ಚಿಕ್ಕಮಗಳೂರು: ಕಡೂರು ತಾಲೂಕು ಪಂಚನಹಳ್ಳಿ ಹೋಬಳಿ ಡಿ.ಹೊಸಹಳ್ಳಿ ಗ್ರಾಮದ ತಮ್ಮ ಪಿತ್ರಾರ್ಜಿತ ಆಸ್ತಿಗೆ ನಕಲಿ ದಾಖಲೆಯನ್ನು ಸೃಷ್ಟಿಸಿ ಕೆಲವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಯಶೋಧ ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಂದೆಗೆ ಪಿತ್ರಾರ್ಜಿತವಾಗಿ 3 ಎಕರೆ ಜಮೀನು ಬಂದಿತ್ತು. ನಾನು ಒಬ್ಬಳೇ ಮಗಳಾದ ಕಾರಣ ಆಸ್ತಿಯನ್ನು ನನ್ನ ತಂದೆ ನನ್ನ ಹೆಸರಿಗೆ ಮರಣ ಶಾಸನ ಪತ್ರ ಮಾಡಿಟ್ಟಿದ್ದರು ಎಂದು ಮಾಹಿತಿ ನೀಡಿದರು.
ತಾವು ತಮ್ಮ ಮಕ್ಕಳ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಜೀವನ ಆರಂಭಿಸಿದೆವು. ಇದೇ ಅವಧಿಯಲ್ಲಿ ಗ್ರಾಮದ ಕೆಲವರು ತಮ್ಮ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚೇತನಾ ಶೆಟ್ಟಿ, ಯಶೋಧ, ಪಂಕಜ, ಶಿಲ್ಪಾ, ಸ್ವಪ್ನಾ ಮತ್ತಿತರರಿದ್ದರು.
Fraud by creating fake land documents
Leave a comment