Home namma chikmagalur chikamagalur ಮಿಥುನ್ ವಿರುದ್ಧ ಸಮಗ್ರ ತನಿಖೆ ಆಗ್ರಹ
chikamagalurHomeLatest Newsnamma chikmagalur

ಮಿಥುನ್ ವಿರುದ್ಧ ಸಮಗ್ರ ತನಿಖೆ ಆಗ್ರಹ

Share
Share

ಚಿಕ್ಕಮಗಳೂರು : ಔಷಧ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಸ್ಥಳೀಯ ಮೆಡಿಕಲ್ ಮಾಲೀಕರಿಗೆ ವಂಚಿಸಿರುವ ಆರೋಪದಡಿ ಬಂಧನವಾಗಿರುವ ಮಿಥುನ್ ಎಂಬ ವ್ಯಕ್ತಿಯೊಂದಿಗೆ ಜಿಲ್ಲಾ ಸರ್ಜನ್ ರ ಹೆಸರು ತಳುಕು ಹಾಕಿಕೊಂಡಿದ್ದು, ಈ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವಂತೆ ಲೀಸಾ ಫೌಂಡೇಶನಿನ ಅಧ್ಯಕ್ಷೆ ಸಂಗೀತಾ ಪ್ರಸಾದ್ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಆಸ್ಪತ್ರೆಗಳಿಗೆ ೧.೮ ಕೋಟಿ ರೂ. ಗಳ ಔಷಧಿ ಸರಬರಾಜು ಮಾಡಲು ಆದೇಶ ಕೊಡಿಸುವುದಾಗಿ ೩೬ ಲಕ್ಷ ರೂ. ಗಳನ್ನು ಮಿಥುನ್ ಎಂಬುವವರು ಪಡೆದು ವಂಚಿಸಿದ್ದರು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಣದ ವ್ಯವಹಾರ ನಕಲಿ ಐಎಎಸ್ ಅಧಿಕಾರಿ ಮಿಥುನ್ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು, ಆ ಎಫ್ ಐ ಆರ್ ನಲ್ಲಿ ಮಲ್ಲೆಗೌಡ ಜಿಲ್ಲಾಸ್ಪತ್ರೆಯ ಸರ್ಜನ್ ಚಂದ್ರಶೇಖರ್ ರವರ ಹೆಸರು ಸಹ ಸೇರ್ಪಡೆಯಾಗಿದೆ ಎಂದು ಹೇಳಿದರು.

ಈ ವ್ಯವಹಾರಗಳು ಸಂಪೂರ್ಣವಾಗಿ ಡಾ. ಚಂದ್ರಶೇಖರ್ ರವರ ಸಮ್ಮುಖದಲ್ಲಿಯೇ ನಡೆದಿದ್ದು, ಈ ವ್ಯವಹಾರದ ಬಗ್ಗೆ ಚಂದ್ರಶೇಖರ್ ರವರನ್ನು ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದ ಅವರು ಕೂಡಲೇ ಅವರನ್ನು ಅಮಾನತ್ತುಗೊಳಿಸಬೇಕು, ಪ್ರಕರಣದಲ್ಲಿ ಎ೨ ಆರೋಪಿಯನ್ನಾಗಿ ಸೇರಿಸಬೇಕು ಎಂದರು.

ಈ ಗೋಷ್ಟಿಯಲ್ಲಿ ಡಿಂಪಲ್, ಶರತ್, ಕೆಶವಮೂರ್ತಿ, ನರಸಿಂಹ ಮೂರ್ತಿ, ಮೋಹನ್ ಇದ್ದರು.

Demand for a comprehensive investigation against Mithun

Share

Leave a comment

Leave a Reply

Your email address will not be published. Required fields are marked *

Don't Miss

ಪ್ರಚೋದಕಾರಿ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷರ ಬಂಧನಕ್ಕೆ ಮನವಿ

ಚಿಕ್ಕಮಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಪ್ರಚೋದಕಾರಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡರುಗಳು...

ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊಡ್ಡ ಸವಾಲಾಗಿದೆ

ಚಿಕ್ಕಮಗಳೂರು: ಆಧುನಿಕ ಜೀವನ ಪದ್ಧತಿಯಲ್ಲಿ ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊ ಡ್ಡ ಸವಾಲಾಗಿ ಪರಿಣಾಮಿಸಿದೆ. ಪ್ರಸ್ತುತ ಕಾಲಕ್ಕೆ ಬೇಡವಾದರೂ, ಜನಿಸಿದ ನಂತರ ಅನುಸರಿಸಿಕೊಂಡು ಸೂ ಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಶ್ರೀ...

Related Articles

ಜಿಲ್ಲಾ ಆಸ್ಪತ್ರೆ ರಾಷ್ಟ್ರೀಯ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಸಮಿತಿ ಭೇಟಿ

ಚಿಕ್ಕಮಗಳೂರು:  ಕೇಂದ್ರ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ವಾಹಕ ಆಶ್ರಿತ ರೋಗಗಳ ನಿರ್ಮೂಲನಾ...

ಮರದ ದಾಸ್ತಾನು ಮಾಡಿದ್ದ ಅಂಗಡಿಗೆ ಬೆಂಕಿ

ಚಿಕ್ಕಮಗಳೂರು: ಮರದ ದಾಸ್ತಾನು ಮಾಡಿದ್ದ ಅಂಗಡಿಯೊಂದರಲ್ಲಿ ಬುಧವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ...

ಚಿಕ್ಕಮಗಳೂರು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆ ಇಲಾಖೆಯು ಚಿಕ್ಕಮಗಳೂರು ಮತ್ತು ಯಶವಂತಪುರ ನಡುವೆ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಮಹತ್ವದ...

ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯೊಂದು ದರ್ಶನ ನೀಡುವ ಮೂಲಕ...