Home ಡಿ.ಸಿ.ಸಿ. ಬ್ಯಾಂಕ್ ಕ್ಲೀನ್ ಸ್ವೀಪ್- ಕಿಂಗ್ ಮಾಸ್ಟರ್ ಬೋಜೇಗೌಡ, ಬುಗುರಿಯಾಗಿರುವ ಸಿ.ಟಿ.ರವಿ, ಮೌನಂ ಸಮ್ಮತಿ ಲಕ್ಷಣಂ ಕಾಂಗ್ರೆಸ್?
HomeLatest Newsnamma chikmagalur

ಡಿ.ಸಿ.ಸಿ. ಬ್ಯಾಂಕ್ ಕ್ಲೀನ್ ಸ್ವೀಪ್- ಕಿಂಗ್ ಮಾಸ್ಟರ್ ಬೋಜೇಗೌಡ, ಬುಗುರಿಯಾಗಿರುವ ಸಿ.ಟಿ.ರವಿ, ಮೌನಂ ಸಮ್ಮತಿ ಲಕ್ಷಣಂ ಕಾಂಗ್ರೆಸ್?

Share
Share

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕ್ಲೀನ್ ಸ್ವೀಪ್ ಮಾಡಿರುವ ಎನ್.ಡಿ.ಎ.ಕೂಟ ಕೇಕೆ ಹಾಕಿ ನಗೆ ಬೀರುತ್ತಿದೆ. ಜನತಾದಳದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರು ಕಿಂಗ್ ಮಾಸ್ಟರ್ ಎಂದು ಕಂಗೊಳಿಸುತ್ತಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಇದೇ ಬೋಜೇಗೌಡರನ್ನು ಬ್ಯಾಂಕ್ ನ ಒಳಗಡೆ ಬಿಟ್ಟು ಕೊಳ್ಳದೆ ಹೊರಗೆ ಅಟ್ಟಿಸಿಕೊಂಡು ಓಡಾಡಿದ್ದವ ಈಗ ಬೋಜೇಗೌಡರೇ ಗತಿ ಎನ್ನುವ ದುಸ್ಥಿತಿಗೆ ಬಂದಿದ್ದಾರೆ. ಇದೇ ಸಿ.ಟಿ.ರವಿ ಸೋಲಿಸಲು ಬಹಿರಂಗವಾಗಿ ಕೆರಳಿ ನಿಂತು ಹಾಲಿನ ಅಭಿಷೇಕ ಮಾಡಿಸಿಕೊಂಡವರು ಇಂದು ಬಿಜೆಪಿ ಜೊತೆಗೆ ಕೈ ಎತ್ತಿ ನಿಂತಿದ್ದಾರೆ.”ಬುಗುರಿ” ಆಡಿಸುವ ಕಲೆಯನ್ನು ಚನ್ನಾಗಿ ಕಲಿತಿರುವ ತಾಳಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಥಕ,ಥಕ ಕುಣಿಯುತ್ತಿರುವುದು ಜನ ನೋಡುತ್ತಿದ್ದಾರೆ.

ಸಿ.ಟಿ.ರವಿ ಕೇವಲ ಬ್ಯಾಂಕ್ ನಿರ್ದೇಶಕರಾಗಲು ಇದೇಲ್ಲಾ ಬೇಕಿತ್ತಾ ಎಂದು ಪಕ್ಷದಲ್ಲಿ ಮತ್ತು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ನಾಲ್ಕು ಬಾರಿ ಶಾಸಕರಾಗಿ,ಮಂತ್ರಿಯಾಗಿ, ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯಾಗಿ, ಮಾತಿನ ಮಲ್ಲನಾಗಿ ಜೊತೆಯಲ್ಲಿ ನಿಂತವರನ್ನು ಪಕ್ಕಕ್ಕೆ ಸರಿಸಿರುವುದಕ್ಕೆ ಇದು ಬೇಕಿತ್ತಾ ಎನ್ನುತ್ತಿರುವುದರ ಜೊತೆಗೆ ಅತಿ ಆಸೆ ಸರಿಯಲ್ಲ ಎನ್ನುತ್ತಿದ್ದಾರೆ.

ಬೋಜೇಗೌಡರ ಚಾಟಿ ಏಟಿಗೆ ರವಿ ಮತ್ತು ತಮ್ಮಯ್ಯ ನಲುಗಿದ್ದಾರೆ ಎಂಬ ವಿಶ್ಲೇಷಣೆ ನಡೆಯುತ್ತಿವೆ.ಜಾತಿ, ಜಾತಿಗಳ ಮಧ್ಯೆ ಕಂದಕ ತೋಡಿಕೊಂಡು ಸಾಗುತ್ತಿರುವುದು ಮುಂದಿನ ದಿನಗಳಲ್ಲಿ ಪರಿಣಾಮ ಬೀರುವುದು ಖಚಿತ. ಕಾಂಗ್ರೆಸ್ ಜಿಲ್ಲೆಯಲ್ಲಿ ಐದು ಶಾಸಕರು, ಐದು ಬೋರ್ಡ್‌,ವಿಧಾನ ಪರಿಷತ್ ಸದಸ್ಯರಿದ್ದರು ಸ್ಪರ್ಧೆ ಮಾಡಿದ್ದ ಕಡೂರು ಶಾಸಕ ಆನಂದ್ ಮತ್ತು ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ನೆರವಿಗೆ ಬಾರದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಸಿಟ್ಟು ಸೇಡವು ಈಗಲಾದರೂ ಅರಿಯದಿದ್ದರೆ ಮುಂದೆ ಮಾರಿ ಹಬ್ಬ ಕಾದಿದೆ ಎನ್ನುತ್ತಿದ್ದಾರೆ. ಕಡೂರು ಶಾಸಕ ಆನಂದ್ ಸ್ಪರ್ಧೆ ಮಾಡಿ ಸೋತಿದ್ದಾರೆ.ಕಾಂಗ್ರೆಸ್ ಮುಖಂಡರ ಮೇಲೆ ಹರಿ ಹಾಯ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಮೇಶ್ ವಿರುದ್ಧ ತರೀಕೆರೆ ಶಾಸಕ ಶ್ರೀನಿವಾಸ್ ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ.

ಚಿಕ್ಕಮಗಳೂರು ಶಾಸಕ ತಮ್ಮಯ್ಯ ಹೊಸ ಮನೆ ಗೃಹ ಪ್ರವೇಶದ ಬ್ಯೂಜಿ ಜೊತೆಗೆ ಬೋಜೇಗೌಡರು ಒತ್ತಡಕ್ಕೆ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಸುಮ್ಮನೆ ಇರಬಹುದು ಪಾಪ ಟ್ರೋಲ್ ಗೆ ಒಳಗಾಗಿರುವ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಸಮರ್ಥನೆಯಲ್ಲಿ ಇರುವಾಗ ಶೃಂಗೇರಿ ಶಾಸಕ ರಾಜೇಗೌಡರು ಡಿ.ಸಿ.ಸಿ ಬ್ಯಾಂಕ್ ಚುನಾವಣೆ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಕರೆದುಕೊಂಡು ಬಂದ ಮತದಾರರು ಕುಮಾರಸ್ವಾಮಿ ಬದಲು ರಮೇಶ್ ಗೆ ಮತ ಚಲಾಯಿಸಿ ಹೋಗಿದ್ದಾರೆ.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಂಶುಮಂತ್ ಬಂದ ಪುಟ್ಟ ಹೋದ ಪುಟ್ಟ ಎಂಬ ನಡವಳಿಕೆ ಕಾಂಗ್ರೆಸ್ ನವರನ್ನು ಕೆರಳಿಸಿದೆ.ಕಾಂಗ್ರೆಸ್ ನಿಂದ ಗೆಲ್ಲಾಬಹುದಾಗಿದ್ದ ಒಂದೇ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾ ಕುಮಾರಸ್ವಾಮಿ ಸೋಲಿಗೆ ಕಾಂಗ್ರೆಸ್ ನವರು ಕಾರಣ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಕುರ್ಚಿ ಗುದ್ದಾಟವಾದರೆ ಚಿಕ್ಕಮಗಳೂರಿನ ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ನಿಷ್ಠಾವಂತ ಮುಖಂಡರು ಕಾರ್ಯಕರ್ತರು ನಿಗಿ,ನಿಗಿ ಕೆಂಡ ಕಾರುತ್ತಿದ್ದಾರೆ.

ಬೋಜೇಗೌಡರು ಮತ್ತು ಸಿ.ಟಿ.ರವಿ ಬ್ಯಾಂಕ್ ನ ಅಧ್ಯಕ್ಷರಾಗಲು ಫ್ರೀ ಪ್ಲಾನ್ ಮಾಡುತ್ತಿದ್ದಾರೆ. ಜೈ ಬಿಜೆಪಿ, ಜೈ ಕಾಂಗ್ರೆಸ್ ಜನತಾದಳದ ಬಂಧಿಯಾಗಿರುವುದನ್ನು ಯಾರೂ ಅಲ್ಲೇಗಳೆಯಲು ಸಾಧ್ಯವಿಲ್ಲ.

DCC Bank Clean Sweep

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...