Home namma chikmagalur chikamagalur ಮಹಮದ್ ಅನ್ವರ್ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ
chikamagalurHomeLatest Newsnamma chikmagalur

ಮಹಮದ್ ಅನ್ವರ್ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

Share
Share

ಚಿಕ್ಕಮಗಳೂರು : ಕಳೆದ ಎಂಟು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸಿದ್ದ ಕೇಬಲ್ ನೆಟ್‌ವರ್ಕ್ ಉದ್ಯಮಿ ಉಪ್ಪಳ್ಳಿಯ ಮಹಮದ್ ಅನ್ವರ್ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಮೃತನ ಸಹೋದರ ಅಬ್ದುಲ್ ಕಬೀರ್ ಆಗ್ರಹಿಸಿದರು.

ಅವರು ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ೨೦೧೮ರ ಜೂ.೨೨ ರಂದು ನಗರದ ಗೌರಿ ಕಾಲುವೆ ಬಡಾವಣೆ ಗುಡ್‌ಮಾರ್ನಿಂಗ್ ಶಾಪ್ ಬಳಿ ದುಷ್ಕರ್ಮಿಗಳು ಡ್ರ್ಯಾಗನ್ ಮತ್ತು ಚಾಕುವಿನಿಂದ ಇರಿದು ಭರ್ಬರವಾಗಿ ಕೊಲೆ ಮಾಡಿದ್ದರೆಂದು ಹೇಳಿದರು.

ಕೊಲೆ ನಡೆದು ೮ ವರ್ಷಗಳು ತುಂಬಿದ್ದರೂ ಪೊಲೀಸ್ ಇಲಾಖೆ, ಸಿಐಡಿ ಇಲಾಖೆ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸದೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ವಿಫಲರಾಗಿರುವುದರಿಂದ ಕುಟುಂಬವು ಕಂಗಾಲಾಗಿ ಚಿಂತಾಜನಕ ಸ್ಥಿತಿಯಲ್ಲಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ಕೊಲೆಗಾರರನ್ನು ಜೈಲಿಗೆ ತಳ್ಳುವವರೆಗೂ ವಿಶ್ರಮಿಸದೆ ಹೋರಾಟ ಮುಂದುವರೆಸುತ್ತೇನೆ. ಈಗಾಗಲೇ ಶಂಕಿತ ೭ ಆರೋಪಿಗಳ ಪೈಕಿ ಮೂವರು ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಿದ್ದು, ನ್ಯಾಯಾಲಯ ಅಧಿಕೃತವಾಗಿ ಆದೇಶ ನೀಡುತ್ತಿಲ್ಲ ಎಂದು ವಿವರಿಸಿದರು.

ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತನಿಖಾ ಸಂಸ್ಥೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಲೆ ಪ್ರಕರಣ ನಡೆದು ಇದುವರೆಗೂ ತನಿಖೆ ಪೂರ್ಣಗೊಳ್ಳದಿರುವ ಬಗ್ಗೆ ಕಾರಣವೇನೆಂದು ಪ್ರಶ್ನಿಸಿದ ಅವರು ೫ ವರ್ಷಗಳಿಂದ ಸಿಐಡಿ ತನಿಖೆ ನಡೆಸಿದರೂ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಭವೇಕೆ ಎಂದರಲ್ಲದೆ, ಕೂಡಲೆ ಸಿಬಿಐ ತನಿಖೆ ನಡೆಸಿ ಸಮಗ್ರ ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬೆನಡಿಕ್ಟ್ ಜೇಮ್ಸ್, ಅಬ್ದುಲ್ ಮಜೀದ್, ನಜೀರ್ ಉಪಸ್ಥಿತರಿದ್ದರು.

Demand for CBI investigation into Mohammad Anwar murder case

Share

Leave a comment

Leave a Reply

Your email address will not be published. Required fields are marked *

Don't Miss

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ತರಾತುರಿಯಲ್ಲಿ ಮನೆಗೆ ಬೀಗ ಹಾಕದೆ ಹೊರಟ ದಂಪತಿಯ ನಿರ್ಲಕ್ಷ್ಯವನ್ನು ಬಂಡವಾಳ ಮಾಡಿಕೊಂಡ ಕಳ್ಳರು, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತವೇರಿಯಲ್ಲಿ...

ಲೋನ್ ಬಾಕಿ ವಸೂಲಾತಿಗಾಗಿ ಹೋಗಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಕಾರು ಲೋನ್ ಬಾಕಿ ವಸೂಲಾತಿಗಾಗಿ ಹೋಗಿದ್ದ ಬೆಂಗಳೂರಿನ ಕಾರ್ ಚಾಲಕ ಯಶ್ವಂತ್ ಎಂಬ ಯುವಕನು ಗೂಡ್ಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವ ದುರದೃಷ್ಟಕರ ಘಟನೆ ಸಕ್ಕರಾಯಪಟ್ಟಣ ಠಾಣಾ ವ್ಯಾಪ್ತಿಯ ಹಿರೇಗೌಜ ಗೇಟ್ ಬಳಿ...

Related Articles

ಪೊಲೀಸರು ಕಿರುಕುಳ ಖಂಡಿಸಿ ಬೀರೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ

ಬೀರೂರು:  ಪ್ರೇಮಿಗಳು ನಾಪತ್ತೆಯಾಗಲು ಸಹಕಾರ ನೀಡಿದ್ದ ಎಂಬ ಆರೋಪದ ಮೇಲೆ ಯುವಕನನ್ನು ಠಾಣೆಗೆ ಕರೆಸಿ ಪೊಲೀಸರು...

ನೋಟರಿ ವಿ.ಕೆ.ರಘುಯಿಂದ ನೀರಿನ ಮೇಲೆ ತೇಲುತ್ತಾ ಯೋಗ ಭಂಗಿ ಪ್ರದರ್ಶನ

ಚಿಕ್ಕಮಗಳೂರು: ಯೋಗ ಸಾಧಕ ನಗರದ ವಕೀಲ ಹಾಗೂ ನೋಟರಿ ವಿ.ಕೆ.ರಘು ಅವರು  ಅಂತರಾಷ್ಟ್ರೀಯ ಯೋಗ ದಿನಾಚರಣೆ...

ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

ಕಡೂರು: ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನ ಬೀರೂರು ಪೊಲೀಸ್...

ಮಳೆ ಅಭಾವ-ರೈತರ ಕಣ್ಣಲ್ಲಿ ದುಃಖ-ಜನ ಜಾನುವಾರು ಕಂಗಾಲು

ಚಿಕ್ಕಮಗಳೂರು:  ಬಾರೋ,ಬಾರೋ ಮಳೆರಾಯ .ಜನ,ದನ,ಕರುಗಳಿಗೆ ನೀರಿಲ್ಲ,ತೋಟ,ಗದ್ದೆಗಳಿಗೆ ನೀರಿಲ್ಲ ಎಂದು ರೈತರು ಮತ್ತು ಜನಸಾಮಾನ್ಯರು ಒಮ್ಮೆ ಅಕಾಶದ...