Home ಮಾಕೋನಹಳ್ಳಿ ಗ್ರಾಮದ ಶನೇಶ್ವರ ದೇವಸ್ಥಾನದಲ್ಲಿ ಕಳ್ಳತನ
Home

ಮಾಕೋನಹಳ್ಳಿ ಗ್ರಾಮದ ಶನೇಶ್ವರ ದೇವಸ್ಥಾನದಲ್ಲಿ ಕಳ್ಳತನ

Share
Share

ಮೂಡಿಗೆರೆ: ದೇವಸ್ಥಾನದ ಬೀಗ ಒಡೆದು ದೇವರ ಬೆಳ್ಳಿ ಆಭರಣಗಳು ಹಾಗೂ ಹುಂಡಿಗಳನ್ನು ಕಳ್ಳತನ ಮಾಡಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದ ಕಲ್ಲುಹೊಲ-ನಾಗಲಾಪುರ ಶನೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಅ.30ರ ರಾತ್ರಿ ದೇವಸ್ಥಾನದ ಬೀಗ ಒಡೆದು ಸುಮಾರು ₹1.02 ಲಕ್ಷ ಮೌಲ್ಯದ 500 ಗ್ರಾಂ ತೂಕದ ಬೆಳ್ಳಿ ಮುಖ, ಬೆಳ್ಳಿ ಸರ, ಕೈ ಖಡ್ಗ, ಸೊಂಟದ ಪಟ್ಟಿ ಹಾಗೂ ಎರಡು ಹುಂಡಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕಳ್ಳತನಕ್ಕೆ ಬಳಸಲು ದೇವಸ್ಥಾನದ ಸಮೀಪದ ಕೃಷ್ಣೇಗೌಡ ಎಂಬುವರ ಮನೆಯ ಹಿಂಭಾಗದಲ್ಲಿದ್ದ ಗೋದಾಮಿನ ಬೀಗ ಒಡೆದು ಸಲಿಕೆಯನ್ನು ಕದ್ದುಕೊಂಡು ಹೋಗಿದ್ದು, ಅದರಿಂದ ದೇವಸ್ಥಾನದ ಬಾಗಿಲು ಹಾಗೂ ಹುಂಡಿಗಳನ್ನು ಒಡೆದಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ದೇವಸ್ಥಾನದ ಸಮಿತಿ ಪರವಾಗಿ ಕೆ.ಎನ್. ಕೃಷ್ಣೇಗೌಡ ಅವರು ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Theft at Shaneshwara Temple in Makonahalli Village

Share

Leave a comment

Leave a Reply

Your email address will not be published. Required fields are marked *

Don't Miss

ಹಿಟ್‌ ಆ್ಯಂಡ್‌ ರನ್‌-ಸವಾರ ಸಾವು

ಕಡೂರು: ಹಿಂಬದಿಯಿಂದ ಬಂದ ಅಪರಿಚಿತ ಗೂಡ್ಸ್ ವಾಹನದ ಚಾಲಕನೊಬ್ಬ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ, ಬೈಕ್ ಸವಾರ ಮೃತಪಟ್ಟಿರುವ ಘಟನೆ ಕಡೂರು ತಾಲ್ಲೂಕಿನ...

ಚಿಕ್ಕಮಗಳೂರಿನಲ್ಲಿ ಕ್ರೈಸ್ತ ಸಮುದಾಯದ ಬೃಹತ್ ಫಲಾನುಭವಿ ಸಮಾವೇಶ

ಚಿಕ್ಕಮಗಳೂರು: ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಅಕ್ಟೋಬರ್ 28ರಂದು ಚಿಕ್ಕಮಗಳೂರು ನಗರದಲ್ಲಿ ಕ್ರೈಸ್ತ ಸಮುದಾಯದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಹಾಗೂ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ...

Related Articles

ದೇವಿರಮ್ಮನವರ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಚಿಕ್ಕಮಗಳೂರು: ಪ್ರಸಿದ್ಧ ದೇವಿರಮ್ಮನವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕೆ ಜಿಲ್ಲಾಡಳಿತದಿಂದ...

ಬಿಳೇಕಲ್ಲು ಅಪಘಾತ ಪ್ರಕರಣದಲ್ಲಿ 25 ಲಕ್ಷ ಪರಿಹಾರ

ಚಿಕ್ಕಮಗಳೂರು: ಕಳೆದ ಏಪ್ರಿಲ್ ೧೪ ರಂದು ಇಲ್ಲಿಗೆ ಸಮೀಪದ ಬಿಳೇಕಲ್ಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್...

ರಾಕೇಶ್‌ಶೆಟ್ಟಿ ವಿರುದ್ಧ ಜಿಲ್ಲಾ ಯುವ ಒಕ್ಕಲಿಗರ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ನಾಡಿನ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬಸ್ಥರ ಬಗ್ಗೆ ಖಾ ಸಗೀ ವಾಹಿನಿಯ ಸಂಪಾದಕ ರಾಕೇಶ್‌ಶೆಟ್ಟಿ...

ಮೊಬೈಲ್‌ಗೆ 300 ಸಂದೇಶ-ಖಾತೆಯಿಂದ ₹1.49 ಲಕ್ಷ ವಂಚನೆ

ಚಿಕ್ಕಮಗಳೂರು: ಮೊಬೈಲ್‌ಗೆ ಏಕಾಏಕಿ 300 ಸಂದೇಶಗಳು ಬಂದ ಬೆನ್ನಲ್ಲೇ ವ್ಯಕ್ತಿಯೊಬ್ಬರ ಕೆನರಾ ಬ್ಯಾಂಕ್ ಖಾತೆಯಿಂದ ₹1.49...