Home namma chikmagalur chikamagalur ಸೈಕಲ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ವೃದ್ಧನಿಗೆ ಗಾಯ
chikamagalurCrime NewsHomeLatest Newsnamma chikmagalur

ಸೈಕಲ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ವೃದ್ಧನಿಗೆ ಗಾಯ

Share
Share

ಕಡೂರು: ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ದ್ವಿಚಕ್ರ ವಾಹನ ಸವಾರನೊಬ್ಬ ಸೈಕಲ್‌ನಲ್ಲಿ ತೆರಳುತ್ತಿದ್ದ ವೃದ್ಧನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸದೆ ಸ್ಥಳದಿಂದ ಪರಾರಿಯಾಗಿರುವ ಘಟನೆ ಕಡೂರು ತಾಲ್ಲೂಕಿನ ಯಗಟಿಪುರ ಸಮೀಪ ನಡೆದಿದೆ.

ಯಗಟಿಪುರ ಗ್ರಾಮದ ಪ್ರಸನ್ನ ಕುಮಾರ್ (ವಯಸ್ಸು 56) ಗಾಯಗೊಂಡವರು. ನವೆಂಬರ್ 13ರಂದು ಬೆಳಿಗ್ಗೆ 9 ಗಂಟೆಗೆ ತಮ್ಮ ಸೈಕಲ್‌ನಲ್ಲಿ ಪಿ. ಮಲ್ಲಾಪುರ ರಸ್ತೆಯಲ್ಲಿರುವ ತೋಟಕ್ಕೆ ತೆರಳಿದ್ದರು. ಬೆಳಿಗ್ಗೆ ಸುಮಾರು 9.30ರ ವೇಳೆಗೆ ಪುರ ಕಡೆಯಿಂದ ಪಿ. ಮಲ್ಲಾಪುರ ಕಡೆಗೆ ರಸ್ತೆಯ ಎಡಭಾಗದಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದಾಗ, ಹಿಂದಿನಿಂದ ಅತಿವೇಗವಾಗಿ ಬಂದ ಬೈಕ್ ಸವಾರ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಪ್ರಸನ್ನ ಕುಮಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಎಡಭಾಗದ ಸೊಂಟಕ್ಕೆ ಗಾಯವಾಗಿದೆ. ಅಪಘಾತದ ಬಳಿಕ ಬೈಕ್ ಸವಾರ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಷಯ ತಿಳಿದ ಪುತ್ರ ಮಲ್ಲಿಕಾರ್ಜುನ ಹಾಗೂ ಮೊಮ್ಮಗಳು ಜ್ಯೋತಿ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಕಡೂರು ಅರ್ಥೋಪೆಡಿಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಈ ಸಂಬಂಧ ಮಲ್ಲಿಕಾರ್ಜುನ ಅವರು ಯಗಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪಘಾತ ಎಸಗಿ ಪರಾರಿಯಾದ ಬೈಕ್ ಸವಾರನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದೂರಿನ ಮೇರೆಗೆ ಯಗಟಿ ಪೊಲೀಸರು ಠಾಣಾ ಮೊ.ನಂ. 127/2026ರ ಅಡಿಯಲ್ಲಿ ಬಿಎನ್‌ಎಸ್ ಕಲಂ 281, 125(a) ಹಾಗೂ ಐಎಂವಿ ಕಾಯ್ದೆಯ ಕಲಂ 187ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

An elderly man traveling on a bicycle was struck from behind by a two-wheeler.

Share

Leave a comment

Leave a Reply

Your email address will not be published. Required fields are marked *

Don't Miss

ಅನಂತ್ ಅಗಲಿಕೆ ವೈಯಕ್ತಿಕವಾಗಿ ಅಪಾರ ನೋವು ತಂದಿದೆ

ಮೂಡಿಗೆರೆ: ತಾವು ಸಚಿವೆಯಾಗಿದ್ದ ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ ಎಂ.ಎಸ್. ಅನಂತ್ ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಅಗಲಿರುವುದು ವೈಯಕ್ತಿಕವಾಗಿ ಅಪಾರ ನೋವು ತಂದಿದೆ ಎಂದು ಮಾಜಿ ಸಚಿವೆ...

ಅಡಿಕೆ ತೋಟದ ನೀರಿನ ತೊಟ್ಟಿಯಲ್ಲಿ ಇಬ್ಬರು ಕಾರ್ಮಿಕರ ಶವ ಪತ್ತೆ

ತರೀಕೆರೆ: ಅಡಿಕೆ ತೋಟದ ಮನೆಯ ನೀರಿನ ತೊಟ್ಟಿಯಲ್ಲಿ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿರುವ ಘಟನೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಆನಂದ್ (48) ಹಾಗೂ ಜುಂಜಾನಾಯ್ (65) ಎಂದು ಗುರುತಿಸಲಾಗಿದೆ....

Related Articles

ಭದ್ರ ಮಾಫಿಯಾ : ಪೈಪ್ ನುಂಗಿ ನೀರು ಕುಡಿಯುವ ಶಾಸಕರುಗಳು ಮತ್ತು ಇಂಜಿನಿಯರ್ ಗಳು?

ಚಿಕ್ಕಮಗಳೂರು: ಜಿಲ್ಲೆಯಿಂದ ಚಿತ್ರದುರ್ಗ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಕುಡಿಯುವ ನೀರಿಗಾಗಿ ಅಂತರ್ ಜಲ ಹೆಚ್ಚಳ...

ನ.18ರಂದು ಗೌಡನಹಳ್ಳಿ ಜನಾಂದೋಲನ ಅಂಬಳೆದಿಂದ ಚಲೋ

ಚಿಕ್ಕಮಗಳೂರು:ಕೈಗಾರಿಕಾ ಮಾಲಿನ್ಯ, ರಾಸಾಯನಿಕ ತ್ಯಾಜ್ಯದಿಂದ ಜಲಮೂಲಗಳ ಮಾಲಿನ್ಯ ಹಾಗೂ ಸಾರ್ವಜನಿಕ ಆಸ್ತಿಗಳ ಅತಿಕ್ರಮಣ ಸೇರಿದಂತೆ ವಿವಿಧ...

ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ 110ನೇ ಜನ್ಮದಿನಾಚರಣೆ ಅದ್ದೂರಿ ಸಿದ್ಧತೆ

ಚಿಕ್ಕಮಗಳೂರು: ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಐತಿಹಾಸಿಕ ನೆಲವಾದ ಚಿಕ್ಕಮಗಳೂರಿನಲ್ಲಿ ಅವರ...

ಚಿಕ್ಕಮಗಳೂರು ಪ್ರೀಮಿಯರ್ ಲೀಗ್‌ಗೆ ಶಾಸಕ ತಮ್ಮಯ್ಯ ಚಾಲನೆ

ಚಿಕ್ಕಮಗಳೂರು: ಕ್ರೀಡಾ ಚಟುವಟಿಕೆಗಳಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸದೃಢತೆಯೂ ವೃದ್ಧಿಯಾಗುತ್ತದೆ....