Home namma chikmagalur chikamagalur ಸೀತಾಳಯ್ಯನಗಿರಿಯಲ್ಲಿ ಜೀಪ್ ಚಾಲಕರ ಪರಸ್ಪರ ಹೊಡೆದಾಟ
chikamagalurHomeLatest Newsnamma chikmagalur

ಸೀತಾಳಯ್ಯನಗಿರಿಯಲ್ಲಿ ಜೀಪ್ ಚಾಲಕರ ಪರಸ್ಪರ ಹೊಡೆದಾಟ

Share
Share

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಯ ಸಮೀಪದ ಸೀತಾಳಯ್ಯನಗಿರಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಜೀಪ್ ಚಾಲಕರು ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.

ವಾರಾಂತ್ಯದ ದಿನಗಳಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿಯ ಈ ಸುಂದರ ತಾಣಗಳಿಗೆ ಭೇಟಿ ನೀಡಲು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರಸ್ತುತ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿ ಶಿಖರದವರೆಗೆ ಪ್ರವಾಸಿಗರ ಸ್ವಂತ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು,

ಅಲ್ಲಿಗೆ ತೆರಳುವವರು ಕಡ್ಡಾಯವಾಗಿ ಖಾಸಗಿ ಜೀಪ್‌ಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಇದೇ ಕಾರಣವನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಜೀಪ್ ಚಾಲಕರ ಉಪಟಳ ದಿನೇ ದಿನೇ ಮಿತಿಮೀರುತ್ತಿದ್ದು, ಸ್ಥಳದಲ್ಲಿ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರು ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿಯೊಂದಿಗೂ ಅವರು ಪದೇ ಪದೇ ಅನುಚಿತವಾಗಿ ವರ್ತಿಸುತ್ತಿದ್ದಾರೆ.

ಈ ಗಲಾಟೆ ಮತ್ತು ಗೊಂದಲಗಳಿಂದಾಗಿ ದೂರದ ಊರುಗಳಿಂದ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಬರುವ ಪ್ರವಾಸಿಗರು ತೀವ್ರ ಮುಜುಗರ ಹಾಗೂ ಆತಂಕ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪ್ರವಾಸಿಗರ ವಾಹನಗಳನ್ನೇ ನೇರವಾಗಿ ಮುಳ್ಳಯ್ಯನಗಿರಿವರೆಗೆ ಕೊಂಡೊಯ್ಯಲು ಪುನಃ ಅವಕಾಶ ಕಲ್ಪಿಸಿಕೊಡಬೇಕೆಂಬ ಬಲವಾದ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Jeep drivers fight each other in Seethalaiyanagiri

Share

Leave a comment

Leave a Reply

Your email address will not be published. Required fields are marked *

Don't Miss

ಬಾಲ್ಯ ವಿವಾಹ ತಡೆಯಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ

ಚಿಕ್ಕಮಗಳೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಬಾಲ್ಯ ವಿವಾಹ ತಡೆಯಲು ಹೋದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ...

ಅರಣ್ಯದಲ್ಲಿ ಅಪರಿಚಿತ ವೃದ್ಧನ ಶವ ಪತ್ತೆ 

ಕೊಟ್ಟಿಗೆಹಾರ : ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಅರಣ್ಯ ಪ್ರದೇಶದಲ್ಲಿ ಸುಮಾರು 65 ರಿಂದ 70 ವರ್ಷದೊಳಗಿನ ಅಪರಿಚಿತ ವೃದ್ಧನ ಶವ ಪತ್ತೆಯಾಗಿದೆ. ಕಳೆದ ಮೂರು–ನಾಲ್ಕು ದಿನಗಳಿಂದ ರಸ್ತೆ ಬದಿಯ...

Related Articles

ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !

ಬಿ.ಎಲ್.ಶಂಕರ್ ಕಾಂಗ್ರೆಸ್ ನ ರಾಜ್ಯ ನಾಯಕರು ನಿಜ,ಆದರೆ ಇವರು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಕಡ್ಡಿ...

ಪ್ರವಾಸಿಗರ ಟೆಂಪೊ ಟ್ರ್ಯಾವೆಲರ್ ನಿಯಂತ್ರಣ ತಪ್ಪಿ ಪಲ್ಟಿ

ಚಿಕ್ಕಮಗಳೂರು: ಮಂಗಳೂರಿನಿಂದ ಹೊರನಾಡಿಗೆ ಆಗಮಿಸಿದ್ದ ಪ್ರವಾಸಿಗರ ಟೆಂಪೊ ಟ್ರ್ಯಾವೆಲರ್ (ಟಿಟಿ) ವಾಹನ ತಡರಾತ್ರಿ ಹೊರನಾಡು ಸಮೀಪದ ಭಾಮಿ...

ಭೈರಾಪುರ ಗ್ರಾಮದಲ್ಲಿ ಜಾತಿ ನಿಂದನೆ ಪ್ರಕರಣ ದಾಖಲು

ತರೀಕೆರೆ: ತಮ್ಮದೇ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಅಕ್ರಮವಾಗಿ ಮುನ್ನುಗ್ಗಿ ಜಾತಿ ನಿಂದನೆ ಮಾಡಿ,...

ರಾಜಕೀಯ ಸಮರವಾಗಿ ಮಾರ್ಪಟ್ಟ ರಸ್ತೆ ಕಾಮಗಾರಿ ವೀಕ್ಷಣೆ ಪ್ರಕರಣ

ಚಿಕ್ಕಮಗಳೂರು: ರಸ್ತೆ ಕಾಮಗಾರಿ ವಿಚಾರವಾಗಿ ಆರಂಭವಾದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಬೀದಿ ಕಾಳಗವು...