Home namma chikmagalur chikamagalur ಶಿಕ್ಷಣ ಇರುವುದು ಕೇವಲ ಸರ್ಕಾರಿ ಕೆಲಸಕ್ಕಾಗಿ ಅಲ್ಲ
chikamagalurHomeLatest Newsnamma chikmagalur

ಶಿಕ್ಷಣ ಇರುವುದು ಕೇವಲ ಸರ್ಕಾರಿ ಕೆಲಸಕ್ಕಾಗಿ ಅಲ್ಲ

Share
Share

ಚಿಕ್ಕಮಗಳೂರು: ಶಿಕ್ಷಣ ಇರುವುದು ಕೇವಲ ಸರ್ಕಾರಿ ಕೆಲಸಕ್ಕಾಗಿ ಅಲ್ಲ, ಮುಂದೆ ಉತ್ತಮ ಬದುಕನ್ನು ರೂಪಿಸಲು ಶಿಕ್ಷಣದ ಅವಶ್ಯಕತೆ ಇದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಕಿವಿ ಮಾತು ಹೇಳಿದರು.

ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಸಂಘ ಶುಕ್ರವಾರ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಪಡೆದವರಿಗೆ ಬದುಕಲು ನೂರಾರು ದಾರಿಗಳು ಇವೆ ಎಂದರು.

ದುಡಿಮೆಯಲ್ಲಿನ ಒಂದಿಷ್ಟು ಹಣವನ್ನು ಕೂಡಿಡಬೇಕು, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಬೇಕು. ನೀವುಗಳು ಶ್ರಮ ಜೀವಿಗಳು, ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರೆ ಮುಂದೆ ಅವರುಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಕಾರ್ಮಿಕರ ಹಕ್ಕು ಪ್ರತಿಪಾದನೆ ಮಾಡಲು ಕಾರ್ಮಿಕರ ದಿನಾಚರಣೆಯನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಯಿತು, ರೈತರು ಈ ದೇಶದ ಬೆನ್ನೆಲುಬು ಎನ್ನುತ್ತೇವೆ. ಹಾಗೆಯೇ ಕಾರ್ಮಿಕರು ಈ ದೇಶದ ಬೆನ್ನೆಲುಬು. ಎಲ್ಲಾ ವಿಭಾಗಗಳಲ್ಲೂ ಕಾರ್ಮಿಕರಿದ್ದಾರೆ, ಎಲ್ಲಾ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಲು ದಿನಾಚರಣೆಯನ್ನು ಮಾಡಲಾಗುತ್ತಿದೆ ಎಂದರು.

ಎಲ್ಲರಿಗೂ ಉತ್ತಮವಾದ ವೇತನ ಸಿಗಲಿ, ಕೆಲಸದ ವಾತಾವರಣ ಇರಲಿ, ಸಾಮಾಜಿಕ ಭದ್ರತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಈ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ ಎಂದ ಅವರು, ಒಗ್ಗಟ್ಟು ಮತ್ತು ಸಾಮಾಜಿಕ ನ್ಯಾಯ ಕಾರ್ಮಿಕರಿಗೆ ಸಿಗಬೇಕು ಎಂದು ಹೇಳಿದರು.

ನಿಮಗೆ, ಹಕ್ಕುಪತ್ರ ಕೊಡಲಾಗಿದೆಯಾ, ಪರಿಶೀಲನೆ ಮಾಡಿಕೊಳ್ಳಿ. ಏಕೆಂದರೆ ತುಂಬಾ ಹಕ್ಕು ಪತ್ರಗಳಲ್ಲಿ ಸರಿಯಾದ ದಾಖಲೆಗಳು ಇಲ್ಲ, ಪತ್ರಗಳನ್ನು ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿ ಪರಿಶೀಲಿಸಿ, ಅದಕ್ಕೆ ಬೇಕಾದ ಪೂರಕದ ದಾಖಲೆಗಳನ್ನು ನಾನು, ನಮ್ಮ ಸರ್ಕಾರ ಒದಗಿಸಿ ಕೊಡಲಿದೆ ಎಂದ ಶಾಸಕರು, ನಿವೇಶನ ರಹಿತ ಕಾರ್ಮಿಕರ ಪಟ್ಟಿಯನ್ನು ಸಿದ್ಧಪಡಿಸಿ ತೆಗೆದುಕೊಂಡು ಬನ್ನಿ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಬಡವರ ಹಾಗೂ ದೀನ ದಲ್ಲಿತರ ಪರ, ಅಲ್ಪಸಂಖ್ಯಾತ ಪರ ಯೋಚನೆ ಮಾಡುವಂತ ಮುಖ್ಯಮಂತ್ರಿ. ನಮ್ಮ ಸರ್ಕಾರ ಉಚಿತ ವಿದ್ಯುತ್, ಪ್ರತಿ ಕುಟುಂಬಕ್ಕೆ ೧೦ ಕೆಜಿ ಅಕ್ಕಿ, ಮಹಿಳೆಯರಿಗೆ ೨೦೦೦ ರು. ಉಚಿತ ಬಸ್ ಪ್ರಯಾಣ ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.

ಡಾಕ್ಟರ್ ಮಗ ಡಾಕ್ಟರ್, ಇಂಜಿನಿಯರ್ ಮಗ ಇಂಜಿನಿಯರ್ ಆಗಬೇಕೆಂಬ ಕಾಲ ಬದಲಾಗಿದೆ. ಯಾರ ಮಕ್ಕಳು ಏನು ಬೇಕಾದರೂ ಆಗಬಹುದು. ನಿಮ್ಮ ಬದುಕಿನಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯದು ಆಗಬೇಕಾದರೆ, ನಿಮ್ಮ ಮಕ್ಕಳಿಗೆ ಸಮ ಸಮ ಸಮಾಜ ನಿರ್ಮಾಣ ಆಗಬೇಕಾದರೆ, ಶೋಷಿತರು, ಸಾಮಾಜಿಕ ಮುನ್ನಲೆಗೆ ಬರಬೇಕಾದರೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ಆ ಕೆಲಸದ ಬಗ್ಗೆ ನೀವು ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.

ಕಾರ್ಮಿಕರ ಕಠಿಣ ಪರಿಶ್ರಮ, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಗುರುತಿಸುವ ಮಹತ್ವದ ಜವಾಬ್ದಾರಿ ಸರ್ಕಾರದ್ದಾಗಬೇಕು. ಅವರಿಗೆ ನ್ಯಾಯಯುತವಾಗಿ ವೇತನವನ್ನು ಕೊಡುವಂತಹ, ಅವರು ಮಾಡುವಂತಹ ಕೆಲಸಕ್ಕೆ ಸಮಯವನ್ನು ನಿಗದಿಪಡಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ, ಇಂತಹ ಕಾರ್ಯಕ್ರಮಗಳ ಮೂಲಕ ಆಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಮಾಲಿ ಸಂಘದ ಅಧ್ಯಕ್ಷ ರಹಿಂ, ಕಾರ್ಯದರ್ಶಿ ಮಂಜುನಾಥ್, ನಗರಸಭಾ ಮಾಜಿ ಸದಸ್ಯರಾದ ಮಧು ಹಾಜರಿದ್ದರು.ಕಾರ್ಯಕ್ರಮದ ಅಂಗವಾಗಿ ನಡೆದ ಬೈಕ್ ರ್‍ಯಾಲಿಗೆ ಚಾಲನೆ ನೀಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು, ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಮಿಕರೊಂದಿಗೆ ಬೈಕ್ ಚಾಲನೆ ಮಾಡಿದರು.

Education is not just for government jobs.

Share

Leave a comment

Leave a Reply

Your email address will not be published. Required fields are marked *

Don't Miss

ನೋಟರಿ ವಿ.ಕೆ.ರಘುಯಿಂದ ನೀರಿನ ಮೇಲೆ ತೇಲುತ್ತಾ ಯೋಗ ಭಂಗಿ ಪ್ರದರ್ಶನ

ಚಿಕ್ಕಮಗಳೂರು: ಯೋಗ ಸಾಧಕ ನಗರದ ವಕೀಲ ಹಾಗೂ ನೋಟರಿ ವಿ.ಕೆ.ರಘು ಅವರು  ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನೀರಿನ ಮೇಲೆ ತೇಲುತ್ತಾ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ಬೈಪಾಸ್ ರಸ್ತೆಯ ನರ್ಚರ್...

ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

ಕಡೂರು: ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಲ್ಲೂರು ಗ್ರಾಮದ 20 ವರ್ಷದ ಚಂದನ್ ಮೃತಪಟ್ಟ ದುರ್ದೈವಿ. ಇತ್ತೀಚೆಗೆ...

Related Articles

ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಚೇರಿಯಿಂದ ಮೋಟಾರ್ ಸೈಕಲ್‌ನಲ್ಲಿ...

ಅಭಿವೃದ್ಧಿ ಕೆಲಸಗಳ ಬಗ್ಗೆ ಕೆಲವರು ಪೂರ್ವಗ್ರಪಿಡಿತರಾಗಿ ಮಾತನಾಡುತ್ತಿದ್ದಾರೆ

ಚಿಕ್ಕಮಗಳೂರು: ಅಭಿವೃದ್ಧಿ ಕೆಲಸಗಳ ಬಗ್ಗೆ ಕೆಲವರು ಪೂರ್ವಗ್ರಪಿಡಿತರಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಒಬ್ಬರಿಗೆ ಮಾತ್ರ ಗುತ್ತಿಗೆ...

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು...