Home namma chikmagalur chikamagalur ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು
chikamagalurHomeLatest Newsnamma chikmagalur

ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು

Share
Share

ಚಿಕ್ಕಮಗಳೂರು: ಪ್ರತಿಯೋಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ ಪ್ರತಿನಿತ್ಯ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಯೋಗ, ಧ್ಯಾನದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

ನಗರದ ಉರ್ದು ಶಾಲೆ ಆವರಣದಲ್ಲಿ ನ್ಯಾಶನಲ್ ವೆಲೇರ್ ಮತ್ತು ಚಾರಿಟೆಬಲ್ ಟ್ರಸ್ಟ್ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದಿಂದ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಕಳೆದ ೧೧ ವರ್ಷದಿಂದ ಬಡವರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಗುಣಮಾಡಿದ್ದಾರೆ. ಆರೋಗ್ಯವೇ ಭಾಗ್ಯ, ಆರೋಗ್ಯ ಒಂದಿದ್ದರೆ ಮುಂದಿನದನ್ನು ದೇವರು ಕೊಡುತ್ತಾನೆ. ಯಾವುದೇ ಸ್ವಾರ್ಥವಿಲ್ಲದೆ ಟ್ರಸ್ಟ್ ನ ಎಲ್ಲ ಪದಾಕಾರಿಗಳು ಬಡವರ ಆರೋಗ್ಯಕ್ಕಾಗಿ ದುಡಿಯುತ್ತಿರುವುದು ಒಳ್ಳೆಯ ಕೆಲಸ. ಈ ಸಂಸ್ಥೆಯಲ್ಲಿ ವೈದ್ಯರು ವೃತ್ತಿಯನ್ನು ಸೇವೆ ಎಂದು ಭಾವಿಸಿ ಮಾಡುತ್ತಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಕಣಚೂರು ಮೆಡಿಕಲ್ ಆಸ್ಪತ್ರೆಗೆ ಹೋಗುವವರಿಗೆ ಒಂದು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಯು.ಕೆ.ಮೋಣು ಮಾತನಾಡಿ ನಮ್ಮ ಸಂಸ್ಥೆ ಬರಿ ಮುಸಲ್ಮಾನರಿಗೆ ಸೀಮಿತವಾಗಿಲ್ಲ. ಸಮಾಜದ ಎಲ್ಲ ವರ್ಗದ ಜನರಿಗೆ ಈ ಆಸ್ಪತ್ರೆಯ ಉಪಯೋಗ ಪಡೆಯಬೇಕು. ಹಣವಿಲ್ಲದೆ, ಔಷಧಿ, ಚಿಕಿತ್ಸೆ ದೊರೆಯದೆ ಯಾರೂ ಮರಣ ಹೊಂದಬಾರದು ಎಂಬ ಉದ್ದೇಶದಿಂದ ಏನೂ ಇಲ್ಲದ ಅನಾಥರು, ಹಿಂದೆ ಮುಂದೆ ಇಲ್ಲದವರು ಆನಾರೋಗ್ಯ ಉಂಟಾದಲ್ಲಿ ನ್ಯಾಶನಲ್ ವೆಲೇರ್‌ಚಾರಿಟೆಬಲ್ ಟ್ರಸ್ಟ್ ಮೂಲಕ ನಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಹಾಫೀಝ್ ಮೊಹಮ್ಮದ್ ರಿಯಾಜ್ ಖಾನ್ ಮಾತನಾಡಿ ಈ ಶಿಬಿರದಲ್ಲಿ ನುರಿತ ವೈದ್ಯರು ತಪಾಸಣೆ ನೆಡೆಸಲಿದ್ದು ವೈದ್ಯಶಾಸ್ತ್ರ ತಜ್ಞರು, ಚರ್ಮ ರೋಗ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಮಕ್ಕಳ ತಜ್ಞರು, ಮೂಳೆ, ಕಿವಿ, ಮೂಗು, ಗಂಟಲು ತಜ್ಞರು, ಶ್ವಾಸಕೋಶ ತಜ್ಞರು ಹಾಗೂ ಸ್ತ್ರೀ ರೋಗ ಮತ್ತು ಪ್ರಸೂತಿ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಭಾಗವಹಿಸುವ ಸುಮಾರು ೧೫೦೦ ಬಡವರಿಗೆ ಅಗತ್ಯವಿರುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ನೀಡಲು ಗುರಿ ಹೊಂದಲಾಗಿದೆ ಶಿಬಿರದಲ್ಲಿ ಪಾಲ್ಗೋಳ್ಳುವ ಎಲ್ಲರಿಗೂ ಕಣಚೂರು ಕ್ಯಾಂಪ್ ಕಾರ್ಡನ್ನು ನೀಡಲಾಗುವುದು ಅಲ್ಲದೇ ಅಭಾ ಕಾರ್ಡನ್ನು ಉಚಿತವಾಗಿ ಆಧಾರ್ ಕಾರ್ಡ್ ಪ್ರತಿ ನೀಡಿದವರಿಗೆ ಕೊಡಲಾಗುವುದು ಎಂದು ಹೇಳಿದರು.

ನ್ಯಾಷನಲ್ ವೆಲ್ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವೈದ್ಯಕೀಯ ಸೇವೆ, ಬಡವರಿಗೆ ಉಚಿತ ಆರೋಗ್ಯ ತಪಾಸಣೆ, ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಕಡಿಮೆ ದರದಲ್ಲಿ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

. ಮಾಜಿ ಸಚಿವ ಸಗೀರ್ ಅಹ್ಮದ್, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ರಿಯಾಜ್ ಖಾನ್ ಮತ್ತು ಪದಾಕಾರಿಗಳು, ಸಿಪಿಐ ಮುಖಂಡ ಅಮ್ಜದ್, ಜೆಡಿಎಸ್ ಮುಖಂಡ ನಿಸಾರ್, ನಗರಸಭೆ ಸದಸ್ಯ ಶಾದಾಬ್ ಅಲಂಖಾನ್, ಆಶ್ರಯ ಸಮಿತಿ ಸದಸ್ಯ ಫೈಯಾಜ್ ಅಹ್ಮದ್, ಸಿರಾಜ್ ಖಾನ್, ನಜೀರ್ ಅಹ್ಮದ್, ಎಂ.ಕೆ ನಿಸಾರ್. ಕಮಿಟಿ ಉಪಾಧ್ಯಕ್ಷ ಸೈಯದ್ ಗೌಸ್ ಮೋಹಿದ್ದೀನ್ ಶಾಖಾದ್ರಿ, ಕಾರ್ಯದರ್ಶಿ ಶಫೀಹುಲ್ಲಾ, ಅಫರಫ್ ನವಾಜ್, ಮೊಹಮ್ಮದ್ ಯೂನುಸ್ ಸಲೀಮ್, ಬಿ.ಎ ಅಕ್ಮಲ್, ಅಹ್ಮದ್ ಖುರುಶಿ, ಅನ್ವರ್‌ಆಲಿ, ಫರ್ವೀಜ್, ಅಸ್ಲಾಂ, ಫೈಯಾಜ್ ಅಹ್ಮದ್, ಮೊಹಮ್ಮದ್ ಜಿಯಾ, ನವೀದ್ ಪಾಶಾ, ರಫೀಕ್ ಅಹ್ಮದ್, ಸುಹೀಲ್ ತಾಜ್, ಮೊಹಮ್ಮದ್ ಇಶ್ರದ್ ಮತ್ತಿತರರು ಉಪಸ್ಥಿತರಿದ್ದರು.

Everyone should pay more attention to health.

Share

Leave a comment

Leave a Reply

Your email address will not be published. Required fields are marked *

Don't Miss

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ತೋಟ ಹಾಗೂ ಮನೆಯ ಕೆಲಸಗಾರನಾಗಿ ಸುಮಾರು ಎರಡು ವರ್ಷಗಳಿಂದ ನಂಬಿಕಸ್ಥನಾಗಿದ್ದ ವ್ಯಕ್ತಿಯೊಬ್ಬನೇ ಮಾಲೀಕರ ಮನೆಯ ಲಾಕರ್‌ನಿಂದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು...

200 ರೂ.ಸಾಲ ನೀಡಿಲ್ಲ ಎಂದು ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೆ ಯತ್ನ

ತರೀಕೆರೆ: ಕೇವಲ ಇನ್ನೂರು ರೂಪಾಯಿ ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ತಲೆಯ ಹಿಂಭಾಗಕ್ಕೆ ಸುತ್ತಿಗೆಯಿಂದ ಜಜ್ಜಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜೋಡಿ ಗೋವಿಂದಪ್ಪ...

Related Articles

ಪ್ರತ್ಯೇಕ ರೈತ ಸಂಘಟನೆ ಘೋಷಣೆಗೆ ನಿರ್ಧಾರ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ರೈತ ಸಂಘದಲ್ಲಿ ಸಕ್ರೀಯರಾಗಿದ್ದ...

ಎರಡು ಪ್ರತ್ಯೇಕ ಪೋಕೋ ಪ್ರಕರಣದಲ್ಲಿ ಇಬ್ಬರ ಬಂಧನ

ಬಾಳೆಹೊನ್ನೂರು: ಅಪ್ರಾಪ್ತರ ಮೇಲಿನ ದೌರ್ಜನ್ಯ ಕುರಿತಂತೆ 2 ಪ್ರತ್ಯೇಕ ಪೋಕೋ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಾಳೆಹೊನ್ನೂರು...

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು....