Home namma chikmagalur chikamagalur ಮನೆ ಬೀಗ ಒಡೆದು ಚಿನ್ನ, ಬೆಳ್ಳಿ ಹಾಗೂ ನಗದು ಕಳವು
chikamagalurHomeLatest Newsnamma chikmagalur

ಮನೆ ಬೀಗ ಒಡೆದು ಚಿನ್ನ, ಬೆಳ್ಳಿ ಹಾಗೂ ನಗದು ಕಳವು

Share
Share

ಚಿಕ್ಕಮಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಒಡೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ. ಬೆಳವಾಡಿ ಗ್ರಾಮದ ಸಂಗಮೇಶ (60) ಎಂಬವರು ನೀಡಿದ ದೂರಿನ ಆಧಾರದ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಸಂಗಮೇಶ ಅವರು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯಲು ನ.17ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಪತ್ನಿ ನೇತ್ರಾವತಿ ಅವರೊಂದಿಗೆ ಹಾಸನಕ್ಕೆ ತೆರಳಿದ್ದರು. ಚಿಕಿತ್ಸೆ ಮುಗಿಸಿ ಊರಿಗೆ ಮರಳುವುದು ತಡವಾದ ಹಿನ್ನೆಲೆಯಲ್ಲಿ ಹಾಸನ ಸಮೀಪದ ನಿಟ್ಟೂರಿನಲ್ಲಿರುವ ತಮ್ಮ ಅತ್ತಿಗೆ ಮಂಜುಳಾ ಅವರ ಮನೆಯಲ್ಲಿ ಉಳಿದುಕೊಂಡಿದ್ದರು.

ನ.18ರಂದು ಬೆಳಗ್ಗೆ 6.45ರ ಸುಮಾರಿಗೆ ಮನೆಯ ಹಿಂಭಾಗದಲ್ಲಿರುವ ನಿವಾಸಿ ಮಲ್ಲೇಶ್ ಅವರು ದೂರವಾಣಿ ಕರೆ ಮಾಡಿ, ಮನೆಯ ಬೀಗ ಒಡೆದಿದ್ದು ಬಾಗಿಲು ತೆರೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಕೂಡಲೇ ಸಂಗಮೇಶ ಹಾಗೂ ಅವರ ಪತ್ನಿ ಬೆಳಗ್ಗೆ 8.30ರ ಸುಮಾರಿಗೆ ಬೆಳವಾಡಿಯ ಮನೆಗೆ ಬಂದು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕಳ್ಳರು ಮನೆಯ ಬೀರುವಿನಲ್ಲಿದ್ದ ಎರಡು ಗೋಲ್ಡ್ ಕೇಸ್ ವಾಚ್ಗಳು, ₹2,000 ನಗದು, 233 ಗ್ರಾಂ ತೂಕದ ಬೆಳ್ಳಿ ಲಕ್ಷ್ಮಿ ಮುಖ ಹಾಗೂ 30 ಗ್ರಾಂ ತೂಕದ ಬೆಳ್ಳಿ ದೀಪ ಸೇರಿದಂತೆ ಒಟ್ಟು 263 ಗ್ರಾಂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ ಅಂಗಡಿಯ ಚಿಲ್ಲರೆ ಡಬ್ಬದ ಹಣವನ್ನೂ ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನ.17ರಂದು ಬೆಳಗ್ಗೆ 10 ಗಂಟೆಯಿಂದ ನ.18ರಂದು ಬೆಳಗ್ಗೆ 6.45ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಳವುಗೊಳಗಾದ ಬೆಳ್ಳಿ ವಸ್ತುಗಳ ಸುಮಾರು 7-8 ವರ್ಷಗಳ ಹಿಂದಿನ ಮೌಲ್ಯ ₹13,650 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಳ್ಳತನ ಮಾಡಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂಗಮೇಶ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

House broken into gold silver and cash stolen

Share

Leave a comment

Leave a Reply

Your email address will not be published. Required fields are marked *

Don't Miss

ಸೈಕಲ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ವೃದ್ಧನಿಗೆ ಗಾಯ

ಕಡೂರು: ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ದ್ವಿಚಕ್ರ ವಾಹನ ಸವಾರನೊಬ್ಬ ಸೈಕಲ್‌ನಲ್ಲಿ ತೆರಳುತ್ತಿದ್ದ ವೃದ್ಧನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸದೆ ಸ್ಥಳದಿಂದ ಪರಾರಿಯಾಗಿರುವ ಘಟನೆ ಕಡೂರು ತಾಲ್ಲೂಕಿನ ಯಗಟಿಪುರ...

ಸ್ಟಿಂಗ್ ಆಪರೇಶನ್ ಸುಳಿಯಲ್ಲಿ” ಗ್ಯಾರಂಟಿ ” ಶಾಸಕರುಗಳು?

ಚಿಕ್ಕಮಗಳೂರು; ಸ್ಟಿಂಗ್ ಆಪರೇಶನ್ ಎಂಬ ಅಸ್ತ್ರ ಇತ್ತೀಚೆಗೆ ಬಾರಿ ಸದ್ದು ಮಾಡುತ್ತಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಸಚಿವ ಸಂಪುಟ ನಡೆಯುವ ಸಮಯದಲ್ಲಿ ಸ್ಟಿಂಗ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿರುವುದು ಫ್ಯಾಕ್ಟರಿ ಒನರ್...

Related Articles

ವಿಶ್ವೇಶ್ವರ ಭಟ್ ಸೇರಿಂದತೆ ಹಲವರ ಬಂದನಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹ

ಚಿಕ್ಕಮಗಳೂರು: ಬಸವಣ್ಣನವರ ಕುರಿತು ಆಧಾರರಹಿತ ಹಾಗೂ ಆಕ್ಷೇಪಾರ್ಹ ಆರೋಪಗಳನ್ನು ಮಾಡಿದ್ದಾರೆ ಎನ್ನಲಾದ ಲೇಖಕ ರವಿ ಹಂಜ್,...

ತರೀಕೆರೆಯಲ್ಲಿ ಟ್ರ್ಯಾಕ್ಟರ್ ಡಿಕ್ಕಿಗೆ ಬೈಕ್ ಸವಾರ ಸಾವು

ತರೀಕೆರೆ: ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಯುವಕ ಸ್ಥಳದಲ್ಲೇ...

ಕಡೂರಿನಲ್ಲಿ ಅಪರಿಚಿತ ಕಾರು ಡಿಕ್ಕಿಗೆ ಮಹಿಳೆ ಸಾವು

ಕಡೂರು: ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು...

ಜೀವರಾಜ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹೈಕೋರ್ಟ್‌ನಿಂದ ವಜಾ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ...