Home namma chikmagalur chikamagalur ಕಾರ್ಖಾನೆಗಳಿಂದ ಮಾಲಿನ್ಯ ಖಂಡಿಸಿ ರೈತ ಸಂಘ ಪ್ರತಿಭಟನೆ
chikamagalurHomeLatest Newsnamma chikmagalur

ಕಾರ್ಖಾನೆಗಳಿಂದ ಮಾಲಿನ್ಯ ಖಂಡಿಸಿ ರೈತ ಸಂಘ ಪ್ರತಿಭಟನೆ

Share
Share

ಚಿಕ್ಕಮಗಳೂರು: ರೈತರ ಭೂಮಿ ಮತ್ತು ಗ್ರಾಮಸ್ಥರ ಹಕ್ಕುಗಳಿಗೆ ಉಂಟಾಗಿರುವ ಸಮಸ್ಯೆಗ ಳನ್ನು ಪರಿಹರಿಸುವಂತೆ ಒತ್ತಾಯಿಸಿ ಗೌಡನಹಳ್ಳಿ ಗ್ರಾಮಸ್ಥರು ಬುಧವಾರ ರೈತ ಸಂಘ-ಹಸಿರು ಸೇನೆ, ವಿವಿ ಧ ಪ್ರಗತಿಪರ-ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಆಜಾದ್‌ಪಾರ್ಕ್ ಸಮೀಪ ಪ್ರತಿಭಟನೆ ನಡೆ ಸಿದರು.

ತಾಲ್ಲೂಕಿನ ಅಂಬಳೆ ಹೋಬಳಿ ಗೌಡನಹಳ್ಳಿ ಗ್ರಾಮದಿಂದ ಸುಮಾರು ನೂರಾರು ರೈತರು ಪಾದಯಾ ತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಕಣ್ಣಾರೆ ಸಮಸ್ಯೆ ನೋಡಿ, ನ್ಯಾಯ ಒದಗಿಸಿ ಎಂದು ಮನವಿ ಸಲ್ಲಿಸು ವ ವೇಳೆಯಲ್ಲಿ ರೈತರು ತೆರಳಿದಾಗ ಪೊಲೀಸರು ಜಿಲ್ಲಾಸ್ಪತ್ರೆ ಸಮೀಪದಲ್ಲೇ ತಡೆಹಿಡಿದರು.

ಈ ಕುರಿತು ಮಾತನಾಡಿದ ರೈತ ಸಂಘದ ಸದಸ್ಯ ಸುನೀಲ್‌ಕುಮಾರ್ ಗೌಡನಹಳ್ಳಿ ಗ್ರಾಮಸ್ಥರ ಪ್ರತಿ ಭಟನೆ ಕಳೆದ ಐದಾರು ದಿನಗಳಿಂದ ನಡೆಯುತ್ತಿದ್ದರೂ, ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಈ ಬಗ್ಗೆ ಗ್ರಾಮಕ್ಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಸಮಸ್ಯೆ ಪರಿಶೀಲಿಸಬೇಕು ಎಂ ದು ಮನವಿ ಸಲ್ಲಿಸಲು ಬಂದಿದ್ದೇವೆ ಎಂದರು.

ಗ್ರಾಮಸ್ಥರ ಸಮ್ಮುಖದಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗಳು ವೈಜ್ಞಾನಿಕವಾಗಿ ಮತ್ತು ತಾಂ ತ್ರಿಕವಾಗಿ ದೃಢಪಟ್ಟಲ್ಲಿ ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಪ್ರಮುಖ ನಿರ್ಣಯವಾಗಿದೆ. ಅದಕ್ಕಾಗಿ ನೂರಾರು ರೈತರು ಬಾಂಧವರು ಪಾದಯಾತ್ರೆ ಮೂಲಕ ಜಿಲ್ಲಾಡಳಿತಕ್ಕೆ ನೀಡು ತ್ತಿರುವ ಪ್ರೀತಿಯ ಆಹ್ವಾನ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳು ಪ್ರಜಾಸೇವೆ ಯೋಜನೆ ಜಾರಿಗೊಳಿಸಿ, ಅಧಿಕಾರಿಗಳು, ಸಚಿವರನ್ನು ಜನ ರೊಂದಿಗೆ ಸಮಸ್ಯೆ ಆಲಿಸಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಆದರೆ ಗೌಡನಹಳ್ಳೀ ಗ್ರಾಮಸ್ಥರ ಐದಾರು ತಿಂಗಳ ಪ್ರತಿಭಟನೆಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸದೇ ಮುಖ್ಯಮಂತ್ರಿಗಳ ಆದೇಶ ಉಲ್ಲಂಘಿಸಿದ್ದಾರೆ ಎಂದು ದೂರಿದರು.

ಗೌಡನಹಳ್ಳಿ ಭಾಗದಲ್ಲಿ ಅತಿಹೆಚ್ಚು ಕೂಲಿಕಾರ್ಮಿಕರ ವಾಸಿಸುವ ಗ್ರಾಮ. ಕಾರ್ಖಾನೆಗಳಿಂದ ಹೊರ ಸೂಸುವ ವಿಷಅನಿಲ, ದೂಳಿನಿಂದ ಗ್ರಾಮಸ್ಥರ ಆರೋಗ್ಯದಲ್ಲಿ ಸಮಸ್ಯೆ ಕಾಡುತ್ತಿದೆ. ಕಾರ್ಖಾನೆಗಳ ನೀರು ಜಮೀನು, ಕೆರೆಗೆ ಹರಿಸುವ ಪರಿಣಾಮ ಬೆಳೆ ಕರಗಿ ಹೋಗುತ್ತಿದೆ. ಕೆರೆಯ ಮೀನುಗಳು ಸಾಯುತ್ತಿವೆ ಎಂದು ಆರೋಪಿಸಿದರು.

ವಕೀಲ ಅನಿಲ್ ಮಾತನಾಡಿ ಗೌಡನಹಳ್ಳಿ ಗ್ರಾಮಸ್ಥರು ಭೂಮಿ, ಮನೆಗಾಗಿ ಪಾದಯಾತ್ರೆ ಬಂದಿಲ್ಲ. ಮಾಲಿನ್ಯ ತಡೆಗಟ್ಟಿ ಆರೋಗ್ಯಯುತ ಬದುಕು, ಭವಿಷ್ಯದ ಮಕ್ಕಳ ಹಿತದೃಷ್ಟಿಯಿಂದ ಹಸಿರು, ನೀಲಿ ಶಾಲು ಹಾಕಿ ಪಾದಯಾತ್ರೆ ಮಾಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ದೇಶದ ಬೆನ್ನೆಲುಬು ರೈತರ ಸಮಸ್ಯೆ ಆಲಿಸು ವುದು ಆದ್ಯ ಕರ್ತವ್ಯ ಎಂದರು.

ಈಗಾಗಲೇ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಲ್ಲ, ಕೊಳಕು ನೀರಿನಿಂದ ಜಾನುವಾರುಗಳು ಸಾವನ್ನ ಪ್ಪುತ್ತಿವೆ. ಅಲ್ಲದೇ ಕೊಳಚೆ ನೀರು ಜಮೀನಿಗೆ ಹರಿದಿರುವ ಪರಿಣಾಮ ಉತ್ತಮ ಬೆಳೆಗಳು ಬೆಳೆಯಲಾಗದ ಸ್ಥಿತಿ ಗೌಡನಹಳ್ಳಿ ಗ್ರಾಮಸ್ಥರದ್ದಾಗಿದೆ. ದೇಶದ ಸಂವಿಧಾನದಡಿ ಪ್ರತಿಭಟಿಸುವ ಹಕ್ಕಿದೆ. ಆದರೆ ಪೊಲೀಸರು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ಹೇಳಿದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ ಗೌಡನಹಳ್ಳಿ ಗ್ರಾಮದಲ್ಲಿ ಅನೇಕ ಕೈಗಾರಿಕಾ ಕಾ ರ್ಖಾನೆಗಳು ಸ್ಥಾಪನೆಗೊಂಡಿದೆ. ಈ ಕಾರ್ಖಾನೆಗಳು ವಾಯುಮಾಲಿನ್ಯ ಉಂಟು ಮಾಡಿ ಗೌಡನಹಳ್ಳೀ ಮೂಲ ಗ್ರಾಮಸ್ಥರಿಗೆ ತೊಂದರೆ ನೀಡುವುದು ಸರಿಯಲ್ಲ. ಈ ಸಮಸ್ಯೆ ಆಲಿಸಲು ಜಿಲ್ಲಾ ದಂಡಾಧಿಕಾರಿ ಅಗ ತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮನವಿ ಸ್ವೀಕರಿಸಿದ ದಿನಾಂಕ ನಿಗಧಿಸುತ್ತೇವೆ ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಡಿ.ರಾಮೇಗೌಡ, ಕೆ.ಟಿ.ರಾಧಾಕೃಷ್ಣ, ಹುಣಸೇಮಕ್ಕಿ ಲಕ್ಷ್ಮಣ್, ಎಂ.ಸಿ.ಗಣೇಶಗೌಡ, ಎಂ.ಚಂದ್ರಶೇಖರ್, ನಜ್ಮಾಆಲಿ, ಚಿನ್ನಲಕ್ಷ್ಮೀ, ಕೆ.ಕೆ.ರವಿ, ಗ್ರಾಮಸ್ಥರಾಧ ಮೋಹನ್ ಗೌಡ, ಗಂಗಾಧರ್, ಚಂದ್ರೇಗೌಡ, ಹರೀಶ್‌ಗೌಡ, ಮಂಜೇಗೌಡ, ಶಿವಶಂಕರ್, ಕೆಂಚೇಗೌಡ, ಲಕ್ಷ್ಮಣಗೌಡ, ಗೋವಿಂದೇಗೌಡ, ದರ್ಶನ್, ವೆಂಕಟೇಶ್‌ಗೌಡ, ನಿಂಗೇಗೌಡ, ಚಿಕ್ಕೇಗೌಡ, ಸುಬ್ಬೇಗೌಡ ಮುಂತಾದವರಿ ದ್ದರು.

Farmers’ association protests against pollution from factories

Share

Leave a comment

Leave a Reply

Your email address will not be published. Required fields are marked *

Don't Miss

ಕೊರಿಯರ್‌ನಲ್ಲಿ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ₹2.05 ಲಕ್ಷ ವಂಚನೆ

ಚಿಕ್ಕಮಗಳೂರು: ವಿದೇಶದಿಂದ ಕೊರಿಯರ್ ಮೂಲಕ ಗಿಫ್ಟ್ ಹಾಗೂ ಹಣ ಕಳುಹಿಸುವುದಾಗಿ ನಂಬಿಸಿ ವಿವಿಧ ಶುಲ್ಕಗಳ ನೆಪದಲ್ಲಿ ದಂಪತಿಯಿಂದ ₹2.05 ಲಕ್ಷ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ತೊಗರಿಹಂಕಲ್ ಗ್ರಾಮ...

ಕಾಂಗ್ರೆಸ್ ಮುಖಂಡ ಎಂ.ಎಸ್. ಅನಂತ್ ನಿಧನ

ಚಿಕ್ಕಮಗಳೂರು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಂ.ಎಸ್. ಅನಂತ್ (52 )ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಂತ್ ಅವರಿಗೆ ಬೆಂಗಳೂರಿನ...

Related Articles

ಜಿಪಂ-ತಾಪಂ ಮೀಸಲಾತಿ ಗುಮ್ಮ : ಚುನಾವಣೆಗೆ ಬ್ರೇಕ್ ?

ಚಿಕ್ಕಮಗಳೂರು:  ಕಳೆದ ಐದಾರು ವರ್ಷಗಳಿಂದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ವಿಘ್ನದ ಮೇಲೆ...

ಕಡೂರಿನಲ್ಲಿ ಕಾರು–ಬೈಕ್ ಡಿಕ್ಕಿಯಲ್ಲಿ ಯುವಕ ಸಾವು

ಕಡೂರು: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತಪಟ್ಟಿದ್ದು,...

ಶಿರವಾಸೆ ಗ್ರಾಮದಲ್ಲಿ ಬಿಲ್ಲವ ಸಮುದಾಯ ಭವನ ಲೋಕಾರ್ಪಣೆ

ಚಿಕ್ಕಮಗಳೂರು: ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಸಂಘಟಿತ ಪ್ರಯತ್ನದ ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಶ್ರೀ...

ಬಸ್ ಏರಿಕೆ ಖಂಡಿಸಿ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ದರ ಏರಿಕೆಗೊಳಿಸಿ ಸಾರ್ವಜನಿಕರಿಗೆ ಬರೆ ಹಾಕು ತ್ತಿರುವ ರಾಜ್ಯಸರ್ಕಾರದ ವಿರುದ್ಧ ಬುಧವಾರ...