Home namma chikmagalur chikamagalur ಹಾಲಿನ ದರ ಹೆಚ್ಚಳ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
chikamagalurHomeLatest Newsnamma chikmagalur

ಹಾಲಿನ ದರ ಹೆಚ್ಚಳ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

Share
Share

ಚಿಕ್ಕಮಗಳೂರು: ರಾಜ್ಯಸರ್ಕಾರ ಪ್ರತಿ ಲೀಟರ್ ಹಾಲಿಗೆ ೮ ರೂ.ಗಳ ದರ ಏರಿಕೆ ಮಾಡಿರು ವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕಾರ್ಯಕರ್ತರು ಶನಿವಾರ ಹಾಲಿನ ಖಾಲಿ ಕ್ಯಾನ್ ಹಿಡಿದು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದರು.

ಈ ಕುರಿತು ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್ ರಾಜ್ಯ ದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೮ ರೂ.ಗಳು ಏರಿಸಿ ಜನರಿಂದ ಹಣ ದೋಚುತ್ತಿದೆ. ಮುಖ್ಯಮಂತ್ರಿಗಳು ಸರ್ಕಾರದ ಖಜಾನೆಯಲ್ಲಿ ರೈತರಿಗೆ ನೆರವಾಗದೇ ಎಲ್ಲಾ ಹೊರೆಯನ್ನು ಗ್ರಾಹಕರ ತಲೆಗೆ ಕಟ್ಟುತ್ತಿದ್ದಾರೆ ಎಂದು ದೂರಿದರು.

ಹಾಲು ಕೇವಲ ಆಹಾರವಲ್ಲ, ಶರೀರಕ್ಕೆ ಪೌಷ್ಠಿಕತೆ ತುಂಬುವ ಅಮೃತ. ಪುಟಾಣಿ ಮಕ್ಕಳು, ರೋಗಿ ಗಳು, ವಯಸ್ಕರಿಗೆ ಪ್ರತಿದಿನ ಅವಶ್ಯಕವಾಗಿದೆ. ಮೊದಲು ತಾಯಂದಿರು ಶಾಲೆಗೆ ತೆರಳುವ ಮಕ್ಕಳಿಗೆ ಬೆಳವ ಣಿಗೆ ದೃಷ್ಟಿಯಿಂದ ಡೈರಿ ಹಾಲು ಕುಡಿಸುತ್ತಿದ್ದರು. ಆದರೆ ರಾಜ್ಯಸರ್ಕಾರ ಹಾಲಿಗೂ ದರ ಏರಿಸಿ, ಮಕ್ಕಳ ಕೈಗೂ ಸಿಗದಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ಗ್ಯಾರಂಟಿ ಭರದಲ್ಲಿ ಅಕ್ಕಿ, ತರಕಾರಿ ಸೇರಿ ದಂತೆ ದಿನೋಪಯೋಗಿ ವಸ್ತುಗಳನ್ನು ಗಗನಕ್ಕೇರಿಸಿ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಈ ಹೊರೆ ಅತಿಹೆಚ್ಚು ಬಡವ ಹಾಗೂ ಮಧ್ಯಮ ವರ್ಗದ ಜನರಿಗೆ ತಟ್ಟುತ್ತಿದ್ದು ರಾಜ್ಯಸರ್ಕಾರದ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿದರು.

ದಿನೇ ದಿನೇ ಸಾಮಾನ್ಯರಿಗೆ ಹೊರೆ ಹೆಚ್ಚಿಸಿ ಆಡಳಿತ ನಡೆಸುತ್ತಿರುವ ರಾಜ್ಯಸರ್ಕಾರಕ್ಕೆ ಉಳಿಗಾಲವಿಲ್ಲ. ಆರ್ಥಿಕ ಸಂಕಷ್ಟ ಜನರಿಗೆ ಕೊಟ್ಟು, ನೆಮ್ಮದಿ ಆಡಳಿತ ನಡೆಸಲು ಎಂದಿಗೂ ಸಾಧ್ಯವಿಲ್ಲ. ಇದೇ ರೀತಿ ಕಾಂಗ್ರೆ ಸ್ ಮುಂದುವರೆದ್ದಲ್ಲಿ ರಾಜ್ಯಾದ್ಯಂತ ಮಹಿಳೆಯರು ಹೋರಾಟ ರೂಪಿಸಬೇಕಾಗುತ್ತದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ಹಾಲಿನ ದರ ಹೆಚ್ಚಳಗೊಳಿಸಿರುವ ವಿರುದ್ಧ ವೇ ಬಿಜೆಪಿ ಧರಣಿ ಹೊರತು, ರೈತರಿಗೆ ನೀಡುವುದರ ವಿರುದ್ಧವಲ್ಲ. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ರೈತರಿ ಗೆ ಆರ್ಥಿಕ ನೆರವು ಒದಗಿಸಬೇಕು. ಆದರೆ ಏಕಾಏಕಿ ದರ ಏರಿಸಿ ನೇರವಾಗಿ ಗ್ರಾಹಕರಿಗೆ ಮೇಲೆ ಬರೆ ಹಾಕು ವುದು ಸರಿಯಲ್ಲ ಎಂದು ತಿಳಿಸಿದರು.

ಸಾಮಾನ್ಯರ ಕುಟುಂಬದಲ್ಲಿ ಅರ್ಧ ಲೀಟರ್ ಹಾಲು ಖರೀದಿಸಿ ಮಕ್ಕಳು ಕುಡಿಸುವುದು ಕಷ್ಟದ ಕೆಲಸ ವಾಗಿದೆ. ಬಡವರು ಹಾಲು ಕುಡಿಯುವುದು ಬೇಡವೇ, ಸರ್ಕಾರದ ಮಂತ್ರಿಗಳ ಮಕ್ಕಳು ಮಾತ್ರ ಹಾಲು ಕುಡಿ ಯಬೇಕೇ. ರಾಜ್ಯಸರ್ಕಾರ ಕೊನೆಕಾಲದ ಆಡಳಿತದಲ್ಲಿದ್ದು, ಶಾಸಕರನ್ನು ಶ್ರೀಮಂತರಾಗಿ, ರಾಜ್ಯದ ಜನರನ್ನು ಬಡತನದ ಕೂಪಕ್ಕೆ ತಳ್ಳಲು ಯೋಚಿಸುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರೀತಿ ಯೋಗೇಶ್, ಗ್ರಾಮಾಂತರ ಮ ಹಿಳಾ ಮೋರ್ಚಾ ಅಧ್ಯಕ್ಷೆ ಪರಮೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ನಗರಾಧ್ಯಕ್ಷ ಪುಷ್ಪರಾಜ್, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್, ಮುಖಂಡರುಗಳಾದ ಕವಿತಾ ಶೇ ಖರ್, ಸಂತೋಷ್ ಕೋಟ್ಯಾನ್, ಕುರುವಂಗಿ ವೆಂಕಟೇಶ್, ಕೇಶವ ಮುಂತಾದವರಿದ್ದರು.

BJP Mahila Morcha protests against hike in milk prices

Share

Leave a comment

Leave a Reply

Your email address will not be published. Required fields are marked *

Don't Miss

ವಾಲ್ಮೀಕಿ ರಚಿತ ರಾಮಾಯಣ ಜಗತ್ತಿಗೆ  ಸನ್ಮಾರ್ಗದ ದಾರಿದೀಪ

ಚಿಕ್ಕಮಗಳೂರು:  ಶ್ರೀ ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಇಡೀ ಜಗತ್ತಿಗೆ ಆದರ್ಶ ಜೀವನ ಮತ್ತು ಸನ್ಮಾರ್ಗದ ದಾರಿ ತೋರಿಸಿದೆ ಎಂದು  ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್...

‘ಪ್ರೇಮದ ಊರಲ್ಲಿ’ ಚಿತ್ರತಂಡಕ್ಕೆ ಚಿಕ್ಕಮಗಳೂರಿನ ಸನ್ಮಾನ

ಚಿಕ್ಕಮಗಳೂರು: ರೈತರ ಬದುಕು, ಕೃಷಿಕರ ಸಂಕಷ್ಟ ಹಾಗೂ ಗ್ರಾಮೀಣ ಬದುಕಿನ ಭಾವನೆಗಳನ್ನು ತೆರೆಮೇಲೆ ಕಟ್ಟಿಕೊಟ್ಟಿರುವ ‘ಪ್ರೇಮದ ಊರಲ್ಲಿ’ ಕನ್ನಡ ಚಲನಚಿತ್ರವು ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರೈಸಿದ್ದು, ಚಿತ್ರತಂಡಕ್ಕೆ ಸೋಮವಾರ ನಗರದ...

Related Articles

ರಾಜ್ಯೋತ್ಸವದಲ್ಲಿ ಕನ್ನಡಕ್ಕೆ ಗೌರವ ನೀಡುವ ಸಂಕಲ್ಪ ಮಾಡೋಣ

ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವದಲ್ಲಿ ನಾವು ಕೆಲವು ಸಂಕಲ್ಪಗಳನ್ನು ಮಾಡೋಣ. ನಮ್ಮ ಮನೆಯಲ್ಲಿ, ಶಾಲೆಯಲ್ಲಿ, ಕಚೇರಿಯಲ್ಲಿ ಮತ್ತು...

ಕಾರು ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು

ಕಡೂರು: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಡೂರು...

ಮಾಕೋನಹಳ್ಳಿ ಗ್ರಾಮದ ಶನೇಶ್ವರ ದೇವಸ್ಥಾನದಲ್ಲಿ ಕಳ್ಳತನ

ಮೂಡಿಗೆರೆ: ದೇವಸ್ಥಾನದ ಬೀಗ ಒಡೆದು ದೇವರ ಬೆಳ್ಳಿ ಆಭರಣಗಳು ಹಾಗೂ ಹುಂಡಿಗಳನ್ನು ಕಳ್ಳತನ ಮಾಡಿರುವ ಘಟನೆ...

ಪ್ರತ್ಯೇಕ ಅಪಘಾತದಲ್ಲಿ- ನಾಲ್ವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ವಾಹನಗಳು...