Home ಜಿಲ್ಲೆಗೆ ಬೆನ್ನುಬಿದ್ದ ಜಾರ್ಜ್ ನಿಂದ ಮತ್ತೆ ಎರಡು ವರ್ಷ ಬೇತಾಳ ಕಾಟ
Home

ಜಿಲ್ಲೆಗೆ ಬೆನ್ನುಬಿದ್ದ ಜಾರ್ಜ್ ನಿಂದ ಮತ್ತೆ ಎರಡು ವರ್ಷ ಬೇತಾಳ ಕಾಟ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಮತ್ತೆ ಜಾರ್ಜ್ ರನ್ನು ನೇಮಕ ಮಾಡಿ‌ ಸರ್ಕಾರ ಆದೇಶ ಮಾಡಿದೆ.

ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಜಾರ್ಜ್ ಉಸ್ತುವಾರಿ ಯಾಗಿ ಬಂದೆ ಪುಟ್ಟ ಹೋದೆ ಪುಟ್ಟ ಎಂದು ಹೇಳುಬುದು ಬಿಟ್ಟು ಬೇರೇನೂ ಎಂದರೆ ಕಾಫಿ ತೋಟದ ಉಸ್ತುವಾರಿ ಮಾತ್ರ ಸುಲಲಿತವಾಗಿ ಸಾಗಿದೆ ಎನ್ನಿಸುತ್ತದೆ.

ಜಾರ್ಜ್ ಗೆ ವಯಸ್ಸಿನ ಸಮಸ್ಯೆ, ಭಾಷೆ ಸಮಸ್ಯೆ ಜಿಲ್ಲೆಯ ಉಸ್ತುವಾರಿ ಸರಿಯಾಗಿ ನಿಭಾಯಿಸಲು ಸಾಧ್ಯವಾಗಿಲ್ಲ. ಹೈಕಾಮ್ಯಾಂಡ್ ಶ್ರೀ ರಕ್ಷೆ,ಶ್ರೀ ಮಂತಿಕೆಯ ಬಲವಿರುವುದು ಕಾಂಗೈಗಳು ಜೈ ಹುಜೂರು ಎನ್ನುವುದು ಬಿಟ್ಟು ಬೇರೇನೂ ಮಾಡಲು ‌ಸಾಧ್ಯವಿಲ್ಲ.

ಜಿಲ್ಲೆಗೆ ಜಾರ್ಜರಿಂದ ನಯಾ ಪೈಸೆ ಉಪಯೋಗ ಇಲ್ಲ ನಿಜ ಆದರೆ ಅವರ ಸ್ವಂತ ಕಾಫಿ ತೋಟ ವಿಸ್ತರಣೆಗೆ ತೊಂದರೆ ಇಲ್ಲ. ಕಳೆದ ಮೂರು ವರ್ಷಗಳಿಂದ ಯಾವುದೇ ಸಮಸ್ಯೆ ಬಗ್ಗೆ ಜನ ಅಳಲು ತೊಡಗಿಕೊಂಡರು ಅಧಕಾರಿಗಳ ಕಡೆ ಕೈ ತೋರಿಸುವ ಜಾರ್ಜ್ ಬಂದು‌ ಹೋಗುವುದು ಹೆಲಿಕಾಪ್ಟರ್ ನಲ್ಲಿ ಈಗಾಗೀ ಜನರ ಸಮಸ್ಯೆ ಅರಿಯುವುದು ಸಾಧ್ಯವಿಲ್ಲ.

ಜಿಲ್ಲೆಯಲ್ಲಿ ಮಳೆ ಬಾರದೆ ರೈತರು,ಜನರು ಕಣ್ಣ್,ಕಣ್ಣ್ ಬಿಡುತ್ತಿದ್ದಾರೆ.ಏನಾಗಿದೆ ಎಂಬ ಸಾಮಾನ್ಯ ಸ್ಪಂದನೆ ಕೂಡ ಇಲ್ಲ. ಕಳೆದ ಮೂರು ತಿಂಗಳಿಂದ ನಾಪತ್ತೆಯಾಗಿದ್ದು ವಿದ್ಯುತ್ ಇಲಾಖೆ ಖಾಸಗಿಯವರಿಗೆ ಮಾರುವ ಹುನ್ನಾರಾ ನಡೆದಿರುವುದರಲ್ಲಿ ಎಷ್ಟು ಪಾಲು ದೊರೆಯುತ್ತದೆ ಎಂಬ ಲೆಕ್ಕಾಚಾರದಲದಲಿದ್ದಾರೆ ಎಂದು ಕಾಂಗ್ರೆಸ್ ನ ಮುಖಂಡರು ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಜಿಲ್ಲೆಯಲ್ಲಿ ಒತ್ತುವರಿ ಸಮಸ್ಯೆ ಕಾಡು ಪ್ರಾಣಿಗಳ ಕಾಟ ಪ್ರವಾಸಿಗರಿಂದ ವ್ಯಬಿಚಾರ ಡ್ರಗ್ಸ್ ದಂಧೆ ಎಗ್ಗಿಲಗಲದೆ ನಡೆದರು ಕೇಳುವವರು ಇಲ್ಲ ಬಿಡಿ ಎನ್ನುವಂತಾಗಿದೆ.ಯಾಥಾ ರಾಜ ಥತಾ ಅಧಿಕಾರಿಗಳು ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ

Two more years of trouble for George who turned his back on the district

Share

Leave a comment

Leave a Reply

Your email address will not be published. Required fields are marked *

Don't Miss

ಅಪಘಾತದಲ್ಲಿ ಸಾವು: ಚಾಲಕನಿಗೆ 9 ತಿಂಗಳು ಸಜೆ

ಚಿಕ್ಕಮಗಳೂರು: ಅತೀ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಚಾಲಕನಿಗೆ ನಗರದ ಒಂದನೇ ಅಧಿಕ ಹಿರಿಯ ಸಿ.ಜೆ....

ದ್ವಿಚಕ್ರ ವಾಹನ ಡಿಕ್ಕಿ-ಪಾದಚಾರಿ ಯುವಕ ಸಾವು

ಚಿಕ್ಕಮಗಳೂರು: ತಾಲೂಕಿನ ಕುರುಬರಹಳ್ಳಿ ಗ್ರಾಮದ ಸಮೀಪ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವಕ ಮೃತಪಟ್ಟಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮಾಚೇನಹಳ್ಳಿ ಗ್ರಾಮದ...

Related Articles

100 ಅಡಿ ಪ್ರಪಾತಕ್ಕೆ ಉರುಳಿದ 10 ಚಕ್ರದ ಲಾರಿ

ಚಿಕ್ಕಮಗಳೂರು: ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ೧೦ ಚಕ್ರದ ಲಾರಿಯೊಂದು ರಸ್ತೆ ಪಕ್ಕದ...

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ...

ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

ಚಿಕ್ಕಮಗಳೂರು:  ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌ ಕರರಿಗೆ ಕಾರ್ಮಿಕ ಆಯುಕ್ತರ ಆದೇಶದಂತೆ ಕನಿಷ್ಟ ವೇತನ...