Home namma chikmagalur ಭೂ ಸಮಸ್ಯೆ ನಿವಾರಣೆಗೆ ಹೋರಾಡಲು ಜಿಲ್ಲೆಯಲ್ಲಿ ವೇದಿಕೆ ಸಿದ್ಧ
namma chikmagalurchikamagalurHomeLatest News

ಭೂ ಸಮಸ್ಯೆ ನಿವಾರಣೆಗೆ ಹೋರಾಡಲು ಜಿಲ್ಲೆಯಲ್ಲಿ ವೇದಿಕೆ ಸಿದ್ಧ

Share
Share

ಚಿಕ್ಕಮಗಳೂರು: ಭೂ ಸಂಘರ್ಷವಾಗದೆ ಭೂಮಿ ಸಿಗದು, ಈ ನಿಟ್ಟಿನಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಸಿಪಿಐ(ಎಂ.ಎಲ್.)ರೆಡ್‌ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿ, ಮೂಡಿಗೆರೆ ತಾಲೂಕಿನಲ್ಲಿ ಬಡವರು ಮನೆಕಟ್ಟಿಕೊಳ್ಳಲು ನಿವೇಶನವಿಲ್ಲ, ದುಡಿಯುವ ತಿನ್ನುವ ಜನರು ಬಾಡಿಗೆಮನೆ, ಕೂಲಿಲೈನಿನಲ್ಲಿ ದಿನದೂಡುತ್ತಿದ್ದಾರೆ. ಶಾಸಕಿ ನಯನಮೋಟಮ್ಮ ಬಡವರ ಬಗ್ಗೆ ಚಿಂತಿಸುವುದಿಲ್ಲ, ಶ್ರೀಮಂತರ ಪರವಾಗಿ ವಿಧಾನಸಭೆಯಲ್ಲಿ ಮಾತನಾಡುತ್ತಾರೆಂದು ಟೀಕಿಸಿ, ಜಿಲ್ಲೆಯಿಂದ ಗೆದ್ದಿರುವ ೭ ಮಂದಿ ಶಾಸಕರು ಉಳ್ಳವರ ಪರವಾಗಿ ಕೆಲಸನಿರ್ವಹಿಸುತ್ತಿದ್ದಾರೆಂದು ಆರೋಪಿಸಿದರು.

ಬಡತನದ ಬೇಗೆಯಲ್ಲಿ ನೊಂದು ಬೆಂದವರಿಗೆ ಬಡವರ ಸಮಸ್ಯೆ ಅರ್ಥವಾಗುತ್ತದೆ. ಗಾಜಿನ ಮನೆಯಲ್ಲಿ ಕುಳಿತುಕೊಳ್ಳುವರಿಗೆ ಬಡವರ ಗೋಳು ಕೇಳಿಸುವುದಿಲ್ಲ, ಮೂಡಿಗೆರೆ ಶಾಸಕರ ಮನೆಗೆ ಸಮಸ್ಯೆಹೊತ್ತು ಹೋದವರಿಗೆ ನ್ಯಾಯದೊರಕುತ್ತಿಲ್ಲ, ನಾನುಹೇಳುವುದನ್ನೆ ಕೇಳಬೇಕೆಂಬ ಉದ್ದಟತನ ಸರಿಯಲ್ಲ, ಇದೇ ರೀತಿಯ ಧೋರಣೆ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆಂದು ಎಚ್ಚರಿಸಿದರು.

ಮೂಡಿಗೆರೆ ತಾಲೂಕಿನಲ್ಲಿ ಅಕ್ರಮ ಭೂ ಮಂಜೂರಾತಿಯಾಗಿದೆ. ೧೩೫೦ ಪ್ರಕರಣದಲ್ಲಿ ಅಕ್ರಮಖಾತೆ ಮಾಡಿಕೊಡುವ ಮೂಲಕ ರಾಜ್ಯದ ಗಮನ ಸೆಳೆದಿದೆ.ಈಗಾಗಲೇ ಉಪವಿಭಾಗಾಧಿಕಾರಿಗಳು ೫೦೦ ಪಹಣಿಯನ್ನು ರದ್ದುಪಡಿಸಿದ್ದಾರೆ ಆದರೆ ಈ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿಲ್ಲ, ಸಾಗುವಳಿ ನಿರಂತರವಾಗಿ ಮುಂದುವರೆದಿದೆ. ೩೦ಸಾವಿರ ಒತ್ತುವರಿಯಲ್ಲಿ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡಿಲ್ಲ, ಇವರ ಪರವಾಗಿ ಶಾಸಕರುಗಳು ಕೆಲಸ ನಿರ್ವಹಿಸುತ್ತಾರೆಂದರು.

ನಮೂನೆ ೫೩,೫೭ರಲ್ಲಿ ಅಧಿಕಾರಿಗಳು ಭೂಮಾಲೀಕರ ಪರವಾಗಿ ಕೆಲಸಮಾಡುತ್ತಿದ್ದಾರೆ. ಖಾತೆಮಾಡಿ ಕೊಡುವ ಹುನ್ನಾರಗಳು ನಡೆಯುತ್ತಿವೆ. ಬಡವರ ಅರ್ಜಿಗಳು ವಜಾಗೊಳ್ಳುತ್ತಿವೆ. ನಿವೇಶನಕ್ಕೆ, ಸ್ಮಶಾಸನಕ್ಕೆ ಭೂಮಿ ಕೇಳಿ ಅರ್ಜಿ ಕೊಟ್ಟರೆ ಭೂಮಿ ಇಲ್ಲವೆಂಬ ಹಿಂಬರಹ ನೀಡಲಾಗುತ್ತಿದೆ. ಆದರೆ ಶಾಸಕಿ ನಯನ ಮೋಟಮ್ಮ ತಾಲೂಕಿನಲ್ಲಿ ೧ಸಾವಿರ ಎಕರೆ ಭೂಮಿ ಗುರುತಿಸಿದ್ದಾರೆಂದು ಅವರ ಹಿಂಬಾಲಕರು ಕೇಳಿ ಕೊಂಡು ತಿರುಗುತ್ತಿದ್ದಾರೆ. ಚಂದ್ರಲೋಕದಲ್ಲಿ ಭೂಮಿ ಗುರುತಿಸಿರಬೇಕು. ಅಲ್ಲಿ ನಮಗೆ ಭೂಮಿ ಬೇಡ ಮೂಡಿಗೆರೆ ತಾಲೂಕಿನಲ್ಲಿ ಯಾವ ಸ್ಥಳದಲ್ಲಿ ಭೂಮಿ ಗುರುತಿಸಲಾಗಿದೆ ಎಂದು ಮಾಹಿತಿಯನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ತಾಲೂಕಿನಲ್ಲಿ ೨೫ಸಾವಿರ ಜನರಿಗೆ ನಿವೇಶನವಿಲ್ಲ.ತಾಲೂಕು ಕಚೇರಿ ಭ್ರಷ್ಟಾಚಾರಕೇಂದ್ರವಾಗಿ ಮಾರ್ಪಾಟ್ಟಿದೆ. ಕಳೆದ ೨೦೧೩ರಿಂದಲೇ ಭೂ ಹೋರಾಟ ಆರಂಭಿಸಿದ್ದೇವೆ. ಹಳೇಮೂಡಿಗೆರೆ, ಗೋಣಿಬೀಡು, ಜನ್ನಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಭೂಮಿ ಗುರುತಿಸಿದ್ದೇವೆ. ಗ್ರಾಮಪಂಚಾಯಿತಿಯವರು ಅದನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂದಾಗದಿರುವುದರಿಂದ ಭೂಮಾಲೀಕರು ಮನೆಕಟ್ಟಲು ಮುಂದಾಗಿದ್ದಾರೆಂದು ತಿಳಿಸಿದರು.

ಮೂಡಿಗೆರೆ ತಾಲೂಕಿನಲ್ಲಿ ಭೂಮಿ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ, ಅಧಿಕಾರಿಗಳು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆಂದು ಹೇಳಿದ ಅವರು ಹಳೇಮೂಡಿಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ೮ ಎಕರೆ ಸರ್ಕಾರಿ ಜಮೀನು ಗುರುತಿಸಿ ನಿವೇಶನ ನೀಡುವಂತೆ ಹೋರಾಟ ನಡೆಸಲಾಯಿತು. ಭೂಮಾಲೀಕರು ಹೋರಾಟ ಹತ್ತಿಕ್ಕಲು ಮುಂದಾದರು. ನನ್ನ ವಿರುದ್ಧ ಖಾಸಗಿ ದೂರು ದಾಖಲಾಗಿವೆ. ಅವುಗಳನ್ನು ಎದುರಿಸುವ ಮೂಲಕ ಭೂಹೋರಾಟ ಮುಂದುವರೆಸಿದ್ದೇನೆಂದರು.

ಬಡವರಿಗೆ ನಿವೇಶನ ನೀಡಲು ಗ್ರಾಮುಂದಾಗದಿದ್ದಾರೆ. ಆ ಜಾಗದಲ್ಲಿ ಟೆಂಟ್‌ನಿರ್ಮಿಸಿಕೊಂಡು ನಿವೇಶನ ರಹಿತರು ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಸತ್ಯವತಿಯವರು ಅಗತ್ಯ ದಾಖಲೆ ಮಾಡಿ ಕೊಟ್ಟಿದ್ದಾರೆ. ನಿವೇಶನಕ್ಕೆ ೩.೫ ಎಕರೆ ನೀಡಿದ್ದಾರೆ. ಪೊಲೀಸ್‌ವಸತಿಗೃಹ, ಅಂಬೇಡ್ಕರ್‌ಭವನ, ವಸತಿ ಶಾಲೆಗೆ ಜಾಗ ನೀಡಿದ್ದಾರೆ. ಆದರೆ ಈ ಜಾಗಕ್ಕೆ ತೆರಳಲು ದಾರಿ ಇಲ್ಲವಾಗಿದೆ. ಕೆ.ಎನ್.ರಮೇಶ್ ಜಿಲ್ಲಾಧಿಕಾರಿಯಾಗಿದ್ದಾಗ ಈ ಸ್ಥಳಕ್ಕೆ ಬಂದು ೧೮ ಗುಂಟೆ ಕರಾಬ್‌ಜಾಗದಲ್ಲಿ ದಾರಿನಿರ್ಮಿಸಲು ಸೂಚಿಸಿದರೂ ಸಂಬಂಧಿಸಿದ ಅಧಿಕಾರಿಗಳು ಮುಂದಾಗಿಲ್ಲವೆಂದರು.

ಈಗಾಗಲೇ ಹೋರಾಟದ ಮೂಲಕ ಪಡೆದುಕೊಂಡಿರುವ ಜಾಗಕ್ಕೆ ಹೊಸಹೆಸರಿಡಲು ಮುಂದಾಗಿದ್ದೇವೆ. ಆ ಜಾಗದಲ್ಲೇ ಟಿಯುಸಿಐ ಕಾರ್ಮಿಕ ಸಂಘಟನೆ ಮತ್ತು ವಸತಿಗಾಗಿ ಹೋರಾಟ ವೇದಿಕೆ ನೇತೃತ್ವದಲ್ಲಿ ೧೩೪ನೇ ಅಂಬೇಡ್ಕರ್ ಜಯಂತಿ,ವಿಶ್ವಕಾರ್ಮಿಕ ದಿನಾಚರಣೆಯನ್ನು ಹಳೇಮೂಡಿಗೆರೆಯ ಕೈಮರ ಸರ್ವೋದಯ ನಗರದಲ್ಲಿ ಮೇ ೨ ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಅಧ್ಯಕ್ಷತೆವಹಿಸುವರು. ಶಾಸಕಿ ನಯನಮೋಟಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ವಕೀಲ ರಂಗಸ್ವಾಮಿ, ಮೈಸೂರು ಕಂದೇಗಾಲು ಶ್ರೀನಿವಾಸ, ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ಕೆ.ರಘು ಅಂಬೇಡ್ಕರ್ ಕುರಿತು ಮಾತನಾಡುವರು. ರಾಯಚೂರಿನ ಎಂ.ಗಂಗಾಧರ ಕಾರ್ಮಿಕ ದಿನಾಚರಣೆ ಕುರಿತು ಮಾತನಾಡುವರು. ಪಂಚಾಯಿತಿ ಅಧ್ಯಕ್ಷೆ ರಂಜಿತ, ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷೆ ಲಕ್ಷ್ಮೀ,ವಕೀಲ ಪರಮೇಶ್, ಕಾಂಗ್ರೆಸ್ ವಕ್ತಾರ ಅನಂತ್, ಅಂಗಡಿ ಚಂದ್ರು, ಹುಣಸೇಮಕ್ಕಿ ಲಕ್ಷ್ಮಣ್, ಮೊಹಮ್ಮದ್ ಜುಬೇರ್, ಜ್ಯೋತಿಸಾಲ್ಡನ, ಜಾನಕಿ, ಅಜಿತ್, ಸಫೀಯ, ಶಿವಾನಂದ,ಗಣೇಶ್, ಪ್ರಸನ್ನ, ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ, ಗುರುಶಾಂತಪ್ಪ, ಯು.ಬಿ.ಮಂಜಯ್ಯ, ದೇವರಾಜ್, ಉಮೇಶ್, ಪ್ರಶಾಂತ್, ಮಹೇಂದ್ರಮೌರ್ಯ, ಮಂಜುನಾಥ, ಮಂಜುನಾಥ,ಅಕ್ರಂ, ಇಬ್ರಾಹಿಂ,ಹಮೀದ್, ಕೆ.ವೈ.ಇಬ್ರಾಹಿಂ, ಗೋಪಾಲ್,ರಾಮು, ಸಿದ್ದೇಶ್, ಸುಂದ್ರೇಶ್, ದಯಾನಂದ, ಪ್ರಸನ್ನ, ನಾಗೇಶ್, ಸಂದೀಪ್, ಶಿವಪ್ಪ, ಶಂಕರ್ ಮುಖ್ಯಅತಿಥಿಗಳಾಗಿ ಆಗಮಿಸುವರೆಂದರು

A platform is ready in the district to fight to resolve the land issue.

Share

Leave a comment

Leave a Reply

Your email address will not be published. Required fields are marked *

Don't Miss

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಅವರು...

ಬಿರಂಜಿ ಹೊಳೆಯಿಂದ ರೈತಾಪಿ ವರ್ಗದ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು:  ಜಾವಣಿಗೆ ನಾಡಿನ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ವಿಫಲಗೊ ಂಡಿರುವ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಮಂಗಳವಾರ ರೈತ ಸಂಘ- ಹಸಿರುಸೇನೆ ತಾಲ್ಲೂಕು ಘಟ ಕ ಕರೆ ನೀಡಿದ್ಧ ಪ್ರತಿಭಟನೆಯಲ್ಲಿ...

Related Articles

ದೊಣ್ಣೆಯಿಂದ ಹಲ್ಲೆಯಾದ ಭಿಕ್ಷುಕನ ಸಾವು

ತರೀಕೆರೆ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ...

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲೆಯ ಭೀಕರ ಬರಗಾರದ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಚಿಕ್ಕಮಗಳೂರು ತಾಲ್ಲೂಕನ್ನು...

ಜ್ಞಾನೇಶ್ ಕುಮಾರ್ ವಜಾಗೊಳಿಸಿ ಬಂಧಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ

ಚಿಕ್ಕಮಗಳೂರು: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜೊತೆಗೆ ಬಿಜೆಪಿ...