Home namma chikmagalur chikamagalur ನಾಮಫಲಕದಲ್ಲಿ ಕನ್ನಡ ಖಡ್ಡಾಯಕ್ಕೆ ಆಗ್ರಹಿಸಿ ಕನ್ನಡ ಸೇನೆ ಮನವಿ
chikamagalurHomeLatest Newsnamma chikmagalur

ನಾಮಫಲಕದಲ್ಲಿ ಕನ್ನಡ ಖಡ್ಡಾಯಕ್ಕೆ ಆಗ್ರಹಿಸಿ ಕನ್ನಡ ಸೇನೆ ಮನವಿ

Share
Share

ಚಿಕ್ಕಮಗಳೂರು: ಕನ್ನಡ ನಾಮಫಲಕದಲ್ಲಿ ಶೇ. ೬೦ ಮತ್ತು ಆಂಗ್ಲಭಾಷೆಗೆ ಶೇ. ೪೦ ರಷ್ಟು ಇರಬೇಕೆಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ತಪ್ಪದೆ ಪಾಲಿಸುವಂತೆ ಆಗ್ರಹಿಸಿ ಬುಧವಾರ ಕನ್ನಡಸೇನೆ ಪದಾಧಿಕಾರಿಗಳು ಸಿರಸ್ತೆದಾರು ಮನು ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ನಂತರ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಗೆ ಧಕ್ಕೆ ತರುವ ಪ್ರಯತ್ನಗಳು ದೊರೆಯುತ್ತಿದ್ದು ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ತಾವು ೨೦೨೩ ರಲ್ಲಿ ಮುಖ್ಯ ಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ರವರು ಕನ್ನಡ ನಾಮಫಲಕದಲ್ಲಿ ಶೇ. ೬೦/೪೦ ರ ಅನುಪಾತದಲ್ಲಿ ಕನ್ನಡ ಭಾಷೆ ಇರಬೇಕೆಂದು ತಿಳಿಸಿದ್ದೀರಿ.

ಇತ್ತೀಚೆಗೆ ಸರ್ಕಾರದ ಈ ಆದೇಶವನ್ನು ಗಾಳಿಗೆ ತೂರಿ ವಾಣಿಜ್ಯ ಉದ್ಯಮಗಳು ನಾಮಫಲಕದಲ್ಲಿ ಕನ್ನಡ ಕಡ್ಡಾಯ ಎಂಬುವುದನ್ನು ಮರೆತಿದ್ದಾರೆ, ಕೂಡಲೇ ಅಂತವರ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ನಗರಸಭಾ ಪೌರಾಯುಕ್ತರು, ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಕನ್ನಡ ಸೇನೆ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ರಾಜ್ಯದ ಎಲ್ಲಾ ಆಂಗ್ಲಮಾಧ್ಯಮ ಶಾಲಾ-ಕಾಲೇಜುಗಳಲ್ಲಿ ನಾಡ ಗೀತೆಯನ್ನು ಕಡ್ಡಾಯಗೊಳಿಸಬೇಕು, ಈ ಆದೇಶವನ್ನು ಪಾಲಿಸದ ಶಾಲಾ-ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಪೂರ್ಣಪ್ರಮಾಣದ ವೈದ್ಯರು, ದಾದಿಯರು ಹಾಗೂ ಎಲ್ಲಾ ರೀತಿಯ ಔಷಧಿಗಳನ್ನು ಸರಬರಾಜು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಆಟೋ ಅಧ್ಯಕ್ಷ ಜಯಪ್ರಕಾಶ್, ಎಂ.ಟಿ ಮರಬೈಲು ಜಗಧೀಶ್, ನಗರಾಧ್ಯಕ್ಷ ಸತೀಶ್, ಹರಿಶಂಕರ್, ಹುಣಸೆಮುಕ್ಕಿ ಲಕ್ಷ್ಮಣ್, ಪ್ರಸನ್ನ, ಹರೀಶ್, ಪಾಲಾಕ್ಷ, ಅನ್ವರ್, ಪಾಪಣ್ಣ, ಲವ, ನವೀನ್, ಸಂಜೀವ್, ಚೇತನ್ ಉಪಸ್ಥಿತರಿದ್ದರು.

Kannada Army appeals for Kannada to be mandatory on nameplates

Share

Leave a comment

Leave a Reply

Your email address will not be published. Required fields are marked *

Don't Miss

ನಕಲಿ ಐಎಎಸ್ ಅಧಿಕಾರಿ ಮಿಥುನ್ ನಿಂದ ವಕೀಲರಿಗೆ ವಂಚನೆ

ಚಿಕ್ಕಮಗಳೂರು: ಕಾಫಿನಾಡಿನ ಮೆಡಿಕಲ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ನಕಲಿ ಐಎಎಸ್ ಅಧಿಕಾರಿ ಮಿಥುನ್ ವಂಚನೆಯ ಒಂದೊಂದೇ ಕರಾಳ ಮುಖಗಳು ಈಗ ಬಯಲಾಗುತ್ತಿವೆ. ಕೇವಲ ಉದ್ಯಮಿಗಳನ್ನಷ್ಟೇ ಅಲ್ಲದೆ, ಕಾನೂನು ಅರಿವಿರುವ ವಕೀಲರನ್ನೂ...

ಲೋಕಾಯುಕ್ತಾ ಬಲೆಗೆ ಲಿಂಗದಳ್ಳಿ ಆರ್.ಐ.

ತರೀಕೆರೆ: ರಮೇಶ ಲಿಂಗದಳ್ಳಿ ಜೊತೆಗೆ ಅಮೃತಾಪುರ ಇನ್ ಛಾರ್ಜ್ ಕರ್ತವ್ಯ ನಿರ್ವಾಣೆ ಮಾಡುವಾಗ ರೈತ ಕುಮಾರ್ ಎಂಬುವರಿಂದ ಲಂಚ ಪಡೆಯುತ್ತಿದಾಗ ‌ಆರ್.ಐ.ರಮೇಶ್ ಮತ್ತು ಸಹಾಯಕ ಸಂತೋಷ ನಾಯ್ಕ ಲೋಕಾಯುಕ್ತಾ ಬಲೆಗೆ ಬಿದ್ದಿದ್ದಾರೆ....

Related Articles

ಗ್ರಾಮೀಣ ಪ್ರದೇಶದಲ್ಲಿ ಅರಳಿದ “ತನ್ವಿತಾ” ಎಂಬ ಐ.ಐ.ಟಿ.ಪ್ರತಿಭೆ

ಅಜ್ಜಂಪುರ: ಅಜ್ಜಂಪುರ ಎಂದರೆ ಜಾನಪದ ಕಲೆಗಳ ತವರೂರು, ನಾಟಕ ಪ್ರತಿಭೆ, ಸಾಹಿತ್ಯ, ಸಂಸ್ಕೃತಿಗಳ ನೆಲೆವೀಡು ಅಂದು...

ಜಿಂಕೆ ಬೇಟೆ ಮೂವರ ನ್ಯಾಯಾಂಗ ಬಂಧನ

ಚಿಕ್ಕಮಗಳೂರು: ಜಿಂಕೆ ಜಾತಿಯ ವನ್ಯಪ್ರಾಣಿಯೊಂದನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ...

ಮೂರು ವರ್ಷಗಳ ಅವಧಿಯಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ

ಚಿಕ್ಕಮಗಳೂರು: ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿ, ಸೇತುವೆ, ಬಸ್ ನಿಲ್ದಾಣ ನಿರ್ಮಾಣ ಸೇರಿ...

ಚಿಕಿತ್ಸೆ ಸಿಗದೆ 24 ಗಂಟೆಗಳ ಕಾಲ ಆಂಬುಲೆನ್ಸ್‌ನಲ್ಲೇ ನರಕಯಾತನೆ

ಚಿಕ್ಕಮಗಳೂರು: ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಹಾಗೂ ಅತ್ಯಂತ ಕರುಣಾಜನಕ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರಿನಲ್ಲಿ...