದೊರೆತಂತೆ ಎಂದ ಅವರು ಗ್ರಾಮಪಂಚಾಯಿತಿ ಹೊಸ ಕಟ್ಟಡ ಕಟ್ಟುವುದು ಎಷ್ಟು ಮುಖ್ಯವೋ ಇಲ್ಲಿನ ಜನರ ಸಮಸ್ಯೆ ಬಗೆಹರಿಸುವುದೂ ಅಷ್ಟೇ ಮುಖ್ಯ ಎಂದರು.

ನಮ್ಮ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ೫ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಪಂಚಗ್ಯಾರಂಟಿಗಳು ಯಾರಿಗೆ ಬೇಕು? ಅಭಿವೃದ್ಧಿ ಮಾಡಿ ಎಂದು ಪ್ರತಿಪಕ್ಷದವರು ಬೇರೆಯವರ ಮೂಲಕ ಪೋಸ್ಟ್ ಹಾಕಿಸುತ್ತಿದ್ದಾರೆ. ಯಾರೋ ಹೊಟ್ಟೆ ತುಂಬಿದವರು ಗ್ಯಾರಂಟಿ ಬೇಡ ಎನ್ನಬಹುದು. ಗ್ಯಾರಂಟಿಗಳು ಉಳ್ಳವರು, ಶ್ರೀಮಂತರಿಗಲ್ಲ. ಯಾರೂ ಹಸಿವಿನಿಂದ ಇರುತ್ತಾರೋ ಅವರಿಗೆ ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟಿದ್ದಾರೆ.

ಗೃಹಲಕ್ಷ್ಮಿ ಯಲ್ಲಿ ಮಹಿಳೆಯರಿಗೆ ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆಯಲ್ಲಿ ದೇವಾಲಯ ಭೇಟಿ ಮಾಡಿದ್ದಾರೆ. ಓದಿದ ಯುವ ಜನರಿಗೆ ಯುವನಿಧಿ ನೀಡಿದ್ದಾರೆ ಇಷ್ಟೆಲ್ಲ ಮಾಡಿಯೂ ನಮ್ಮಲ್ಲಿ ಅಭಿವೃದ್ಧಿಗೂ ಹಣವಿದೆ. ಈ ಭಾಗದಲ್ಲಿ ಅನೇಕ ದೇವಾಲಯ, ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಹೇಳಿದರು.

ಗ್ರಾಮಪಂಚಾಯಿತಿ ಅಧ್ಯಕ್ಷೆ ಸಿರಾಜ್‌ಉನ್ನೀಸ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಗ್ಯಾರಂಟಿ ಪ್ರಾಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ರಾಜ್ಯ ಪರಿಸರ ಮಾಲಿನ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಮುಖಂಡರುಗಳಾದ ವೆಂಕಟೇಶ್ ನಾಯ್ಡು, ಬೆಳವಾಡಿ ಅಮಿರ್, ಆನಂದ್, ಮೂರ್ತಿಯಪ್ಪ, ಧರ್ಮೇಂದ್ರ, ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಭಾಗ್ಯ, ಸದಸ್ಯರುಗಳಾದ ಕಲ್ಪನಾ, ಕಾವೇರಮ್ಮ, ಪ್ರದೀಪ, ದನುಕುಮಾರ್, ಗೌರಮ್ಮ, ಚಂದ್ರಮ್ಮ, ಜಯಲಕ್ಷ್ಮೀ, ರೇಣುಕಾ, ನಾಗರಾಜ್, ರಂಗಸ್ವಾಮಿ, ಪರಮೇಶ್ವರಪ್ಪ ಉಪಸ್ಥಿರಿದ್ದರು. ಪಿಡಿಒಸಿ.ಎಸ್.ವಿಶ್ವನಾಥಯ್ಯಸ್ವಾಗತಿಸಿದರು.

Foundation stone laid for construction of new Gram Panchayat building costing Rs. 35 lakhs

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...