ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬೌದ್ಧ ಧಮ್ಮದ ಮಾಜಿ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಎಸ್. ಅನಂತ್ ಅವರ ನಿಧನಕ್ಕೆ ಗುರುವಾರ ನಗರದ ಆಜಾದ್ ವೃತ್ತದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಬುದ್ಧ ವಂದನೆ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅನಂತ್ ಅವರು ಬೌದ್ಧ ಧಮ್ಮದೊಂದಿಗೆ ಹೊಂದಿದ್ದ ನಂಟು ಹಾಗೂ ಅವರ ಸೇವೆಯನ್ನು ಸ್ಮರಿಸಿ, ಬೌದ್ಧ ಸಂಪ್ರದಾಯದಂತೆ ಬುದ್ಧ ವಂದನೆ ಸಲ್ಲಿಸಿ ಗೌರವ ಸೂಚಿಸಲು ನಿರ್ಧರಿಸಲಾಯಿತು. ಅದರಂತೆ ವಿವಿಧ ಸಂಘಟನೆಗಳ ಮುಖಂಡರು, ಅಂಬೇಡ್ಕರ್ ವಾದಿಗಳು, ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಬೌದ್ಧ ಧಮ್ಮದ ಅನುಯಾಯಿಗಳು ಸಭೆಯಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು.
ಡಿ.ಎಸ್.ಎಸ್. ಮುಖಂಡ ವಸಂತ ಕುಮಾರ ಮಾತನಾಡಿ ಎಲ್ಲರೂ ಒಗ್ಗೂಡಿ ಅನಂತ್ ಅವರ ಸಾಮಾಜಿಕ ಹಾಗೂ ಧಾರ್ಮಿಕ ಒಡನಾಟವನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಅವರ ಅಂತಿಮ ದರ್ಶನ ಪಡೆಯಲು ಮೂಡಿಗೆರೆಗೆ ತೆರಳಿದರು. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಅಂಬೇಡ್ಕರ್ ವಾದಿ ಅಣ್ಣಯ್ಯ, ದಲಿತ ಸಂಘರ್ಷ ಸಮಿತಿಯ ಕಬ್ಬಗಿರೆ ಮೋಹನ್, ಧರ್ಮೇಶ್, ಜಯರಾಮಯ್ಯ, ಇಲಿಯಾಸ್ ಅಹಮದ್, ನಂಜುಂಡಪ್ಪ, ಭೀಮಯ್ಯ, ಸೊಸೈಟಿ ಅಧ್ಯಕ್ಷ ಪರಮೇಶ್, ಗಂಗಾಧರ, ಗೌತಮ ಬುದ್ಧ ಸಂಘದ ಜಿ.ಕೆ. ಬಸವರಾಜ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಬೌದ್ಧ ಧಮ್ಮದ ಪ್ರಚಾರಕರಾದ ಚಂದ್ರಪ್ಪ ಅವರು ಕೂಡ ಬುದ್ಧ ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Heartfelt tributes by various organizations at Azad Circle
Leave a comment