ಚಿಕ್ಕಮಗಳೂರು; ಸ್ಟಿಂಗ್ ಆಪರೇಶನ್ ಎಂಬ ಅಸ್ತ್ರ ಇತ್ತೀಚೆಗೆ ಬಾರಿ ಸದ್ದು ಮಾಡುತ್ತಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಸಚಿವ ಸಂಪುಟ ನಡೆಯುವ ಸಮಯದಲ್ಲಿ ಸ್ಟಿಂಗ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿರುವುದು ಫ್ಯಾಕ್ಟರಿ ಒನರ್ ಗೆ ಸ್ಟಾಕ್ ಎಷ್ಟಿದೆ ಎಂಬುದು ತಿಳಿದಿರುತ್ತದೆ ಎಂದು ವಿರೋಧ ಪಕ್ಷಗಳು ಕುಹಕವಾಡುತ್ತಿವೆ.
ಸಿ.ಎಂ.ಹೇಳಿದ ಒಂದು ವಾರದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಸ್ಟಿಂಗ್ ಆಪರೇಶನ್ ಬಗ್ಗೆ ಸ್ವತಃ ದೂರು ನೀಡುವ ತನಿಖೆಗೆ ಒತ್ತಯಿಸುವ ಸ್ಥಿತಿಯ ಜೊತೆಗೆ ತೆವಳುತ್ತಾ ಸಾಗಿರುವ ತನಿಖೆ ಹಲವು ಗುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ. ಇದಾದ ನಂತರ “ಚಪಲ ಚನ್ನಿಗರಾಯ” ಮಂತ್ರಿಗಳು ಮತ್ತು ಶಾಸಕರುಗಳಿಗೆ ನಡುಕ ಹುಟ್ಟಿದೆ.
ಮಂತ್ರಿಗಳು ಶಾಸಕರಿಗೆ ಸಿಗುವ ಸವಲತ್ತು ಮತ್ತು ಗಣಿ ಮಾಫಿಯಾ ನಶಾ ಲಾಭ,ಮೈ ತಳಕು,ಬಳಕು ಮಾಡುವ ಮಾಯಾಂಗನೆಯರು ತೋರಿಸುವ ಗಣಿಯೊಳಗೆ ನುಸುಳಿ ಹೋಗಿ ಹೊರ ಬಾರಲಾರದೇ ವಿಲಿ,ವಿಲಿ ಒದ್ದುಡುತ್ತಿರುವುದು ಖಚಿತ ಎನ್ನಲಾಗಿದೆ.. ರಾಜ್ಯದ ಹಲವು ಶಾಸಕರುಗಳ ಸಿ.ಡಿ.ಹರಿದಾಡುತ್ತವೆ ಎನ್ನುವಾಗಲೇ ಚಿಕ್ಕಮಗಳೂರು ಜಿಲ್ಲೆಯ ಮೂರು ಜನ ಶಾಸಕರು ಮತ್ತು ಮೂರು ಜನ ಮಾಜಿ ಶಾಸಕರುಗಳ” ಸ್ಟಿಂಗ್ “ನಡೆದಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ ಎನ್ನಲಾಗಿದೆ.
ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿರುವ ವಿಧಾನ ಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿಗಳ ಬಗ್ಗೆ ಸಿ.ಡಿ.ಕತೆಗಳನ್ನು ಹೇಳಲಾಗುತ್ತಿದೆ. ಮಲೆನಾಡು ಹೆಬ್ಬಾಗಿಲು ಎಂದು ಹೆಸರುವಾಸಿಯಾಗಿರುವ ಕ್ಷೇತ್ರದ ಶಾಸಕರು ಪದೇ,ಪದೇ ಲೋಕೋಪಯೋಗಿ ಸಚಿವರ ಕಛೇರಿಗೆ ಕರೆದು ಕೊಂಡು ಹೋಗಿ ಕೂರಿಸಿ ಕೊಳ್ಳುತ್ತಿದ್ದ ಬಗ್ಗೆ ಸಿಬ್ಬಂದಿ ತರಾವರಿ ಮಾತನಾಡುತ್ತಿದ್ದರು ಜೊತೆಗೆ ಇಲ್ಲಿನ ಮಾಜಿ ಶಾಸಕರ ಬಗ್ಗೆ ಕೂಡ ಇಂತಹ ಆರೋಪವಿದೆ
ಮೂಡುವ ಗೆರೆಯೊಳಗೆ ಹಲವು ಚಿತ್ತಾರಗಳನ್ನು ಬಿಡಿಸುವ ಕಲೆಗಾರ ಮತ್ತು ಸ್ಟಿಂಗ್ ಆಪರೇಶನ್ ಮಾಡಲು ಹೋಗಿ ಸಿಕ್ಕಿಕೊಂಡು ಕೋ ಬ್ರದರ್ ತಾಳಕ್ಕೆ ಕುಣಿಯುವ ಸ್ಥಿತಿಯಲ್ಲಿ ಇದ್ದಾರೆ ಎಂದು ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುವುದು ಗುಟ್ಟಾಗಿ ಉಳಿದಿಲ್ಲ.ಒಟ್ಟಾರೆ ಸ್ಟಿಂಗ್ ಬಗ್ಗೆ ಜಿಲ್ಲೆಯಲ್ಲೂ “ಮಹ ಮಾರಿಯಂತೆ ಅಬ್ಬರಿಸದಿದ್ದರು ಕೀಟದ ತರಹ ಕೊರೆಯುತ್ತಿದೆ ಎನ್ನಲಾಗಿದೆ.
Are the “guaranteed” MLAs caught in a sting operation?
Leave a comment