Home namma chikmagalur chikamagalur ರಾಜ್ಯೋತ್ಸವದಲ್ಲಿ ಕನ್ನಡಕ್ಕೆ ಗೌರವ ನೀಡುವ ಸಂಕಲ್ಪ ಮಾಡೋಣ
chikamagalurHomeLatest Newsnamma chikmagalur

ರಾಜ್ಯೋತ್ಸವದಲ್ಲಿ ಕನ್ನಡಕ್ಕೆ ಗೌರವ ನೀಡುವ ಸಂಕಲ್ಪ ಮಾಡೋಣ

Share
Share

ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವದಲ್ಲಿ ನಾವು ಕೆಲವು ಸಂಕಲ್ಪಗಳನ್ನು ಮಾಡೋಣ. ನಮ್ಮ ಮನೆಯಲ್ಲಿ, ಶಾಲೆಯಲ್ಲಿ, ಕಚೇರಿಯಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ಕನ್ನಡಕ್ಕೆ ಗೌರವ ನೀಡೋಣ. ಕನ್ನಡವನ್ನು ಸರಿಯಾಗಿ ಓದಲು, ಬರೆಯಲು ಮತ್ತು ಮಾತನಾಡಲು ಕಲಿಯೋಣ ಎಂದು ಜಿಲ್ಲಾಧಿಕಾರಿ ಭವಂರ್ ಸಿಂಗ್ ಮೀನ ತಿಳಿಸಿದರು

ಭಾನುವಾರ ನಗರದ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿ ಕನ್ನಡದ ಇತಿಹಾಸ ಮತ್ತು ಮಹನೀಯರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸೋಣ.ಪ್ರೀತಿಸೋಣ. ನಮ್ಮ ಹೆಮ್ಮೆಯ ಕನ್ನಡವನ್ನು ಕನ್ನಡವನ್ನು ಬೆಳೆಸೋಣ. ಕನ್ನಡ ನಾಡಿನ ಗೌರವವನ್ನು ಎತ್ತಿಹಿಡಿಯೋಣ ಎಂದರು

ಮುಂದಿನ ಪೀಳಿಗೆಗೆ ಸಮೃದ್ಧವಾದ ಕನ್ನಡ ಭಾಷೆ, ಸಾಂಸ್ಕೃತಿಕ ಪರಂಪರೆ ಮತ್ತು ಸುಂದರ ಕರ್ನಾಟಕವನ್ನು ಕೊಡುಗೆಯಾಗಿ ನೀಡೋಣ. ಕೊನೆಯದಾಗಿ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯ ಅಮರ ಸಂದೇಶವನ್ನು ಸ್ಮರಿಸುತ್ತಾ, ಕನ್ನಡ ನಾಡಿನ ಏಕತೆ, ಸಮೃದ್ಧಿ ಮತ್ತು ಶಾಂತಿಗಾಗಿ ಹಾರೈಸುತ್ತೇನೆ ಎಂದು ಹೇಳಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ. ಕನ್ನಡವು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಪ್ರಮುಖ ಭಾಷೆಯಾಗಿದ್ದು, ತನ್ನದೇ ಆದ ವಿಶಿಷ್ಟ ಸಾಹಿತ್ಯ ಪರಂಪರೆ, ವ್ಯಾಕರಣ, ಸಂಸ್ಕೃತಿ ಮತ್ತು ಭಾಷಾ ಸೌಂದರ್ಯವನ್ನು ಹೊಂದಿದೆ. ಕನ್ನಡದ ಪ್ರಾಚೀನತೆಯನ್ನು ಸಾರುವ ಪ್ರಮುಖ ಶಾಸನಗಳಲ್ಲಿ ಕ್ರಿ.ಶ. ಐದನೇ ಶತಮಾನದ ಹಲ್ಮಡಿ ಶಾಸನವು ವಿಶೇಷ ಸ್ಥಾನ ಪಡೆದಿದೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಶಾಸನಗಳು, ತಾಮ್ರಪಟಗಳು, ಹಸ್ತಪ್ರತಿಗಳು ಮತ್ತು ಸಾಹಿತ್ಯ ಕೃತಿಗಳು ಮಹತ್ವದ ಪಾತ್ರ ವಹಿಸಿವೆ ಎಂದರು

ಕನ್ನಡ ಸಾಹಿತ್ಯದ ಪ್ರಾಚೀನ ಕೃತಿಗಳಲ್ಲಿ ಕ್ರಿ.ಶ. ಒಂಬತ್ತನೇ ಶತಮಾನದ ಕವಿರಾಜಮಾರ್ಗ ಮುಖ್ಯವಾದುದು. ಇದು ಕನ್ನಡದ ಸಾಹಿತ್ಯ ಪರಂಪರೆ ಮತ್ತು ಭಾಷಾ ವೈಭವಕ್ಕೆ ಸಾಕ್ಷಿಯಾಗಿದೆ ಹಾಗೂ ಕರ್ನಾಟಕದ ಗಡಿ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇಶದಲ್ಲೇ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ನಮ್ಮ ಭಾಷೆ ಮತ್ತು ನಮ್ಮ ನೆಲದ ಹೆಮ್ಮೆ ಇಷ್ಟೊಂದು ವೈಭವದ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಪ್ರೀತಿಸುವುದು ಮಾತ್ರವಲ್ಲ, ಅದರ ಬೆಳವಣಿಗೆಗೆ ನಮ್ಮ ಕೊಡುಗೆಯನ್ನು ನೀಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ನುಡಿದರು.

ಸಿವಿಲ್ ಪೊಲೀಸ್ ಪಡೆ, ಜಿಲ್ಲಾ ಶಸಸ್ತ್ರ ಮೀಸಲು ಪೊಲೀಸ್ ಪಡೆ, ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕದಳ, ಅರಣ್ಯ ಇಲಾಖೆ, ಐಡಿಎಸ್‌ಜಿ ಕಾಲೇಜು ಎನ್‌ಸಿಸಿ ವಿಭಾಗ ಸೇರಿದಂತೆ ನಗರದ ಸರ್ಕಾರಿ ಮತ್ತು ಖಾಸಗಿ ಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಇಂಧನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಅನಾರೋಗ್ಯದಿಂದ ಗೈರು ಹಾಜರಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಕನ್ನಡರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿ ಸಿದರು.

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಪಾನ್ ದೇಶದಲ್ಲಿ ನಡೆದ ಏಷ್ಯಾನ್ ಗೇಮ್ಸ್‌ನ ೪*೧೦೦ ಮಿಶ್ರ ರಿಲೇಯಲ್ಲಿ ಕಂಚಿನ ಪದಕ ವಿಜೇತೆ ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿಯ ಸ್ನೇಹಾ ಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶೃಂಗೇರಿ ವಿಧಾನ ಸಭಾ ಕ್ಷೇತ್ರ ಶಾಸಕರಾದ ಟಿ.ಡಿ. ರಾಜೇಗೌಡ, ,ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷರಾದ ಎ.ಎನ್.ಮಹೇಶ್, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ, ಎ.ವಿ.ಗಾಯತ್ರಿ ಶಾಂತೇಗೌಡ ಇದ್ದದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಶಿವನಂದ ಸ್ವಾಮಿ ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಜಿಲ್ಲಾ ಪಂಚಾಯಿತಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೀನಾಕ್ಷಿ ಆರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಯ್ಮಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್,ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಇದ್ದರು.

Let us resolve to honor Kannada during Rajyotsava.

 

Share

Leave a comment

Leave a Reply

Your email address will not be published. Required fields are marked *

Don't Miss

ವಾಲ್ಮೀಕಿ ರಚಿತ ರಾಮಾಯಣ ಜಗತ್ತಿಗೆ  ಸನ್ಮಾರ್ಗದ ದಾರಿದೀಪ

ಚಿಕ್ಕಮಗಳೂರು:  ಶ್ರೀ ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಇಡೀ ಜಗತ್ತಿಗೆ ಆದರ್ಶ ಜೀವನ ಮತ್ತು ಸನ್ಮಾರ್ಗದ ದಾರಿ ತೋರಿಸಿದೆ ಎಂದು  ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್...

‘ಪ್ರೇಮದ ಊರಲ್ಲಿ’ ಚಿತ್ರತಂಡಕ್ಕೆ ಚಿಕ್ಕಮಗಳೂರಿನ ಸನ್ಮಾನ

ಚಿಕ್ಕಮಗಳೂರು: ರೈತರ ಬದುಕು, ಕೃಷಿಕರ ಸಂಕಷ್ಟ ಹಾಗೂ ಗ್ರಾಮೀಣ ಬದುಕಿನ ಭಾವನೆಗಳನ್ನು ತೆರೆಮೇಲೆ ಕಟ್ಟಿಕೊಟ್ಟಿರುವ ‘ಪ್ರೇಮದ ಊರಲ್ಲಿ’ ಕನ್ನಡ ಚಲನಚಿತ್ರವು ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರೈಸಿದ್ದು, ಚಿತ್ರತಂಡಕ್ಕೆ ಸೋಮವಾರ ನಗರದ...

Related Articles

ಕಾರು ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು

ಕಡೂರು: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಡೂರು...

ಮಾಕೋನಹಳ್ಳಿ ಗ್ರಾಮದ ಶನೇಶ್ವರ ದೇವಸ್ಥಾನದಲ್ಲಿ ಕಳ್ಳತನ

ಮೂಡಿಗೆರೆ: ದೇವಸ್ಥಾನದ ಬೀಗ ಒಡೆದು ದೇವರ ಬೆಳ್ಳಿ ಆಭರಣಗಳು ಹಾಗೂ ಹುಂಡಿಗಳನ್ನು ಕಳ್ಳತನ ಮಾಡಿರುವ ಘಟನೆ...

ಪ್ರತ್ಯೇಕ ಅಪಘಾತದಲ್ಲಿ- ನಾಲ್ವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ವಾಹನಗಳು...

ಕನ್ನಡ ರಾಜ್ಯೋತ್ಸವಕ್ಕೆ ಮೆರಗು ತಂದ 21 ಸ್ತಬ್ಧಚಿತ್ರಗಳ ಮೆರವಣಿಗೆ

ಚಿಕ್ಕಮಗಳೂರು: 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಸುಮಾರು 21 ಸ್ತಬ್ಧಚಿತ್ರಗಳ ಮೆರವಣಿಗೆ ಈ...