ಚಿಕ್ಕಮಗಳೂರು: ಪ್ರಸಿದ್ಧ ಶಕ್ತಿದೇವತೆ ಬಿಂಡಿಗ ದೇವೀರಮ್ಮನ ದರ್ಶನಕ್ಕಾಗಿ ಬೆಟ್ಟ ಏರುತ್ತಿದ್ದ ಭಕ್ತರೊಬ್ಬರು ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಕನ್ಯಾಡಿ ಗ್ರಾಮದ ನಿವಾಸಿ ಲಕ್ಷ್ಮಣ್ (32) ಎಂದು ಗುರುತಿಸಲಾಗಿದೆ.
ದೇವೀರಮ್ಮನ ದರ್ಶನ ಪಡೆಯುವ ಹಂಬಲದಿಂದ ಶ್ರದ್ಧಾಭಕ್ತಿಯಿಂದ ಬೆಟ್ಟ ಏರುತ್ತಿದ್ದ ವೇಳೆ ಲಕ್ಷ್ಮಣ್ ಅವರಿಗೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
ಪರಿಣಾಮವಾಗಿ ಅವರು ಬೆಟ್ಟದ ಹಾದಿಯಲ್ಲೇ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ದೇವಿಯ ದರ್ಶನ ಪಡೆಯುವ ಉತ್ಸಾಹದಿಂದ ಕುಟುಂಬದವರು ಹಾಗೂ ಭಕ್ತರೊಂದಿಗೆ ಆಗಮಿಸಿದ್ದ ಯುವಕ ಬೆಟ್ಟ ಏರುವ ಮಾರ್ಗಮಧ್ಯೆಯೇ ಸಾವನ್ನಪ್ಪಿರುವುದು ಭಕ್ತರಲ್ಲಿ ತೀವ್ರ ದುಃಖ ಮೂಡಿಸಿದೆ.
ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ಘಟನೆ ದೇವೀರಮ್ಮನ ದರ್ಶನಕ್ಕೆ ಆಗಮಿಸಿದ್ದ ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
Devotee dies of a heart attack while climbing Deviramma Hill
Leave a comment