Home namma chikmagalur chikamagalur ಕುವೆಂಪು ಕಲಾಮಂದಿರದ ಕಾಂಪೌಂಡ್‌ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ
chikamagalurHomeLatest Newsnamma chikmagalur

ಕುವೆಂಪು ಕಲಾಮಂದಿರದ ಕಾಂಪೌಂಡ್‌ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ

Share
Share
ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ರಾತ್ರಿ 9.30ರ ಸುಮಾರಿಗೆ ಪ್ರಯಾಣಿಕರನ್ನೆಲ್ಲ ಇಳಿಸಿದ ಬಳಿಕ ಬಸ್ ಅನ್ನು ಆಲ್ಟಿಂಗ್ ಮಾಡಲು ತೆರಳುತ್ತಿದ್ದ ವೇಳೆ ಕಡೂರು–ಚಿಕ್ಕಮಗಳೂರು ನಾನ್‌ಸ್ಟಾಪ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಕುವೆಂಪು ಕಲಾಮಂದಿರದ ಕಾಂಪೌಂಡ್‌ಗೆ ಗುದ್ದಿದ ಘಟನೆ ನಡೆದಿದೆ.

ಚಾಲಕನ ಹೇಳಿಕೆಯ ಪ್ರಕಾರ ಬ್ರೇಕ್ ಫೇಲ್ ಆದ ಕಾರಣ ಬಸ್ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಅಪಘಾತದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.

ಇನ್ನೊಂದು ಪ್ರಮುಖ ಸಂಗತಿ ಎಂದರೆ, ರಾತ್ರಿ ವೇಳೆ ಆಲ್ಟಿಂಗ್‌ಗೆ ಬರುವ ಕೆಲ ಬಸ್ ಚಾಲಕರು ಮತ್ತು ನಿರ್ವಾಹಕರು ಇದೇ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಸದ್ಯ ಘಟನೆ ನಡೆದ ಸಮಯದಲ್ಲಿ ಅಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ಸ್ಥಳೀಯರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

KSRTC bus crashes into Kuvempu Kalamandira compound

Share

Leave a comment

Leave a Reply

Your email address will not be published. Required fields are marked *

Don't Miss

ಕಾಫಿನಾಡಿನಲ್ಲಿ ಲಾಂಗು – ಮಚ್ಚುಗದ್ದೆ ಸುದ್ದಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಲಾಂಗು ಮತ್ತು ಮಚ್ಚುಗಳಂತಹ ಮಾರಕಾಸ್ತ್ರಗಳು ಬಳಕೆ ತೀರಾ ಸಾಮಾನ್ಯ ಎಂಬಂತಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೇಕ್ ಕತ್ತರಿಸುವ ಸಂಭ್ರಮಾಚರಣೆ ಇರಲಿ ಅಥವಾ ರಾಜಕೀಯ ನಾಯಕರ...

ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಶಿಕ್ಷಕರ ಮೇಲೆ ಪೋಕೋ ಪ್ರಕರಣ

ಕಡೂರು: ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಕಾಮುಕ ಸಹ ಶಿಕ್ಷಕ ಹಾಗೂ ಆತನಿಗೆ ಸಾಥ್ ನೀಡಿದ ಮುಖ್ಯಶಿಕ್ಷಕನ ವಿರುದ್ಧ ಕಠಿಣ...

Related Articles

ಮುಳ್ಳಯ್ಯನಗಿರಿ ಬಳಿ ಟ್ರಾಫಿಕ್ ಜಾಮ್

ಚಿಕ್ಕಮಗಳೂರು: ಮೂರು ದಿನಗಳ ಸತತ ರಜೆಯ ಹಿನ್ನೆಲೆಯಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರು ಕಾಫಿನಾಡು ಚಿಕ್ಕಮಗಳೂರಿನತ್ತ...

ಕೆಂಪೇಗೌಡರ ಕನಸಿನ ಬೆಂಗಳೂರು ನಮ್ಮ ಹೆಮ್ಮೆಯ ಸಂಕೇತ

ಚಿಕ್ಕಮಗಳೂರು: ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಬೆಂಗಳೂರು ಮಹಾನಗರದ ಸೃಷ್ಟಿಗೆ ಕಾರಣರಾದ ನಾಡಪ್ರಭು ಕೆಂಪೇಗೌಡರ ಜಯಂತಿಯು...

ಶ್ರೀರಾಮನ ಹೆಸರಿನಲ್ಲಿ ಹಣ ದೋಚಲಾಗಿದೆ

ಚಿಕ್ಕಮಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರ ಟ್ರಸ್ಟ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಕುರಿತು ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ...

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ,...