Home namma chikmagalur chikamagalur ಮುಖ್ಯಮಂತ್ರಿಗಳಿಗೆ ಬಿಡದಿಯಲ್ಲಿ ಜನರನ್ನು ಎದುರಿಸಲು ಭಯವೇ?
chikamagalurHomeLatest Newsnamma chikmagalur

ಮುಖ್ಯಮಂತ್ರಿಗಳಿಗೆ ಬಿಡದಿಯಲ್ಲಿ ಜನರನ್ನು ಎದುರಿಸಲು ಭಯವೇ?

Share
Share

ಚಿಕ್ಕಮಗಳೂರು: ಒಬ್ಬ ಮುಖ್ಯಮಂತ್ರಿ ಜನರಿಂದ ದೂರ ಉಳಿಯುತ್ತೇನೆ ಎಂದರೆ ಏನರ್ಥ? ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಜನರ ಭಯವೇ? ಮತ್ತೇಕೆ ಬಿಡದಿಯ ರೈತರಿಂದ ಅವರು ದೂರವಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು. ಅವರು ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಡನೆ ಮಾತನಾಡುತ್ತಿದ್ದರು.

ರೈತ ಹೋರಾಟಕ್ಕೆ ನಾವು ರಾಜಕೀಯ ಬೆಂಬಲ ನೀಡುತ್ತಿದ್ದೇವೆ. ಇದು ರಾಜಕೀಯ ಹೋರಾಟವಾಗಿ ಪರಿವರ್ತನೆಗೊಂಡರೆ, ಆಗ ಮೂಲ ಹೋರಾಟಗಾರರು ಮತ್ತು ಮೂಲ ಸಮಸ್ಯೆ ಬದಿಗೆ ಸರಿಯುವಂತಾಗಬಹುದು. ಆ ರೀತಿ ಆಗಬಾರದು ಎನ್ನುವ ಕಾರಣದಿಂದ, ರೈತರ ಹೋರಾಟಕ್ಕೆ ರಾಜಕೀಯ ಬೆಂಬಲವನ್ನು ನೀಡುತ್ತಿದ್ದೇವೆ.

ನಾವು ಯಾರೂ ಅಭಿವೃದ್ಧಿ ವಿರೋಧಿಗಳಲ್ಲ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರು ಒಪ್ಪಿಗೆ ನೀಡಿದರೆ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ತರಲಿ. ಅವರ ಒಪ್ಪಿಗೆ ಇಲ್ಲದೆ, ವಿರೋಧದ ನಡುವೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಟೌನ್‌ಶಿಪ್ ಮಾಡಲು ಹೊರಟರೆ ಅದು ಪ್ರಜಾಪ್ರಭುತ್ವ ವಿರೋಧಿ, ರೈತ ವಿರೋಧಿ ನಡೆ ಎಂದು ರವಿ ಹೇಳಿದರು.

ಬಿಜೆಪಿ, ಜೆಡಿಎಸ್‌ಗಳ ಜೊತೆಗೆ, ಹಲವಾರು ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿವೆ. ಕಾಂಗ್ರೆಸ್ ಪಕ್ಷದಲ್ಲೇ ಬಹಳ ಜನ ನಮಗಿದು ಯಾಕೆ ಬೇಕಿತ್ತು ಎನ್ನುತ್ತಿದ್ದಾರೆ. ನಮ್ಮ ಭಾಗದ ರೈತರು ಶಾಂತಿಯುತ ಸತ್ಯಾಗ್ರಹ ಮಾಡುತ್ತಿದ್ದಾರೆಯೇ ಹೊರತು, ನಕ್ಸಲ್ ಮಾದರಿಯಲ್ಲಿ ಬಾಂಬ್, ಎಕೆ೪೭ ಇಟ್ಟುಕೊಂಡು ಹೋರಾಟ ಮಾಡುತ್ತಿಲ್ಲ ಎಂದು ರವಿ ಹೇಳಿದರು.

ಮುಖ್ಯಮಂತ್ರಿಗಳು ಯಾಕೆ ಹೀಗೆ ವರ್ತಿಸುತ್ತಿದ್ದಾರೆ? ಮಾಡಿಯೇ ಸಿದ್ದ ಅನ್ನೋದು ಸರ್ವಾಧಿಕಾರಿ ಮನಸ್ಥಿತಿಯನ್ನ ತೋರಿಸುತ್ತೆ. ನೀವು ಸರ್ವಾಧಿಕಾರಿಯಲ್ಲ. ನೀವೊಬ್ಬ ಮುಖ್ಯಮಂತ್ರಿ. ಸರ್ವಾಧಿಕಾರಿಯಂತೆ ವರ್ತನೆ ಮಾಡೋದಕ್ಕೆ ನಮ್ಮ ಸಂವಿಧಾನ ಅವಕಾಶ ನೀಡುವುದಿಲ್ಲ. ರೈತರನ್ನ ಎದುರು ಹಾಕಿಕೊಂಡರೆ ಯಾವ ಸರ್ಕಾರ ಉಳಿಯುತ್ತದೆ? ಇದುವರೆಗೆ ರೈತರನ್ನು ವಿರೋಧಿಸಿ, ಅವರನ್ನು ಎದುರು ಹಾಕಿಕೊಂಡಂತಹ ಯಾವ ಸರ್ಕಾರವೂ ಹೆಚ್ಚು ಕಾಲ ಉಳಿದಿಲ್ಲ. ರೈತ ವಿರೋಧಿಯಾಗಿ ವರ್ತನೆ ಮಾಡಿದರೆ ಸರ್ಕಾರದ ಆಯುಸ್ಸು ಕಡಿಮೆ ಆಗುತ್ತದೆ ಎಂದರು.

Is the Chief Minister afraid to face the people in Bidadi?

Share

Leave a comment

Leave a Reply

Your email address will not be published. Required fields are marked *

Don't Miss

1 ಕೆ.ಜಿ ಚಿನ್ನ ಕೊಡುವ ಆಮಿಷ ಪ್ರಕರಣದಲ್ಲಿ ₹10 ಲಕ್ಷ ವಂಚನೆ

ಕಡೂರು: 900 ವರ್ಷಗಳ ಹಳೆಯ ಒಂದು ಕೆ.ಜಿ.ಯಷ್ಟು ಚಿನ್ನ ಕೊಡುವುದಾಗಿ ನಂಬಿಸಿ ಕೇರಳದ ವ್ಯಕ್ತಿಯಿಂದ ₹10 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಸಖರಾಯಪಟ್ಟಣ ಠಾಣೆಯಲ್ಲಿ ದಾಖಲಾಗಿದೆ. ಕೇರಳ ಕಣ್ಣೂರು ಜಿಲ್ಲೆಯ ನೀರಕಡುವು...

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಹುಲಿ ….?

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇತ್ತೀಚೆಗೆ ಹುಲಿಯೊಂದು ಉರುಳಿಗೆ ಬಿದ್ದ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೆರಡು ಹುಲಿಗಳು ಪತ್ತೆಯಾಗುವ ಮೂಲಕ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಏಳುನೂರುಖಾನ್ ಎಸ್ಟೇಟ್ ಬಳಿ ನಿಗಾ ಇರಿಸಲು...

Related Articles

ಜಿಲ್ಲೆಗೆ ಬೆನ್ನುಬಿದ್ದ ಜಾರ್ಜ್ ನಿಂದ ಮತ್ತೆ ಎರಡು ವರ್ಷ ಬೇತಾಳ ಕಾಟ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಮತ್ತೆ ಜಾರ್ಜ್ ರನ್ನು ನೇಮಕ ಮಾಡಿ‌ ಸರ್ಕಾರ ಆದೇಶ...

ಅಂದರ್-ಬಾಹರ್ ಅಡ್ಡೆ ಮೇಲೆ ಪೊಲೀಸರ ದಾಳಿ – ಐವರ ಬಂಧನ

ಚಿಕ್ಕಮಗಳೂರು: ಹೊರವಲಯದ ಹುಕ್ಕುಂದ ಗ್ರಾಮದ ಖಾಲಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ...

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ...