Home namma chikmagalur chikamagalur ಕೆಂಪುಬಸ್ ಬಲೂ ಗ್ಯಾರಂಟಿ ಡೇಂಜರ್ ? ಡೇಂಜರ್ ? ಕೆಟ್ಟು ನಿಲ್ಲುವ ಬಸ್ಸುಗಳು
chikamagalurHomeLatest Newsnamma chikmagalur

ಕೆಂಪುಬಸ್ ಬಲೂ ಗ್ಯಾರಂಟಿ ಡೇಂಜರ್ ? ಡೇಂಜರ್ ? ಕೆಟ್ಟು ನಿಲ್ಲುವ ಬಸ್ಸುಗಳು

Share
Share

ಚಿಕ್ಕಮಗಳೂರು:  ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಲೂ ಡೇಂಜರ್ ಯಾವಾಗ ಎಲ್ಲಿ ಕೆಟ್ಟು ನಿಲ್ಲುತ್ತವೆ ಎಂದು ಪ್ರಯಾಣಿಕರು ದೂರುವುದು ಸಾಮಾನ್ಯವಾಗಿದ್ದು ಜೊತೆಗೆ ತಳ್ಳು ಮಾಡಲ್ ಐಸಾ ಎಂದು ಬಸ್ಸುಗಳನ್ನು ತಳ್ಳುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

ಕಳೆದ ಒಂದು ವರ್ಷದಲ್ಲಿ ಬಸ್ಸುಗಳು ಕಡೂರು ಮತ್ತು ಮೂಡಿಗೆರೆ ಸಮೀಪ ಕೆಟ್ಟು ನಿಂತಾಗ ತಳ್ಳಿ ಕೊಂಡು ಬಂದ ಪ್ರಯಾಣಿಕರ ಪರದಾಟ ಹೇಳ ತೀರದು.ಶೃಂಗೇರಿ ಯಿಂದ ಚಿಕ್ಕಮಗಳೂರಿಗೆ ರಾತ್ರಿ ಬಸ್ ಬರುವಾಗ ಹೆಡ್ ಲೈಟ್ ಕೈ ಕೊಟ್ಟಾಗ ಮೊಬೈಲ್ ಬೆಳಕಿನಲ್ಲಿ ಬಸ್ಸು ಚಲಾಯಿಸಿದ ಸುದ್ದಿ ಆಗಿದ್ದರು ಕೆ,ಎಸ್,ಆರ್,ಟಿ,ಸಿಯವರು ಎಚ್ಚೆತ್ತು ಕೊಂಡಿಲ್ಲ.

ದೀಪಾವಳಿ ಹಬ್ಬ ಮುಗಿಸಿಕೊಂಡು ಊರಿಗೆ ತೆರಳ ಬೇಕಿದ್ದ ಜನ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಹದಿನೈದುಕ್ಕೂ ಹೆಚ್ಚು ಬಸ್ಸುಗಳು ಕೆಟ್ಟು ನಿಂತು ಡಿಪೋ ಬಿಟ್ಟು ಹೊರ ಬರಲಿಲ್ಲ ಹೀಗಾಗಿ ಪ್ರಯಾಣಿಕರು ಇಡೀ ಶಾಪ ಹಾಕುತ್ತಿದ್ದರು.

ಕಳೆದ ಎರಡು ವರ್ಷಗಳಿಂದ ಬಸ್ಸುಗಳ ಅವ್ಯವಸ್ಥೆ ಸರಿಪಡಿಸಲಾರದಷ್ಟು “ಗ್ಯಾರಂಟಿ”ಯಾಗಿದೆ. ಮಹಿಳೆಯರಿಗೆ ಉಚಿತ ಯೋಜನೆ ಮಾಡಿ ಜನ ಓಡಾಡದಂತೆ ಮಾಡಿರುವ ಸರ್ಕಾರದ ಬಗ್ಗೆ ಜನ ಬೇಸತ್ತು ಶಾಪ ಹಾಕುತ್ತಿದ್ದಾರೆ.ಈ ಬಗ್ಗೆ ಡಿಪೋ ಮ್ಯಾನೇಜರ್ ಮತ್ತು ಕೆ.ಎಸ್.ಆರ್.ಟಿ.ಸಿ.ಜಿಲ್ಲಾಧಿಕಾರಿ ಕಣ್ಣು,ಕಿವಿ ಕೇಳದಂತ ಕುರುಡರಂತೆ,ಕಿವಿ ಕೇಳದ ಕೆಪ್ಪರಂತೆ ವರ್ತನೆ ಮಾಡುವುದು ನೋಡಿ ಒರಿಜಿನಲ್ ಅಂಗವಿಕಲರು ಧಿಕ್ಕಾರ ಹೇಳುತ್ತಿದ್ದಾರೆ.

Buses that break down—the red bus.

Share

Leave a comment

Leave a Reply

Your email address will not be published. Required fields are marked *

Don't Miss

ಬೈಕ್‌ನಿಂದ ಬಿದ್ದು ಗಾಯವಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಚಿಕ್ಕಮಗಳೂರು: ರಸ್ತೆಗೆ ಏಕಾಏಕಿ ಹಸು ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಸೋಮಪ್ಪ (೫೮) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ತರೀಕೆರೆ ತಾಲ್ಲೂಕಿನ ಕುಂಟಿನಮಡು ಗ್ರಾಮದ ಬಳಿ...

ಕಂಪೌಂಡ್ ಸ್ಲ್ಯಾಬ್‌ಗಳ ವಾಹನ ಪಲ್ಟಿ: ಕಾರ್ಮಿಕ ಸಾವು

ಚಿಕ್ಕಮಗಳೂರು: ಸಿಮೆಂಟ್ ಬೆಂಚ್ ಹಾಗೂ ಕಂಪೌಂಡ್ ಸ್ಲ್ಯಾಬ್‌ಗಳನ್ನು ಸಾಗಿಸುತ್ತಿದ್ದ ಮಹೇಂದ್ರ ಜಿತೋ ವಾಹನದ ಹಿಂಬದಿಯ ಟೈರ್ ಸ್ಫೋಟಗೊಂಡು ಸಂಭವಿಸಿದ ಅಪಘಾತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಬೀರೂರು ಸಮೀಪದ ಚಟ್ನಹಳ್ಳಿ...

Related Articles

ಕೊಪ್ಪ ತಾಲ್ಲೂಕಿನಲ್ಲಿ ಕಾಡುಕೋಣಗಳ ಉಪಟಳ

ಕೊಪ್ಪ: ಕಾಡುಕೋಣಗಳ ಉಪಟಳ ದಿನೇ ದಿನೇ ಮಿತಿ ಮೀರುತ್ತಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಲಸೆ ಕಾರ್ಮಿಕರ...

ದೀಪಾವಳಿಗೆ ಕಾಡುಪ್ರಾಣಿಗಳ ಬೇಟೆ: ಓರ್ವನ ಬಂಧನ; ಮೂವರು ಪರಾರಿ

ಮೂಡಿಗೆರೆ: ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಅಕ್ರಮವಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾಂಸ ಹಂಚಿಕೆ ಮಾಡುತ್ತಿದ್ದ ತಂಡವೊಂದರ ವಿರುದ್ಧ...

ಇಂದು ನವೀಕರಣಗೊಂಡ ರೈಲು ನಿಲ್ದಾಣದ ಲೋಕಾರ್ಪಣೆ

ಚಿಕ್ಕಮಗಳೂರು: ರೈಲು ನಿಲ್ದಾಣದ ನವೀಕರಣ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ...

ಕಾವಲುಗಾರ ಕೊಲೆ ಮಾಡಿದ್ದ ಆರೋಪಿ ಬಂಧನ

ಕಡೂರು: ತೋಟದ ಮನೆಯೊಂದರಲ್ಲಿ ಕಾವಲುಗಾರನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಕಡೂರು ಠಾಣೆ ಪೊಲೀಸರು...