Home namma chikmagalur 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಬಾನು ಮುಷ್ತಾಕ್‌ ಆಯ್ಕೆ
namma chikmagalurLatest NewsState News

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಬಾನು ಮುಷ್ತಾಕ್‌ ಆಯ್ಕೆ

Share
Share

ಬಳ್ಳಾರಿ: ಬಳ್ಳಾರಿಯಲ್ಲಿ ಇದೇ ಡಿಸೆಂಬರ್‌ ನಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಿರೀಕ್ಷೆಯಂತೆಯೇ ಲೇಖಕಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಪದ್ಧತಿಯನ್ನು ಆರಂಭಿಸಿದೆ.

ಬಳ್ಳಾರಿ ನಗರದ ಹೊಟೇಲ್‌ನಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಅಂತಿಮಗೊಳಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾಧ್ಯಮಗಳಿಗೆ ತಿಳಿಸಿದರು.

‘ಸಮ್ಮೇಳನದ ಅಧ್ಯಕ್ಷತೆಗೆ ಬಾನು ಮುಷ್ತಾಕ್‌ ಅವರ ಹೆಸರನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. 56 ಸದಸ್ಯ ಬಲದ ಸಮಿತಿಯಲ್ಲಿ ಹಾಜರಿದ್ದ 44 ಮಂದಿ ಬಾನು ಮುಷ್ತಾಕ್‌ ಹೆಸರಿಗೆ ಸರ್ವಾನುಮತದ ಸಮ್ಮತಿ ಸೂಚಿಸಿದರು. ಇವರನ್ನು ಹೊರತುಪಡಿಸಿದರೆ, ಕಸಾಪದ ಧಾರವಾಡ ಘಟಕದ ಅಧ್ಯಕ್ಷರು ಮಾಲತಿ ಪಟ್ಟಣಶೆಟ್ಟಿ ಅವರ ಹೆಸರನ್ನೂ, ಬೆಂಗಳೂರು ನಗರ ಘಟಕದ ಅಧ್ಯಕ್ಷರು ವೀಣಾ ಶಾಂತೇಶ್ವರ ಅವರ ಹೆಸರನ್ನೂ ಪ್ರಸ್ತಾಪಿಸಿದರು.

ಆದರೆ ಅಂತಿಮವಾಗಿ ಬಾನು ಮುಷ್ತಾಕ್‌ ಹೆಸರನ್ನೇ ಆಯ್ಕೆ ಮಾಡಲಾಯಿತು’ ಎಂದರು. ‘ಬಾನು ಮುಷ್ತಾಕ್‌ ಅವರು ನಮ್ಮ ಪ್ರಸ್ತಾವವನ್ನು ಒಪ್ಪಿಕೊಂಡಿದ್ದಾರೆ. ಕನ್ನಡದ ಕೆಲಸ ನನ್ನ ಮೊದಲ ಕರ್ತವ್ಯ ಎಂದು ನನಗೆ ಸಂದೇಶ ಕಳುಹಿಸಿದ್ದಾರೆ’ ಎಂದು ಜೋಶಿ ಸ್ಪಷ್ಟಪಡಿಸಿದರು.

ಈವರೆಗೆ ಸಮ್ಮೇಳನ ನಡೆಯುವ ಒಂದೆರಡು ತಿಂಗಳ ಮೊದಲಷ್ಟೇ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಆರು ತಿಂಗಳಿಗೆ ಮೊದಲೇ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರ ಆಯ್ಕೆಗೂ ಮೊದಲೇ ಸಮ್ಮೇಳನದ ಸ್ವಾಗತ ಸಮಿತಿ, ಉಪ ಸಮಿತಿಗಳು ರಚನೆಯಾಗಿರುತ್ತಿದ್ದವು.

ಜತೆಗೇ, ಸ್ಥಳ, ದಿನ ನಿಗದಿಯಾಗುತ್ತಿತ್ತು. ಆದರೆ, ಈ ಬಾರಿ ಇವು ಯಾವುವೂ ಆಗಿಲ್ಲ. ಪ್ರಮುಖವಾಗಿ, ಪರಿಷತ್ತಿನಿಂದ ಅಧಿಕೃತವಾಗಿ ಘೋಷಣೆಯಾಗು ವವರೆಗೆ ಸಮ್ಮೇಳನದ ಅಧ್ಯಕ್ಷರ ಹೆಸರು ಗೋಪ್ಯವಾ ಗಿರುತ್ತಿತ್ತು. ಈ ಸಲ ಅದಕ್ಕೂ ಚ್ಯುತಿಯಾಗಿದ್ದು, ಬಾನು ಮುಷ್ತಾಕ್‌ ಅವರೇ ಸರ್ವಾಧ್ಯಕ್ಷರು ಎಂಬುದು ವಾರದ ಮೊದಲೇ ಬಹಿರಂಗವಾಗಿತ್ತು.

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಹೆಚ್ಚು ಮಾತನಾಡದೇ ಸುದ್ದಿಗೋಷ್ಠಿಯಿಂದ ನಿರ್ಗಮಿಸಿದರು.

Banu Mushtaq elected as the President of the 88th All India Kannada Sahitya Sammelan

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಗೆ ಮಂತ್ರಿಯಂತೆ, ಮಂತ್ರಿ ಇಲ್ಲವೇ, ಇಲ್ಲ ಸಾಧ್ಯವಿಲ್ಲ !

ಚಿಕ್ಕಮಗಳೂರು: ಕಳೆದ ಇಪ್ಪತೈದು ವರ್ಷಗಳಿಂದ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಲ್ಲಾ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿಯಾದರೂ ಜಿಲ್ಲೆಯವರಿಗೆ ಮಂತ್ರಿ...

ಸಿದ್ದರಾಮಯ್ಯ ಪರವಾಗಿ ಅಹಿಂದ ಸಂಘಟನೆ ರಾಜ್ಯದಾದ್ಯಂತ ಹೋರಾಟ

ಚಿಕ್ಕಮಗಳೂರು: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿರುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಜಿಲ್ಲಾ ಅಹಿಂದ ಘಟಕದ ಅಧ್ಯಕ್ಷ ತ್ರಿಭುವನ್ ಎತ್ತಿನಮನೆ ತಿಳಿಸಿದರು. ಸಿದ್ದರಾಮಯ್ಯ ಅವರನ್ನು ಕೈಬಿಟ್ಟರೆ ರಾಜ್ಯದಲ್ಲಿ ಅಹಿಂದ ವರ್ಗದ ಜನರ...

Related Articles

ತಾಲೂಕು ರೈತ ಸಂಘದ ಅಧ್ಯಕ್ಷರಾಗಿ ಹಾದಿಹಳ್ಳಿ ಭದ್ರೇಗೌಡ ಆಯ್ಕೆ

ಚಿಕ್ಕಮಗಳೂರು :ಕರ್ನಾಟಕ ರೈತ ಸಂಘದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ ಹಾದಿಹಳ್ಳಿ ಭದ್ರೇಗೌಡ ಆಯ್ಕೆಯಾಗಿದ್ದಾರೆಂದು ರೈತ ಸಂಘದ...

ಜಿಲ್ಲೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ

ಚಿಕ್ಕಮಗಳೂರು: ಸಂಚಾರಿ ಹೈಕೋರ್ಟ್ ಪೀಠವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದು ಸೂಕ್ತವೆಂದು ವಕೀಲರ ಸಂಘದ ಅಧ್ಯಕ್ಷ...

ಬೀಗ ಹಾಕಿದ್ದ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು ಕಳ್ಳತನ

ಮೂಡಿಗೆರೆ : ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ನಗದು ಹಣ ಹಾಗೂ...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...