Home namma chikmagalur chikamagalur ಕ್ಷೇತ್ರದ ಅಭಿವೃದ್ದಿ ಮುಖೇನ ವಿಪಕ್ಷದ ಟೀಕೆಗೆ ಉತ್ತರ
chikamagalurHomeLatest Newsnamma chikmagalur

ಕ್ಷೇತ್ರದ ಅಭಿವೃದ್ದಿ ಮುಖೇನ ವಿಪಕ್ಷದ ಟೀಕೆಗೆ ಉತ್ತರ

Share
Share

ಚಿಕ್ಕಮಗಳೂರು: ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ರಾಜ್ಯಸರ್ಕಾರ ಪಂಚ ಗ್ಯಾರ ಂಟಿ ಯೋಜನೆಗಳನ್ನು ಜಾರಿಗೊಳಿಸುವ ಜೊತೆಗೆ ಜನಸಾಮಾನ್ಯರ ಮೂಲಸೌಕರ್ಯಕ್ಕೆ ಕೋಟ್ಯಾಂತರ ಅ ನುದಾನವನ್ನು ಒದಗಿಸಿ ವಿರೋಧ ಪಕ್ಷದ ಟೀಕೆಗಳಿಗೆ ತಕ್ಕ ಉತ್ತರ ನೀಡಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಶಾಂತಿನಗರದ ಭಗತ್‌ಸಿಂಗ್ ಆಟೋ ನಿಲ್ದಾಣ ಹಾಗೂ ಇಂದಿರಾಗಾಂಧಿ ಬಡಾವಣೆ ಸಮೀಪ ೧.೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾ ಡಿ ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕ ರಸ್ತೆ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.

ಪಂಚ ಗ್ಯಾರಂಟಿ ಯೋಜನೆ ಕೇವಲ ಒಂದು ಜನಾಂಗಕ್ಕೆ ಸೀಮಿತಗೊಳಿಸಿಲ್ಲ. ಸರ್ವಧರ್ಮದ ಏಳಿಗೆಗೆ ಪೂರೈಸುವ ಮೂಲಕ ವರ್ಷಕ್ಕೆ ೫೭ ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಜನತೆಯ ಅಭಿವೃದ್ದಿಗೆ ಭರಿಸು ತ್ತಿದೆ. ಅಲ್ಲದೇ ಟೀಕಿಸುವ ಕೆಲವರು ಗ್ಯಾರಂಟಿ ಯೋಜನೆ ಸದ್ಬಳಕೆ ಮಾಡಿಕೊಂಡು, ಹೊರಗಡೆ ಬಂದು ಟೀಕಿಸುವುದು ಶೋಭೆ ತರುವುದಿಲ್ಲ ಎಂದರು.

ರಾಜ್ಯದ ಮುಖ್ಯಮಂತ್ರಿಗಳು ಗ್ಯಾರಂಟಿ ಜೊತೆಗೆ ನಗರಸಭೆಗೆ ವಿಶೇಷ ಅನುದಾನ ನೀಡಿದ್ದು, ಅಲ್ಪಸಂ ಖ್ಯಾತರ ಅಭಿವೃದ್ದಿಗೆ ೫ ಲಕ್ಷ ರೂ., ಎಲ್ಲಾ ವಾರ್ಡ್‌ಗಳ ಅಭಿವೃದ್ದಿಗೆ ೫ ಕೋಟಿ ಹಾಗೂ ನಗರಸಭೆಗೆ ವಿಶೇಷ ವಾಗಿ ೧೦ ಕೋಟಿ ಅನುದಾನ ನೀಡಲಾಗಿದ್ದು, ಈಗಾಗಲೇ ಬಹುತೇಕ ಎಲ್ಲಾ ಕಾಮಗಾರಿಗಳು ಗುದ್ದಲಿಪೂ ಜೆ ಪೂರ್ಣಗೊಂಡು ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಹೇಳಿದರು.

ಇತ್ತೀಚೆಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಡಾಂಬರೀಕರಣ ಗುದ್ದಲಿಪೂಜೆಗೆ ಸೀಮಿತವಾ ಗುತ್ತಿದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಟೀಕಿಸುವವರು ಒಮ್ಮೆ ನಾಯ್ಡು ಬೀದಿ, ಪ್ರಭು ಸ್ಟೀಟ್, ವಿಜಯಪುರ ಮುಖ್ಯರಸ್ತೆಗಳನ್ನು ಗಮನಿಸಿದರೆ ತಕ್ಕ ಉತ್ತರ ಲಭ್ಯವಾಗಲಿದ್ದು, ಕಾಂಗ್ರೆಸ್ ಪಕ್ಷ ಜನತೆ ಆರ್ಶೀವಾದ ಪಡೆಯುತ್ತದೆ ಹೊರತು ಸುಳ್ಳು ವದಂತಿಗೆ ಕಿವಿಗೊಡುವುದಿಲ್ಲ ಎಂದರು.

೯೪ಸಿಯಲ್ಲಿ ೧೭ ಮತ್ತು ೧೮ನೇ ವಾರ್ಡಿನ ನಿವಾಸಿಗಳಿಗೆ ೨೦೦೪ ಹಿಂದೆ ನೀಡಿರುವ ಹಕ್ಕುಪತ್ರ ಅಸಲಿ ಯಾಗಿವೆ. ನಂತರ ದಿನದಲ್ಲಿ ನೀಡಿದ ಸ್ವಾಧೀನಪತ್ರ ಬಿಡಿಗಾಸಿನ ಬೆಲೆಯಿಲ್ಲ. ಖಾತೆ, ಸಾಲ ಸೌಲಭ್ಯ ಸಿಗುವು ದಿಲ್ಲ. ಆದ್ದರಿಂದ ಕೆಲವು ತಿಂಗಳಲ್ಲೇ ಈ ಭಾಗದ ಅರ್ಹ ಫಲಾನುಭವಿಗಳಿಗೆ ಅಸಲಿ ಹಕ್ಕುಪತ್ರ ವಿತರಿಸುವ ಮೂಲಕ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ ವಾರ್ಡ್ ನಂ.೧೬, ೧೭ ಮತ್ತು ೧೮ಕ್ಕೆ ಸಮರ್ಪಕ ಅನುದಾನಕ್ಕೆ ಶಾಸಕರಿಗೆ ಮನವಿ ಮಾಡಿದಾಗ ಮುಖ್ಯಮಂತ್ರಿ ನಿಧಿ ಮತ್ತು ಅಲ್ಪಸಂಖ್ಯಾತರ ಅನುದಾನದಡಿ ವಾರ್ಡ್‌ಗಳಿಗೆ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ದಿ ಒತ್ತು ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಪ್ರಸ್ತುತ ೧೭ನೇ ವಾರ್ಡಿನ ಉಪ್ಪಳ್ಳಿ ವಾಟರ್‌ಟ್ಯಾಂಕ್ ರಸ್ತೆ, ಕೇಕ್ ಪ್ಯಾಲೇಸ್‌ನಿಂದ ಯುನೈಟೆಡ್ ಶಾಲೆ ಯವರೆ, ಆಟೋ ಸ್ಟ್ಯಾಂಡ್‌ನಿಂದ ಎಲ್‌ಜೆ ಬೇಕರಿವರೆಗೆ ಹಾಗೂ ೧೮ನೇ ವಾರ್ಡಿನ ಇಂದಿರಾಗಾಂಧೀ ಬ ಡಾವಣೆಯ ಮೂರು ರಸ್ತೆಗಳಿಗೆ ಡಾಂಬರೀಕರಣಕ್ಕೆ ಒಟ್ಟು ೧.೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ ಜನತೆಗೆ ಮೂಲಸವಲತ್ತಿಗೆ ಸಮಸ್ಯೆಯಾಗದಂತೆ ಗಮ ನಹರಿಸಿದ ಪ್ರತಿನಿಧಿಗಳ ಕರ್ತವ್ಯ. ಆ ನಿಟ್ಟಿನಲ್ಲಿ ಇಂದು ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದ್ದು ಗುತ್ತಿಗೆ ದಾರರು ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ನಗರಸಭೆ ಉಪಾ ಧ್ಯಕ್ಷ ಲಲಿತ ರವಿನಾಯ್ಕ್, ಸದಸ್ಯ ಖಲಂದರ್, ಸಿಡಿಎ ಸದಸ್ಯರಾದ ಸುದೀಪ್, ಗುಣವತಿ, ಅಲ್ಪಸಂಖ್ಯಾತ ಬ್ಲಾಕ್ ಕಾರ್ಯದರ್ಶಿ ಉಮರ್, ಆಶ್ರಯ ಸಮಿತಿ ಅಧ್ಯಕ್ಷ ಪ್ರಸಾದ್‌ಅಮೀನ್, ಮುಖಂಡರುಗಳಾದ ಸಾದಿ ಕ್, ಬಿ.ಹೆಚ್.ಹರೀಶ್, ಜಮೀರ್, ಖೈರುಲ್ಲಾ, ಗಿರೀಶ್, ವಾಂಡಿರಜಾಕ್, ಕೆ.ಮಹಮ್ಮದ್, ಮಂಜುಳಾ, ಸುಮಿತ್ರ, ಆಟೋ ಸಂಘದ ಅಧ್ಯಕ್ಷರು, ಉಪ್ಪಳ್ಳಿ ಶಾಲೆ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

Answer to opposition criticism through development of the sector

 

 

Share

Leave a comment

Leave a Reply

Your email address will not be published. Required fields are marked *

Don't Miss

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಏಕಾಏಕಿ ಗೋಚರಿಸಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು....

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ ಶ್ರೇಷ್ಠ ಗಾಯಕ ಡಾ.ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರ ಅಮೋಘ ಗಾಯನ...

Related Articles

ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ

ಶೃಂಗೇರಿ: ಮೂಲಸೌಕರ್ಯ ಕಲ್ಪಿಸಬೇಕಾದ ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ ಎಂದರೆ ನಂಬುತ್ತೀರಾ? ಹೌದು, ಇಂತಹದ್ದೊಂದು...

ಪೌರಕಾರ್ಮಿಕರು ಒಳಚರಂಡಿ ಮ್ಯಾನ್‌ಹೋಲ್‌ಗೆ ಇಳಿಯಬಾರದು

ಚಿಕ್ಕಮಗಳೂರು : ನಗರಸಭೆಯ ಯುಜಿಡಿ ಹಾಗೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಕುರಿತು ನಡೆದ...

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಯಮವೇ ಅಸ್ತ್ರ

ಚಿಕ್ಕಮಗಳೂರು : ಯುವಜನರು ಮಾದಕವಸ್ತು ಹಾಗೂ ಇತರ ದುಶ್ಚಟಗಳಿಂದ ದೂರವಿದ್ದು, ಸಂಯಮ ಮತ್ತು ಶಿಸ್ತಿನ ಜೀವನವನ್ನು...

ಬಂಟರ ಯಾನೆ ನಾಡವರ ಸಂಘದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಚಿಕ್ಕಮಗಳೂರು: ಸಮಾಜದಲ್ಲಿ ದುಡಿದಿದ್ದನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಉದ್ಯಮಿ...