Home namma chikmagalur chikamagalur ವಿದ್ಯುತ್ ಶಾಕ್ ಗೆ 8 ವರ್ಷದ ಬಾಲಕ ಬಲಿ
chikamagalurCrime NewsHomeLatest Newsnamma chikmagalur

ವಿದ್ಯುತ್ ಶಾಕ್ ಗೆ 8 ವರ್ಷದ ಬಾಲಕ ಬಲಿ

Share
Share

ಚಿಕ್ಕಮಗಳೂರು: ಸ್ನಾನ ಮಾಡಲು ಬಾತ್ ರೂಮ್ ಗೆ ತೆರಳಿದ್ದ 8 ವರ್ಷದ ಬಾಲಕ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

ಸಖರಾಯಪಟ್ಟಣದ ನೀಲಾಂಶ್ (8) ಮೃತಪಟ್ಟ ಬಾಲಕ. ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಭಾನುವಾರ ಶಾಲೆಗೆ ರಜೆಯ ಹಿನ್ನೆಲೆ ಮನೆಯಲ್ಲೇ ಇದ್ದ ಬಾಲಕ ಸ್ನಾನ ಮಾಲು ಬಾತ್ ರೂಮ್ ಗೆ ತೆರಳಿದ್ದಾನೆ. ಈ ವೇಳೆ ನೀರು ಕಾಯಿಸಲು ಬಕೆಟ್ ನಲ್ಲಿ ವಿದ್ಯುತ್ ವಾಟರ್ ಹೀಟರ್ ಹಾಕಲಾಗಿತ್ತು.
ಹೀಟರ್ ನಿಂದ ಬಿಸಿಯಾಗು ತ್ತಿದ್ದ ನೀರಿಗೆ ಬಾಲಕ ಕೈ ಹಾಕಿದ್ದಾನೆ. ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥ ನಾಗಿದ್ದಾನೆ‌.

ಕೂಡಲೇ ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿದರೂ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಖರಾಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8-year-old boy dies from electric shock

Share

Leave a comment

Leave a Reply

Your email address will not be published. Required fields are marked *

Don't Miss

ವಾಲ್ಮೀಕಿ ರಚಿತ ರಾಮಾಯಣ ಜಗತ್ತಿಗೆ  ಸನ್ಮಾರ್ಗದ ದಾರಿದೀಪ

ಚಿಕ್ಕಮಗಳೂರು:  ಶ್ರೀ ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಇಡೀ ಜಗತ್ತಿಗೆ ಆದರ್ಶ ಜೀವನ ಮತ್ತು ಸನ್ಮಾರ್ಗದ ದಾರಿ ತೋರಿಸಿದೆ ಎಂದು  ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್...

‘ಪ್ರೇಮದ ಊರಲ್ಲಿ’ ಚಿತ್ರತಂಡಕ್ಕೆ ಚಿಕ್ಕಮಗಳೂರಿನ ಸನ್ಮಾನ

ಚಿಕ್ಕಮಗಳೂರು: ರೈತರ ಬದುಕು, ಕೃಷಿಕರ ಸಂಕಷ್ಟ ಹಾಗೂ ಗ್ರಾಮೀಣ ಬದುಕಿನ ಭಾವನೆಗಳನ್ನು ತೆರೆಮೇಲೆ ಕಟ್ಟಿಕೊಟ್ಟಿರುವ ‘ಪ್ರೇಮದ ಊರಲ್ಲಿ’ ಕನ್ನಡ ಚಲನಚಿತ್ರವು ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರೈಸಿದ್ದು, ಚಿತ್ರತಂಡಕ್ಕೆ ಸೋಮವಾರ ನಗರದ...

Related Articles

ರಾಜ್ಯೋತ್ಸವದಲ್ಲಿ ಕನ್ನಡಕ್ಕೆ ಗೌರವ ನೀಡುವ ಸಂಕಲ್ಪ ಮಾಡೋಣ

ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವದಲ್ಲಿ ನಾವು ಕೆಲವು ಸಂಕಲ್ಪಗಳನ್ನು ಮಾಡೋಣ. ನಮ್ಮ ಮನೆಯಲ್ಲಿ, ಶಾಲೆಯಲ್ಲಿ, ಕಚೇರಿಯಲ್ಲಿ ಮತ್ತು...

ಕಾರು ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು

ಕಡೂರು: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಡೂರು...

ಮಾಕೋನಹಳ್ಳಿ ಗ್ರಾಮದ ಶನೇಶ್ವರ ದೇವಸ್ಥಾನದಲ್ಲಿ ಕಳ್ಳತನ

ಮೂಡಿಗೆರೆ: ದೇವಸ್ಥಾನದ ಬೀಗ ಒಡೆದು ದೇವರ ಬೆಳ್ಳಿ ಆಭರಣಗಳು ಹಾಗೂ ಹುಂಡಿಗಳನ್ನು ಕಳ್ಳತನ ಮಾಡಿರುವ ಘಟನೆ...

ಪ್ರತ್ಯೇಕ ಅಪಘಾತದಲ್ಲಿ- ನಾಲ್ವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ವಾಹನಗಳು...