Home namma chikmagalur chikamagalur ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಯಮವೇ ಅಸ್ತ್ರ
chikamagalurHomeLatest Newsnamma chikmagalur

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಯಮವೇ ಅಸ್ತ್ರ

Share
Share

ಚಿಕ್ಕಮಗಳೂರು : ಯುವಜನರು ಮಾದಕವಸ್ತು ಹಾಗೂ ಇತರ ದುಶ್ಚಟಗಳಿಂದ ದೂರವಿದ್ದು, ಸಂಯಮ ಮತ್ತು ಶಿಸ್ತಿನ ಜೀವನವನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಭವಂರ್ ಸಿಂಗ್ ಮೀನಾ ಕರೆ ನೀಡಿದರು.

ನಗರದ ತೇರಾಪಂಥ್ ಭವನದಲ್ಲಿ ಅನುವ್ರತ ಸಮಿತಿ ವತಿಯಿಂದ ಆಚಾರ್ಯ ಮಹಾಶ್ರಮಣ ಜಿ ಹಾಗೂ ಸಾಧ್ವಿ ಶ್ರೀ ಪುಣ್ಯಯಶ್ ಜಿ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ‘ವ್ಯಸನಮುಕ್ತ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಭಾರತ ಸರ್ಕಾರದ ‘ನಶಾ ಮುಕ್ತ ಭಾರತ’ ಅಭಿಯಾನಕ್ಕೆ ಪೂರಕವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುವುದು ಶ್ಲಾಘನೀಯ. ವ್ಯಸನಕ್ಕೆ ಒಳಗಾದ ಬಳಿಕ ಅದನ್ನು ತ್ಯಜಿಸುವುದಕ್ಕಿಂತ, ಆರಂಭದಿಂದಲೇ ಸಂಯಮದ ಜೀವನ ನಡೆಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದರು.

ಪ್ರಾರ್ಥನೆಯಲ್ಲಿ ಪ್ರತಿಪಾದಿಸಲಾದ ‘ಸಂಯಮ’ದ ಸಂದೇಶವನ್ನು ಯುವಜನರಿಗೆ ತಲುಪಿಸುವ ಅಗತ್ಯವಿದೆ. ಕಾಲೇಜು ಹಾಗೂ ಸಾಮಾಜಿಕ ಜೀವನದಲ್ಲಿ ಯುವಕರನ್ನು ಹಲವು ರೀತಿಯ ಪ್ರಲೋಭನೆಗಳು ಆಕರ್ಷಿಸುವ ಸಾಧ್ಯತೆ ಇರುವುದರಿಂದ, ಸ್ವಯಂ ನಿಯಂತ್ರಣ, ಶಿಸ್ತು ಮತ್ತು ಉತ್ತಮ ಮೌಲ್ಯಗಳ ಮೂಲಕ ಅವುಗಳನ್ನು ಎದುರಿಸಬೇಕು ಎಂದು ಹೇಳಿದರು.

ಅನುವ್ರತ ಸಮಿತಿಯ ಅಧ್ಯಕ್ಷೆ ಮಂಜುಬಾಯಿ ಬನ್ಸಾಲಿ, ತೇರಾಪಂಥ್ ಸಭೆಯ ಅಧ್ಯಕ್ಷ ಮಹೇಂದ್ರ ಡೋಷಿ, ಗೌತಮ್ ಆಚಾ ಸೇರಿದಂತೆ ಕಾರ್ಯಕ್ರಮದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ, ನಿಸ್ವಾರ್ಥ ಸೇವೆ ಹಾಗೂ ಮೂಲ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶ ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ವಿಪುಲ್ ಕುಮಾರ್ ಜೈನ್, ತೇರಾಪಂಥ ಸಭೆಯ ಪದಂ ನಾಹರ್, ಅಣುವ್ರತ ಸಮಿತಿಯ ಗೌತಮ್‌ಜಿ ಆಚ್ಚಾ, ಟಿಪಿಎಫ್ ಅಧ್ಯಕ್ಷ ಅಭಿಷೆಕ್ ಆಚ್ಚಾ, ತೇರಾಪಂಥ ಟ್ರಸ್ಟ್ ಅಧ್ಯಕ್ಷ ಅಶೋಕ್‌ಜಿ ಡೋಸಿ, ಮಾಜಿ ಅಧ್ಯಕ್ಷ ತಾರಾಚಂದ್ ಸೇಠಿಯಾ, ಯುವ ಪರಿಷತ್ ಅಧ್ಯಕ್ಷ ಹಿತೇಶ್ ಜಿ. ಗಾದಿಯಾ, ಮದನ್‌ಚಂದ್ ಗಾದಿಯಾ, ಮಹಿಳಾ ಮಂಡಲದ ಅಧ್ಯಕ್ಷೆ ಸಂತೋ? ಬಾಯಿ ಗಾದಿಯಾ, ನರಿತಾ ಗಾದಿಯಾ, ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕು ಮೊದಲು ತಾಲ್ಲೂಕು ಕಛೇರಿಯಿಂದ ತೇರಾಪಂಥ್ ಸಭಾವರೆಗೆ ವ್ಯಸನಮುಕ್ತ ಮೆರವಣಿಗೆ ನೆಡೆಸಿದರು.

Restraint is the weapon for building an addiction-free society.

Share

Leave a comment

Leave a Reply

Your email address will not be published. Required fields are marked *

Don't Miss

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಏಕಾಏಕಿ ಗೋಚರಿಸಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು....

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ ಶ್ರೇಷ್ಠ ಗಾಯಕ ಡಾ.ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರ ಅಮೋಘ ಗಾಯನ...

Related Articles

ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ

ಶೃಂಗೇರಿ: ಮೂಲಸೌಕರ್ಯ ಕಲ್ಪಿಸಬೇಕಾದ ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ ಎಂದರೆ ನಂಬುತ್ತೀರಾ? ಹೌದು, ಇಂತಹದ್ದೊಂದು...

ಪೌರಕಾರ್ಮಿಕರು ಒಳಚರಂಡಿ ಮ್ಯಾನ್‌ಹೋಲ್‌ಗೆ ಇಳಿಯಬಾರದು

ಚಿಕ್ಕಮಗಳೂರು : ನಗರಸಭೆಯ ಯುಜಿಡಿ ಹಾಗೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಕುರಿತು ನಡೆದ...

ಬಂಟರ ಯಾನೆ ನಾಡವರ ಸಂಘದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಚಿಕ್ಕಮಗಳೂರು: ಸಮಾಜದಲ್ಲಿ ದುಡಿದಿದ್ದನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಉದ್ಯಮಿ...

ಗೋಕಳ್ಳರು ಹಸುವನ್ನು ಹೊತ್ತೊಯ್ಯುವಾಗ ಹಿಂದೆ ಓಡಿದ ತಾಯಿ ಹಸು

ಚಿಕ್ಕಮಗಳೂರು: ಹಸುವಿನ ಕತ್ತಿಗೆ ಹಗ್ಗ ಹಾಕಿ ಧರಧರನೆ ಎಳೆದುಕೊಂಡು ಹೋಗುತ್ತಿದ್ದ ಗೋಕಳ್ಳರ ಹಿಂದೆ ತಾಯಿ ಹಸುವೊಂದು...