Home namma chikmagalur chikamagalur ಜಿಪಂ-ತಾಪಂ ಮೀಸಲಾತಿ ಗುಮ್ಮ : ಚುನಾವಣೆಗೆ ಬ್ರೇಕ್ ?
chikamagalurHomeLatest Newsnamma chikmagalurPolitical News

ಜಿಪಂ-ತಾಪಂ ಮೀಸಲಾತಿ ಗುಮ್ಮ : ಚುನಾವಣೆಗೆ ಬ್ರೇಕ್ ?

Share
Share

ಚಿಕ್ಕಮಗಳೂರು:  ಕಳೆದ ಐದಾರು ವರ್ಷಗಳಿಂದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ವಿಘ್ನದ ಮೇಲೆ ವಿಘ್ನದಿಂದಾಗಿ ಚುನಾವಣೆ ಮುಂದೂಡತ್ತಾ ಬರಲಾಗಿತ್ತು.ಈ ಸಂಬಂಧ ಕೋರ್ಟ್ ನಲ್ಲಿ ಹಲವು ವರ್ಷಗಳಿಂದ ವಾದ,ವಿವಾದ ನಡೆದು ಚುನಾವಣೆ ನಡೆಯುತ್ತದೆ ಎಂಬ ವಾತಾವರಣ ಕೂಡಿ ಬಂದಿತ್ತು.

ಸುಪ್ರೀಂ ಕೋರ್ಟ್ ನ ಆದೇಶದ ಮೇರೆಗೆ ಚುನಾವಣೆ ನಡೆಸಲು ಮೀಸಲಾತಿ ನಿಗದಿಪಡಿಸಿ ,ದಿನಾಂಕ ನಿಗದಿಗೆ ತಯಾರಿ ನಡೆದಿತ್ತು. ಮೀಸಲಾತಿ ನಿಗದಿ ಪಡಿಸಿದ ಬಗ್ಗೆ ಇನ್ನೂರಕ್ಕೂ ಹೆಚ್ಚು ಶಾಸಕುಗಳಿಗೆ,ಮುಖಂಡ ರಿಗೆ, ಚುನಾವಣೆಗೆ ಸ್ಪರ್ಧೆ ಮಾಡ ಬೇಕೆಂಬ ಆಕಾಂಕ್ಷಿಗಳಿಗೆ ತೀವ್ರವಾದ ಅಸಮಾಧಾನ ಉಂಟಾಯಿತು. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಸ್ಟಿಂಗ್ ಪ್ರಕರಣ ರಾಜಕೀಯ ರಾಡಿ ಎಬ್ಬಿಸಿತು.

ಇದರಿಂದಾಗಿ ಚುನಾವಣೆ ಎದುರಿಸಲು ಆಡಳಿತ ರೂಢ ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಸದಸ್ಯರುಗಳು ಹಿಂದೇಟು ಹಾಕುವಂತೆ ಮಾಡಿತು. ಈ ಮಧ್ಯೆ ಹಲವು ಶಾಸಕರು ಮೀಸಲಾತಿ ಬದಲಾವಣೆಗೆ ಪತ್ರ ನೀಡಿ ಒತ್ತಡ ತಂದಿದ್ದರಿಂದ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಮೀಸಲಾತಿ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಯಿತು.

ಮೀಸಲಾತಿ ಬದಲಾವಣೆಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆದಿದ್ದು ನೋಡಿದ ಸಚಿವ ಸಂಪುಟದಲ್ಲಿ ಗೊಂದಲ ಉಂಟಾಯಿತು ಮೀಸಲಾತಿ ಬಹುತೇಕ ಪಟ್ಟಿ ಬದಲಾಯಿಸ ಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಚುನಾವಣೆ ಮಂದೂಡಿ ಕೈ ತೊಳೆದು ಕೊಳ್ಳುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಸರ್ಕಾರ ಸದ್ಯಕ್ಕೆ ಚುನಾವಣೆಗೆ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ತಲೆನೋವು ಏಕೆಂದರೆ ಚುನಾವಣೆ ಎಂಬ ಗುಮ್ಮ ಮುಂದಿನ ವಿಧಾನ ಸಭಾ ಚುನಾವಣೆ ಮೇಲೆ ದುಷ್ಪರಿಣಾಮ ಬೀರಿದರೆ ಕಷ್ಟ, ಕಷ್ಟ.ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹಿನ್ನಡೆಯಾದರೆ ಅಧಿಕಾರವಿಲ್ಲದೆ ಹಲವು ವರ್ಷಗಳು ಕಾಲ ಹಾಕುವುದು ಬಲು ಕಷ್ಟ.

ರಿಸ್ಕ್ ತೆಗೆದು ಕೊಳ್ಳುವ ಬದಲಿಗೆ ಸ್ಥಳೀಯ ಚುನಾವಣೆಗೆ ಎಳ್ಳು ನೀರು ಬಿಟ್ಟು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯಲು ಬೇಕಾದ ತಂತ್ರ,ಕುತಂತ್ರದ ಮೊರೆ ಹೋಗಲು ಪ್ಲಾನ್ ಮಾಡುತ್ತಿದೆ,ಚುನಾವಣೆ ಕೋರ್ಟ್ ಆದೇಶದಂತೆ ನಡೆಸುವ ಅನಿವಾರ್ಯತೆ ಉಂಟಾದರೆ ಪ್ರಕಟವಾಗಿರುವ ಮೀಸಲಾತಿಯಂತೆ ಚುನಾವಣೆ ನಡೆಸುವುದು ಖಚಿತ.

ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ,ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಚುನಾಯಿತ ಜನ ಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳು ಆಡಳಿತ ದಲ್ಲಿ “ದರ್ಬಾರ್” ಎಗ್ಗಿಲ್ಲದೆ ನಡೆಯುತ್ತಿದೆ.ಹೇಳುವರು ಯಾರು ಇಲ್ಲ ಕೇಳುವವರು ಯಾರು ಇಲ್ಲ ಅಧಿಕಾರಿಗಳು ಬೇಕಾ,ಬಿಟ್ಟಿಯಾಗಿ ಬಂದು ಹೋಗುವುದರ ಜೊತೆಗೆ ಹಿಂದೆ, ಮುಂದೆ ತಿನ್ನುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಜನ ಬೇಸತ್ತು ದೂರುತ್ತಿದ್ದಾರೆ.ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಸಕರಿಗೂ ಬೇಡವಾಗಿದೆ.

The specter of ZP-TP reservations: A halt to the elections?

Share

Leave a comment

Leave a Reply

Your email address will not be published. Required fields are marked *

Don't Miss

ಕೊರಿಯರ್‌ನಲ್ಲಿ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ₹2.05 ಲಕ್ಷ ವಂಚನೆ

ಚಿಕ್ಕಮಗಳೂರು: ವಿದೇಶದಿಂದ ಕೊರಿಯರ್ ಮೂಲಕ ಗಿಫ್ಟ್ ಹಾಗೂ ಹಣ ಕಳುಹಿಸುವುದಾಗಿ ನಂಬಿಸಿ ವಿವಿಧ ಶುಲ್ಕಗಳ ನೆಪದಲ್ಲಿ ದಂಪತಿಯಿಂದ ₹2.05 ಲಕ್ಷ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ತೊಗರಿಹಂಕಲ್ ಗ್ರಾಮ...

ಕಾಂಗ್ರೆಸ್ ಮುಖಂಡ ಎಂ.ಎಸ್. ಅನಂತ್ ನಿಧನ

ಚಿಕ್ಕಮಗಳೂರು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಂ.ಎಸ್. ಅನಂತ್ (52 )ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಂತ್ ಅವರಿಗೆ ಬೆಂಗಳೂರಿನ...

Related Articles

ಕಡೂರಿನಲ್ಲಿ ಕಾರು–ಬೈಕ್ ಡಿಕ್ಕಿಯಲ್ಲಿ ಯುವಕ ಸಾವು

ಕಡೂರು: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತಪಟ್ಟಿದ್ದು,...

ಶಿರವಾಸೆ ಗ್ರಾಮದಲ್ಲಿ ಬಿಲ್ಲವ ಸಮುದಾಯ ಭವನ ಲೋಕಾರ್ಪಣೆ

ಚಿಕ್ಕಮಗಳೂರು: ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಸಂಘಟಿತ ಪ್ರಯತ್ನದ ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಶ್ರೀ...

ಕಾರ್ಖಾನೆಗಳಿಂದ ಮಾಲಿನ್ಯ ಖಂಡಿಸಿ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ರೈತರ ಭೂಮಿ ಮತ್ತು ಗ್ರಾಮಸ್ಥರ ಹಕ್ಕುಗಳಿಗೆ ಉಂಟಾಗಿರುವ ಸಮಸ್ಯೆಗ ಳನ್ನು ಪರಿಹರಿಸುವಂತೆ ಒತ್ತಾಯಿಸಿ ಗೌಡನಹಳ್ಳಿ...

ಬಸ್ ಏರಿಕೆ ಖಂಡಿಸಿ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ದರ ಏರಿಕೆಗೊಳಿಸಿ ಸಾರ್ವಜನಿಕರಿಗೆ ಬರೆ ಹಾಕು ತ್ತಿರುವ ರಾಜ್ಯಸರ್ಕಾರದ ವಿರುದ್ಧ ಬುಧವಾರ...