ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ದರ ಏರಿಕೆಗೊಳಿಸಿ ಸಾರ್ವಜನಿಕರಿಗೆ ಬರೆ ಹಾಕು ತ್ತಿರುವ ರಾಜ್ಯಸರ್ಕಾರದ ವಿರುದ್ಧ ಬುಧವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಕೆ.ಎಸ್.ಆರ್.ಟಿ.ಸಿ. ದ್ವಾರಬಾಗಿನಲ್ಲಿ ಜಮಾಯಿಸಿ ಪ್ರತಿಭಟಿಸುವ ಮುಖೇನಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ರಾಜ್ಯದ ದುರಾಡಳಿ ತ ಸರ್ಕಾರ ಪಂಚ ಗ್ಯಾರಂಟಿ ಸೇರಿದಂತೆ ಇದೀಗ ಬೆಲೆ ಏರಿಕೆ ಗ್ಯಾರಂಟಿ ಘೋಷಿಸಿ, ಜನರಿಂದ ಹಣ ಲೂಟಿ ಮಾಡಿ ಬಡಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದರು.
ರಾಜ್ಯಸರ್ಕಾರ ಎಂದಿಗೂ ಬಡವರ ಪರವಾಗಿಲ್ಲ. ಅಧಿಕಾರದ ಆಸೆಗಾಗಿ ಪಂಚ ಗ್ಯಾರಂಟಿ ತಂದು ಮ ತದಾರರ ಮೂಗಿಗೆ ತುಪ್ಪ ಸವರಿ, ಅಧಿಕಾರಕ್ಕೆ ಬಂದಿದೆ. ಈ ಕಾಂಗ್ರೆಸ್ ಸರ್ಕಾರ ಮತದಾರರ ಬೆನ್ನು ಸೇರಿದ ಂತೆ ಹೊಟ್ಟೆಗೂ ಚೂರಿ ಹಾಕಿ ಅಧಿಕಾರದ ದರ್ಪ ಮೆರೆಯುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಳೆದ ೩೫ ತಿಂಗಳ ಅಧಿಕಾರದಲ್ಲಿ ಪ್ರತಿ ತಿಂಗಳಿಗೆ ಒಂದಿಲ್ಲೊಂದು ಸಾ ಮಾನ್ಯ ಜನರು ಉಪಯೋಗಿಸುವ ವಸ್ತುಗಳ ಬೆಲೆಏರಿಕೆ ಮಾಡಿದೆ. ಕುಡಿಯುವ ಹಾಲು, ಬಸ್ ಸೇರಿದಂತೆ ಅಡುಗೆ ಎಣ್ಣೆಯಿಂದ ಕುಡಿಯುವ ಎಣ್ಣೆವರೆಗೂ ಬೆಲೆಏರಿಸಿ ಜನರಿಗೆ ಬರೆ ಹಾಕುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಹಲವೆಡೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರದ ಪೈಕಿ ನಾಲ್ಕೈದು ಬಸ್‌ಗಳು ಪ್ರತಿ ೩೦ ಕಿ.ಮೀ. ಗಳಲ್ಲಿ ಕೆಟ್ಟು ನಿಲ್ಲುತ್ತಿದೆ. ಇದು ಪ್ರಯಾಣಿಕರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ. ಮುಂದಿನ ಊರಿಗೆ ಹೋಗ ದೇ, ಹಿಂದಿನ ಊರಿಗೂ ತೆರಳಲಾಗುತ್ತಿಲ್ಲ. ಇದು ರಾಜ್ಯಸರ್ಕಾರದ ಮುಖವಾಡ ಬಯಲು ಮಾಡುತ್ತಿದೆ ಎಂದು ಆರೋಪಿಸಿದರು.
ದಿನೇ ದಿನೇ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿ.ಯವರಿಗೆ ಪವಿತ್ರ ಹಾ ಸನಾಂಬ ದೇವಾಲಯದಲ್ಲಿ ಜನರು ಬಸ್ ದರ ಇಳಿಸದಿದ್ದಲ್ಲಿ, ಅಧಿಕಾರ ತ್ಯಜಿಸಿ ಎಂಬ ಉತ್ತರ ನೀಡಿದ್ದಾ ರೆ. ಹೀಗಾಗಿ ಮುಖ್ಯಮಂತ್ರಿಗಳು ಕೊನೆ ಘಟ್ಟದ ಅಧಿಕಾರದಲ್ಲಿ ಜನರಿಗೆ ಒಳಿತಾಗುವ ಕೆಲಸ ಮಾಡಲಿ ಎಂ ದು ತಿಳಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ರಾಜ್ಯದಲ್ಲಿ ಯಾವು ದೇ ಪಕ್ಷ ಅಧಿಕಾರಕ್ಕೆ ಬಂದರೆ ಕನಿಷ್ಟ ಶೇ.೨ ರಿಂದ ೩ರಷ್ಟು ಮಾತ್ರ ಬಸ್‌ಏರಿಕೆ ಸಾಮಾನ್ಯವಾಗಿತ್ತು. ಆದರೆ ಕಾಂಗ್ರೆಸ್ ಏಕಾಏಕಿ ಶೇ.೨೦ ರಿಂದ ೩೦ರಷ್ಟು ಏರಿಕೆ ಮಾಡಿದೆ. ರಾಜ್ಯಸರ್ಕಾರ ಜನರ ಬದುಕು ಉದ್ದಾರ ಮಾ ಡದೇ, ಬಸ್ ಏರಿಸಿ ಜನರಿಂದ ಹಣದ ಭಿಕ್ಷೆ ಬೇಡುತ್ತಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್ ಮಾತನಾಡಿ ಗೃಹಲಕ್ಷ್ಮೀ ಯೋ ಜನೆಯಲ್ಲಿ ಗೃಹಿಣಿಯರ ಖಾತೆಗೆ ಕಳೆದ ಮೂರ್‍ನಾಲ್ಕು ತಿಂಗಳಿಂದ ಹಣ ಜಮೆ ಮಾಡಿಲ್ಲ. ಮುಖ್ಯಮಂತ್ರಿ ಗಳು ದೀಪಾವಳಿ ಹಬ್ಬಕ್ಕೆ ಜಮೆಯಾಗಲಿದೆ ಎಂಬ ಸುಳ್ಳು ಭರವಸೆ ನೀಡಿ ದ್ರೋಹ ಮಾಡುತ್ತಿದ್ದಾರೆ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ನಗರಾಧ್ಯಕ್ಷ ಪುಷ್ಪ ರಾಜ್, ಗ್ರಾಮಾಂತರ ಅಧ್ಯಕ್ಷ ವಿಜಯ್‌ಕುಮಾರ್, ಆಲ್ದೂರು ಮಂಡಲ ಅಧ್ಯಕ್ಷ ರವಿ, ಮೂಡಿಗೆರೆ ಅಧ್ಯಕ್ಷ ಗಜೇಂದ್ರ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ರೈತ ಮೋರ್ಚಾದ ಅಧ್ಯಕ್ಷ ಜಂಬೈನೂರು ಆನಂದಪ್ಪ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ, ಮುಖಂಡರುಗಳಾದ ಪ್ರೇಮ್‌ಕುಮಾರ್, ಬಿ.ರಾಜಪ್ಪ ಕೇಶವ, ಜಯವರ್ಧನ್, ಓಂಕಾರೇಗೌಡ, ಬಸವರಾಜ್, ರೇವನಾಥ್ ಮುಂತಾದವರಿದ್ದರು.
BJP protests at KSRTC bus station against fare hike
Leave a comment