Home namma chikmagalur ಸೆ.29ಕ್ಕೆ ಬಿಎಸ್ಪಿ ಜಿಲ್ಲಾ ಸಮಿತಿಯ ಸಮೀಕ್ಷಾ ಸಭೆ
namma chikmagalurchikamagalurHomeLatest News

ಸೆ.29ಕ್ಕೆ ಬಿಎಸ್ಪಿ ಜಿಲ್ಲಾ ಸಮಿತಿಯ ಸಮೀಕ್ಷಾ ಸಭೆ

Share
Share

ಚಿಕ್ಕಮಗಳೂರು:  ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಸಮಿತಿಯ ಸಮೀಕ್ಷಾ ಸಭೆ ಸೆ.೨೯ ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಮೀಕ್ಷಾ ಸಭೆ ನಡೆಸುತ್ತಿದ್ದಾರೆ. ರಾಜ್ಯ, ಜಿಲ್ಲೆ, ಸೆಕ್ಟರ್, ಬೂತ್ ಹಂತಗಳಲ್ಲಿ ಸಮಿತಿಗಳನ್ನು ರಚಿಸಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಮುಂಬರುವ ಎಲ್ಲ ಹಂತದ ಚುನಾವಣೆಗಳಲ್ಲಿ ಪಕ್ಷದಿಂದ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ತಯಾರು ಮಾಡುವ ಪ್ರಯತ್ನವಾಗಿ ಜಿಲ್ಲಾವಾರು ಸಮೀಕ್ಷಾ ಸಭೆಗಳು ನಡೆಯಲಿವೆ ಎಂದು ಹೇಳಿದರು.

ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ೬ ರಾಷ್ಟ್ರೀಯ ಪಕ್ಷಗಳ ಸಾಲಿನಲ್ಲಿ ಬಿಎಸ್ಪಿ ಹೆಸರಿದೆ. ಫುಲೆ, ಶಾಹು, ಪೆರಿಯಾರ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ ಅಡಿಯಲ್ಲಿ ಸಂವಿಧಾನವನ್ನೇ ತನ್ನ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಮಾತ್ರ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇಲ್ಲಿಯವರೆಗೆ ನಮ್ಮನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನರ ಸಮಸ್ಯೆಗಳನ್ನು ಜೀವಂತವಾಗಿಟ್ಟು ಜನರ ಆಲೋಚನೆಗಳನ್ನು ಕೋಮುವಾದ ಮತ್ತಿತರೆ ಬೇರೆ ವಿಚಾರಗಳತ್ತ ತಿರುಗಿಸಿ ಸಮಸ್ಯೆಗಳನ್ನು ಹಾಗೆ ಉಳಿಸಿದ್ದಾರೆ ಎಂದು ದೂರಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಕೃಷ್ಣ ಮಾತನಾಡಿ, ಮನುವಾದಿ ಪಕ್ಷಗಳು ಜನರ ಮನಸ್ಸನ್ನು ಕದಡಿ ಆಟ ಆಡುತ್ತಿವೆ. ಜನರ ನಂಬಿಕೆಯನ್ನೇ ತುಷ್ಠೀಕರಿಸಿ ಅವರ ಮನಸ್ಸನ್ನು ಬೇರೆ ಕಡೆ ಸೆಳೆಯುತ್ತಿವೆ. ಇವೆರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

ಜಿಎಸ್‌ಟಿ ಏರಿಸಿದ್ದು ಇದೇ ಬಿಜೆಪಿ ಸರಕಾರ, ಇಳಿಸಿದ್ದು ಇವರೇ ಜನರನ್ನು ಮರುಳು ಮಾಡಲು ಸಂಭ್ರಮ ಮಾಡುತ್ತಾರೆ ಎಂದರು.

ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಮತಕಳವಿನ ಬಗ್ಗೆ ಆರೋಪ ಮಾಡಿದರೆ ಅದನ್ನು ತನಿಖೆ ಮಾಡಬೇಕಾದ ಚುನಾವಣಾ ಆಯೋಗ ಮುಗುಮ್ಮಾಗಿದೆ. ತನಿಖೆ ಮಾಡಿ ಆರೋಪ ಸಾಬೀತಾದರೆ ಕ್ರಮಕೈಗೊಳ್ಳಲಿ ಎಂದು ಹೀಗೆ ಸುಮ್ಮನಿದ್ದರೆ ತಪ್ಪು ಒಪ್ಪಿಕೊಂಡಂತಲ್ಲವೇ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೆ.ಬಿ.ಸುಧಾ, ಗಂಗಾಧರ, ಕುಮಾರ ಇದ್ದರು.

BSP district committee review meeting on September 29

Share

Leave a comment

Leave a Reply

Your email address will not be published. Required fields are marked *

Don't Miss

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಏಕಾಏಕಿ ಗೋಚರಿಸಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು....

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ ಶ್ರೇಷ್ಠ ಗಾಯಕ ಡಾ.ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರ ಅಮೋಘ ಗಾಯನ...

Related Articles

ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ

ಶೃಂಗೇರಿ: ಮೂಲಸೌಕರ್ಯ ಕಲ್ಪಿಸಬೇಕಾದ ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ ಎಂದರೆ ನಂಬುತ್ತೀರಾ? ಹೌದು, ಇಂತಹದ್ದೊಂದು...

ಪೌರಕಾರ್ಮಿಕರು ಒಳಚರಂಡಿ ಮ್ಯಾನ್‌ಹೋಲ್‌ಗೆ ಇಳಿಯಬಾರದು

ಚಿಕ್ಕಮಗಳೂರು : ನಗರಸಭೆಯ ಯುಜಿಡಿ ಹಾಗೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಕುರಿತು ನಡೆದ...

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಯಮವೇ ಅಸ್ತ್ರ

ಚಿಕ್ಕಮಗಳೂರು : ಯುವಜನರು ಮಾದಕವಸ್ತು ಹಾಗೂ ಇತರ ದುಶ್ಚಟಗಳಿಂದ ದೂರವಿದ್ದು, ಸಂಯಮ ಮತ್ತು ಶಿಸ್ತಿನ ಜೀವನವನ್ನು...

ಬಂಟರ ಯಾನೆ ನಾಡವರ ಸಂಘದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಚಿಕ್ಕಮಗಳೂರು: ಸಮಾಜದಲ್ಲಿ ದುಡಿದಿದ್ದನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಉದ್ಯಮಿ...