Home namma chikmagalur chikamagalur ಶಿರವಾಸೆ ಗ್ರಾಮದಲ್ಲಿ ಬಿಲ್ಲವ ಸಮುದಾಯ ಭವನ ಲೋಕಾರ್ಪಣೆ
chikamagalurHomeLatest Newsnamma chikmagalur

ಶಿರವಾಸೆ ಗ್ರಾಮದಲ್ಲಿ ಬಿಲ್ಲವ ಸಮುದಾಯ ಭವನ ಲೋಕಾರ್ಪಣೆ

Share
Share

ಚಿಕ್ಕಮಗಳೂರು: ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಸಂಘಟಿತ ಪ್ರಯತ್ನದ ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಸಮೀಪದ ಶಿರವಾಸೆ ಗ್ರಾಮದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ನಿರ್ಮಿಸಿರುವ ನೂತನ ಬಿಲ್ಲವ ಸಮುದಾಯ ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದ ಶೋಷಿತ ವರ್ಗದಲ್ಲಿ ಜನಿಸಿದ ಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಅಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರು ಹಾಗೂ ತತ್ವಜ್ಞಾನಿಗಳಾಗಿದ್ದರು. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಅವರು ಜೀವನವಿಡೀ ಶ್ರಮಿಸಿದರು. ಕೇರಳದಿಂದ ಉತ್ತರ ಕನ್ನಡದವರೆಗೂ ಸಂಚರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಿದ ಅವರ ಸೇವೆ ಸ್ಮರಣೀಯವಾಗಿದೆ ಎಂದರು.

ನಾರಾಯಣ ಗುರುಗಳ ‘ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು’ ಎಂಬ ಸಂದೇಶ ಇಡೀ ಮಾನವಕುಲಕ್ಕೆ ಮಾರ್ಗದರ್ಶಕವಾಗಿದೆ. ಸಂಘಟನೆ ಬಲಿಷ್ಠವಾದರೆ ಸಮಾಜ ಸದೃಢವಾಗುತ್ತದೆ, ಉತ್ತಮ ಶಿಕ್ಷಣ ಪಡೆದರೆ ಸಮಾಜ ಪ್ರಬುದ್ಧವಾಗುತ್ತದೆ ಎಂಬುದು ಅವರ ಆಶಯವಾಗಿತ್ತು. ಮದ್ಯಪಾನದಿಂದ ದೂರವಿರಬೇಕು ಹಾಗೂ ವಾದ ಮಾಡಿ ಗೆಲ್ಲುವುದಕ್ಕಿಂತ ತಿಳಿಹೇಳಿ ವ್ಯಕ್ತಿಯ ಮನಃಪರಿವರ್ತನೆ ಮಾಡಬೇಕು ಎಂಬ ವಿಚಾರಧಾರೆಗಳನ್ನು ಅವರು ಪ್ರತಿಪಾದಿಸಿದ್ದರು ಎಂದು ಸ್ಮರಿಸಿದರು.

ಅಂದು ಕೆಲವು ದೇವಾಲಯಗಳಲ್ಲಿ ಶೋಷಿತ ವರ್ಗದವರಿಗೆ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ನಾರಾಯಣ ಗುರುಗಳೇ ಶಿವನ ದೇವಾಲಯಗಳನ್ನು ನಿರ್ಮಿಸಿ ಎಲ್ಲರಿಗೂ ಪ್ರವೇಶ ಕಲ್ಪಿಸಿದರು. ಕೇರಳದಿಂದ ಉತ್ತರ ಕನ್ನಡದವರೆಗೆ ೩೦ಕ್ಕೂ ಹೆಚ್ಚು ಶಿವ ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಮಹಾನ್ ಸಮಾಜ ಸುಧಾರಕರ ಪರಂಪರೆಯಲ್ಲಿ ಬಂದಿರುವ ಬಿಲ್ಲವ ಸಮಾಜದವರು ಹೆಮ್ಮೆ ಪಡುವಂತಿದೆ ಎಂದು ಹೇಳಿದರು.

ಶಿರವಾಸೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ದಾನ ಮಾಡಿದ ಪ್ರೇಮಾಕ್ಷಿ ಮತ್ತು ಸಂಜೀವಪ್ಪ ಪೂಜಾರ್ ಅವರ ಕೊಡುಗೆ ಸ್ಮರಣೀಯವಾಗಿದೆ. ಅವರು ಜಾಗ ನೀಡಿದ ಫಲವಾಗಿ ಭವನ ನಿರ್ಮಾಣಕ್ಕೆ ಶಾಸಕ ರಾಜೇಗೌಡರು ಸೇರಿದಂತೆ ಹಲವು ಜನಪ್ರತಿನಿಧಿಗಳು ಅನುದಾನ ಒದಗಿಸಿದ್ದಾರೆ. ದಾನಿಗಳು ಹಾಗೂ ಸಮಾಜದ ಮುಖಂಡರ ಸಹಕಾರದಿಂದ ಇಂದು ಸುಂದರ ಸಮುದಾಯ ಭವನ ನಿರ್ಮಾಣಗೊಂಡಿದೆ. ಇದಕ್ಕಾಗಿ ಶ್ರಮಿಸಿದ ಬಿಲ್ಲವ ಸಮಾಜ ಸೇವಾ ಸಂಘದ ಸಿರ್ವಾಸೆ ಹೋಬಳಿಯ ಎಲ್ಲ ಪದಾಧಿಕಾರಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ದಕ್ಷಿಣ ಕನ್ನಡ ಭಾಗದಿಂದ ಉದ್ಯೋಗ ಹಾಗೂ ಬದುಕು ಅರಸಿ ಮಲೆನಾಡಿಗೆ ವಲಸೆ ಬಂದಿರುವ ಈಡಿಗ, ಬಿಲ್ಲವ ಸಮಾಜದ ಅನೇಕ ಕುಟುಂಬಗಳು ಈ ಭಾಗದಲ್ಲಿ ನೆಲೆಸಿವೆ. ನಗರದಿಂದ ಸುಮಾರು ೪೦ ಕಿ.ಮೀ. ದೂರದಲ್ಲಿರುವ ಸಿರ್ವಾಸೆಯಲ್ಲಿ ನಿರ್ಮಾಣಗೊಂಡಿರುವ ಈ ಸಮುದಾಯ ಭವನವು ಸಮಾಜದ ಕುಟುಂಬಗಳ ಸಣ್ಣಪುಟ್ಟ ಸಮಾರಂಭಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗಲಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ನಾರಾಯಣ ಗುರುಗಳ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಸಮಾನತೆ, ಸಹಬಾಳ್ವೆ ಮತ್ತು ಸಂಘಟನೆಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್ ಎಂ ಸತೀಶ್, ಕಾಂಗ್ರೆಸ್ ಮುಖಂಡರಾದ ಎಂ.ಎಲ್ ಮೂರ್ತಿ ಹಾಗೂ ಬಿಲ್ಲವ ಸಮಾಜದ ಮುಖಂಡರು ಉಪಸ್ಥಿತರಿದ್ದರು

Billava Community Hall Inaugurated in Shiravase Village

Share

Leave a comment

Leave a Reply

Your email address will not be published. Required fields are marked *

Don't Miss

ಕೊರಿಯರ್‌ನಲ್ಲಿ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ₹2.05 ಲಕ್ಷ ವಂಚನೆ

ಚಿಕ್ಕಮಗಳೂರು: ವಿದೇಶದಿಂದ ಕೊರಿಯರ್ ಮೂಲಕ ಗಿಫ್ಟ್ ಹಾಗೂ ಹಣ ಕಳುಹಿಸುವುದಾಗಿ ನಂಬಿಸಿ ವಿವಿಧ ಶುಲ್ಕಗಳ ನೆಪದಲ್ಲಿ ದಂಪತಿಯಿಂದ ₹2.05 ಲಕ್ಷ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ತೊಗರಿಹಂಕಲ್ ಗ್ರಾಮ...

ಕಾಂಗ್ರೆಸ್ ಮುಖಂಡ ಎಂ.ಎಸ್. ಅನಂತ್ ನಿಧನ

ಚಿಕ್ಕಮಗಳೂರು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಂ.ಎಸ್. ಅನಂತ್ (52 )ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಂತ್ ಅವರಿಗೆ ಬೆಂಗಳೂರಿನ...

Related Articles

ಜಿಪಂ-ತಾಪಂ ಮೀಸಲಾತಿ ಗುಮ್ಮ : ಚುನಾವಣೆಗೆ ಬ್ರೇಕ್ ?

ಚಿಕ್ಕಮಗಳೂರು:  ಕಳೆದ ಐದಾರು ವರ್ಷಗಳಿಂದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ವಿಘ್ನದ ಮೇಲೆ...

ಕಡೂರಿನಲ್ಲಿ ಕಾರು–ಬೈಕ್ ಡಿಕ್ಕಿಯಲ್ಲಿ ಯುವಕ ಸಾವು

ಕಡೂರು: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತಪಟ್ಟಿದ್ದು,...

ಕಾರ್ಖಾನೆಗಳಿಂದ ಮಾಲಿನ್ಯ ಖಂಡಿಸಿ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ರೈತರ ಭೂಮಿ ಮತ್ತು ಗ್ರಾಮಸ್ಥರ ಹಕ್ಕುಗಳಿಗೆ ಉಂಟಾಗಿರುವ ಸಮಸ್ಯೆಗ ಳನ್ನು ಪರಿಹರಿಸುವಂತೆ ಒತ್ತಾಯಿಸಿ ಗೌಡನಹಳ್ಳಿ...

ಬಸ್ ಏರಿಕೆ ಖಂಡಿಸಿ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ದರ ಏರಿಕೆಗೊಳಿಸಿ ಸಾರ್ವಜನಿಕರಿಗೆ ಬರೆ ಹಾಕು ತ್ತಿರುವ ರಾಜ್ಯಸರ್ಕಾರದ ವಿರುದ್ಧ ಬುಧವಾರ...