Home namma chikmagalur ಮುಂಬರುವ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಿಪಿಐ ಸ್ಪರ್ಧೆ
namma chikmagalurchikamagalurHomeLatest News

ಮುಂಬರುವ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಿಪಿಐ ಸ್ಪರ್ಧೆ

Share
Share

ಚಿಕ್ಕಮಗಳೂರು: – ನಗರದಲ್ಲಿ ನಡೆದ ಸಿಪಿಐ ತಾಲೂಕು ಸಮ್ಮೇಳನದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು ಎಂದು ಎರಡನೇ ಬಾರಿಗೆ ಆಯ್ಕೆಯಾಗಿರುವ ಸಿಪಿಐ ತಾಲೂಕು ಕಾರ್ಯದರ್ಶಿ ಕೆರಮಕ್ಕಿ ರಮೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ಬಗ್ಗೆ ನಮ್ಮ ಹೋರಾಟ ಹಿಂದಿನಿಂದಲೂ ನಡೆದುಬಂದಿದ್ದು, ಅದನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ನಗರದಲ್ಲಿ ವಿಫಲವಾಗಿರುವ ಅಮೃತ್ ಯೋಜನೆ ಮತ್ತು ಯಜಿಡಿ ಕಳಪೆಯಾಗಿರುವುದನ್ನು ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿನ ರಸ್ತೆಗುಂಡಿ ಮುಚ್ಚಬೇಕು. ನಗರಾದ್ಯಂತ ವಾಹನ ನಿಲುಗಡೆ ಅಸ್ತವ್ಯಸ್ತವಾಗಿದ್ದು, ಈ ಬಗ್ಗೆ ನಗರಸಭೆ ಸೂಕ್ತ ಕ್ರಮವಹಿಸಬೇಕು ಎಂದು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಸಧ್ಯದಲ್ಲೇ ಹೋರಾಟವನ್ನು ರೂಪಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಕ್ಷದ ತಾಲೂಕು ಸಮಿತಿ ರಚಿಸಿದ್ದು, ತಾಲೂಕು ಕಾರ್ಯದರ್ಶಿಯಾಗಿ ರಮೇಶ್ ಆದ ನಾನೇ ಮುಂದುವರಿದಿದ್ದೇನೆ. ಸಹಕಾರ್ಯದರ್ಶಿಗಳಾಗಿ ಹೆಡದಾಳ್‌ಕುಮಾರ್, ಸಿ.ಸಿ.ಮಂಜೇಗೌಡ, ಖಜಾಂಚಿಯಾಗಿ ತಂಪಿತಗೌಡ ಆಯ್ಕೆಯಾಗಿದ್ದಾರೆ. ೧೩ ಮಂದಿ ತಾಲೂಕು ಸಮಿತಿ ಸದಸ್ಯರು ೯ ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು ಎಂದು ಹೇಳಿದರು.

ಕಾರ್ಯಕಾರಿ ಸಮಿತಿಗೆ ಜಿ.ರಮೇಶ್, ಜೆರ್ಮಿಲೋಬೋ, ಜಯಾನಂದ, ಎಸ್.ರವಿ, ಶಿವಾನಂದ, ತಾರಾನಾಥ್, ತಾಲೂಕು ಸಮಿತಿ ಸದಸ್ಯರಾಗಿ ರಾಜು, ಲಕ್ಷ್ಮಿ, ಸಂಜೀವ, ಸತೀಶ, ಅಪ್ಪು, ಹರೀಶ್, ಕೊರಗಪ್ಪ, ವೀರಾಚಾರ್, ವಿಜಯ್‌ಕುಮಾರ್, ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜೆರ್ಮಿಲೋಬೋ, ರಮೇಶ್ ಇದ್ದರು.

CPI contest in upcoming taluk-zilla panchayat elections

Share

Leave a comment

Leave a Reply

Your email address will not be published. Required fields are marked *

Don't Miss

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ ನ್ಯಾಯಾಲಯವು ಮಹತ್ವದ ಶಿಕ್ಷೆ ಪ್ರಕಟಿಸಿದೆ. ಹಣದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ...

Related Articles

ಮೆಡಿಕಲ್ ಅಂಗಡಿಗೆ ಕನ್ನ : ₹2.66 ಲಕ್ಷ ನಗದು ದೋಚಿ ಪರಾರಿ

ಚಿಕ್ಕಮಗಳೂರು;  ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ತಡರಾತ್ರಿ ನಡೆದ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ...

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್...

ಸಾಲ ತೀರಿಸಲಾಗದೆ ರೈತ ಬೆಂಕಿ ಹಚ್ಚಿಕೊಂಡು ಸಾವು

ಕಡೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು...