ಶೃಂಗೇರಿ: ಮೂಲಸೌಕರ್ಯ ಕಲ್ಪಿಸಬೇಕಾದ ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ ಎಂದರೆ ನಂಬುತ್ತೀರಾ? ಹೌದು, ಇಂತಹದ್ದೊಂದು ಮನಕಲಕುವ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬೆಳಕಿಗೆ ಬಂದಿದೆ.
ಶೃಂಗೇರಿ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಶೌಚಾಲಯಕ್ಕಾಗಿ ಶಾಸಕ ಟಿ.ಡಿ. ರಾಜೇಗೌಡ ಅವರ ಎದುರೇ ಕಣ್ಣೀರಿಟ್ಟಿದ್ದಾರೆ. ಎಂಟು ವರ್ಷದ ಪುಟ್ಟ ಮಗುವನ್ನು ಇಟ್ಟುಕೊಂಡು ಶೌಚಾಲಯವಿಲ್ಲದೆ ತಾನು ಪಡುತ್ತಿರುವ ನರಕಯಾತನೆಯನ್ನು ತುಂಬಿದ ಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅರ್ಜಿ ಹಿಡಿದು ಅಧಿಕಾರಿಗಳ ಕಚೇರಿಗೆ ಅಲೆದೂ ಅಲೆದು ಸಾಕಾಗಿದೆ ಎಂದು ಅಳಲು ತೋಡಿಕೊಂಡ ಆ ಮಹಿಳೆ, ಅಧಿಕಾರಿಗಳು ಮಾನವೀಯತೆಯನ್ನೇ ಮರೆತು ಜಾತಿಯ ಪ್ರಶ್ನೆ ಎತ್ತಿರುವ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. “ನೀವು ಎಸ್ಸಿ ಅಥವಾ ಎಸ್ಟಿಗೆ ಬರುತ್ತೀರಾ? ಹಾಗಿದ್ದರೆ ಏನಾದರೂ ಮಾಡಬಹುದು” ಎಂದು ಅಧಿಕಾರಿಗಳು ಉಡಾಫೆಯಾಗಿ ನುಡಿದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, “ಇಲ್ಲ ಸರ್, ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳು” ಎಂದು ಹೇಳಿದಾಗ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.
ಮೂಲಭೂತ ಹಕ್ಕಾದ ಶೌಚಾಲಯಕ್ಕೂ ಅಧಿಕಾರಿಗಳು ಜಾತಿ ಲೆಕ್ಕಾಚಾರ ತಂದಿರುವುದನ್ನು ಕಂಡು ಸಭೆಯಲ್ಲಿದ್ದ ಜನರು ತೀವ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕರ ಸಮ್ಮುಖದಲ್ಲೇ ಅಧಿಕಾರಿಗಳ ಬೇಜವಾಬ್ದಾರಿತನ ಬಟಾಬಯಲಾಗಿದೆ.
Officials even ask for one’s caste when providing a toilet.
Leave a comment