Home namma chikmagalur chikamagalur ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿಯಲ್ಲಿ ಚಿಕ್ಕಮಗಳೂರು-ಕಳಸ ಸೇರ್ಪಡೆ
chikamagalurHomeLatest Newsnamma chikmagalur

ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿಯಲ್ಲಿ ಚಿಕ್ಕಮಗಳೂರು-ಕಳಸ ಸೇರ್ಪಡೆ

Share
Share

ಚಿಕ್ಕಮಗಳೂರು: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಎರಡು ತಾಲ್ಲೂಕುಗಳು ಸ್ಥಾನ ಪಡೆದಿವೆ. ಚಿಕ್ಕಮಗಳೂರು ತಾಲ್ಲೂಕು ತೀವ್ರ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿದ್ದರೆ, ಕಳಸ ತಾಲ್ಲೂಕು ಮಧ್ಯಮ ಬರಪೀಡಿತ ಪಟ್ಟಿ ಸೇರಿದೆ.

ಮೊದಲ ಪಟ್ಟಿಯಲ್ಲಿ ಅಜ್ಜಂಪುರವನ್ನು ತೀವ್ರ ಬರಪೀಡಿತ ತಾಲ್ಲೂಕು ಎಂದು ಫೋಷಣೆ ಮಾಡಲಾಗಿತ್ತು. ಕೊಪ್ಪ, ನರಸಿಂಹರಾಜಪುರ ಹಾಗೂ ತರೀಕೆರೆ ತಾಲ್ಲೂಕುಗಳನ್ನು ಮಧ್ಯಮ ಬರಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿತ್ತು.

ತೀವ್ರ ಮಳೆ ಕೊರತೆ ಎದುರಿಸುತ್ತಿದ್ದ ಕಡೂರು ತಾಲ್ಲೂಕು ಮೊದಲ ಪಟ್ಟಿಯಲ್ಲಿ ಇರಲಿಲ್ಲ. ತಾಲ್ಲೂಕಿನ ಜನ ಮತ್ತು ಜನಪ್ರತಿನಿಧಿಗಳು ತೀವ್ರ ಹೋರಾಟ ನಡೆಸಿದ ಬಳಿಕ ಎರಡನೇ ಪಟ್ಟಿಯಲ್ಲಿ ಕಡೂರು ತಾಲ್ಲೂಕು ಬರಪೀಡಿತ ಪಟ್ಟಿ ಸೇರಿತ್ತು.

ಚಿಕ್ಕಮಗಳೂರು ತಾಲ್ಲೂಕಿನ ಕೆಲ ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂಬ ಕಾರಣಕ್ಕೆ ಇಡೀ ತಾಲ್ಲೂಕು ಬರಪಟ್ಟಿಯಿಂದ ಹೊರಗುಳಿದಿತ್ತು. ಲಕ್ಯಾ ಹೋಬಳಿಯಲ್ಲಿ ಶೇ 75ರಷ್ಟು ಮಳೆ ಕೊರತೆಯಾಗಿದ್ದರೆ, ಅಂಬಳೆ, ಆಲ್ಲೂರು, ಸಂಗಮೇಶ್ವರಪೇಟೆ, ಆವತಿ, ಚಿಕ್ಕಮಗಳೂರು ಕಸಬಾ ಹೋಬಳಿಗಳಲ್ಲೂ ಮಳೆ ಕೊರತೆಯಾಗಿತ್ತು.

ಜಾಗರ ಮತ್ತು ವಸ್ತಾರೆ ಹೋಬಳಿಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂಬ ಕಾರಣಕ್ಕೆ ಬರಪಟ್ಟಿಯಿಂದ ಹೊರಗುಳಿದಿತ್ತು. ಚಿಕ್ಕಮಗಳೂರು ತಾಲ್ಲೂಕಿನ ಹೋಬಳಿವಾರು ಮಳೆ ವಿವರ ಒಳಗೊಂಡ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿತ್ತು. ವಿಶೇಷ ಪ್ರಕರಣ ಎಂದು ಪರಿಗಣಿಸಲು ಕೋರಿತ್ತು.

ಇದೀಗ ಮೂರನೇ ಪಟ್ಟಿಯನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಹೊಸದಾಗಿ 40 ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಿದೆ. ಚಿಕ್ಕಮಗಳೂರು ಮತ್ತು ಕಳಸ ತಾಲ್ಲೂಕು ಸೇರಿಕೊಂಡಿವೆ.

ಜಿಲ್ಲೆಯಲ್ಲಿ ಈ ವರ್ಷ ಶೇ 37ರಷ್ಟು ಮಳೆ ಕೊರತೆ ಉಂಟಾಗಿದ್ದು, ಶೇ 39ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಜಿಲ್ಲೆಯ ಒಟ್ಟು 9 ತಾಲ್ಲೂಕುಗಳಲ್ಲಿ 7 ತಾಲ್ಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಸೇರಿದ್ದು, ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳು ಮಾತ್ರ ಪಟ್ಟಿಯಿಂದ ಹೊರಗುಳಿದಿವೆ.

Chikkamagaluru-Kalasa included in the third list of drought-hit taluks.

Share

Leave a comment

Leave a Reply

Your email address will not be published. Required fields are marked *

Don't Miss

ನೂತನ ಸೌಲಭ್ಯಗಳೊಂದಿಗೆ ಚಿಕ್ಕಮಗಳೂರು ರೈಲು ನಿಲ್ದಾಣ ಲೋಕಾರ್ಪಣೆ

ಚಿಕ್ಕಮಗಳೂರು: ಪರಂಪರೆಯಿಂದ ಆಧುನಿಕತೆಯತ್ತ ಹೆಜ್ಜೆಯಿಟ್ಟಿರುವ ಚಿಕ್ಕಮಗಳೂರು ರೈಲು ನಿಲ್ದಾಣವು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 22.06 ಕೋಟಿ ವೆಚ್ಚದಲ್ಲಿ ಪುನ‌ರ್ ಅಭಿವೃದ್ಧಿಗೊಂಡಿದ್ದು, ನೂತನ ಸೌಲಭ್ಯಗಳೊಂದಿಗೆ ಶುಕ್ರವಾರ ಲೋಕಾರ್ಪಣೆಗೊಂಡಿತು. ಪ್ರಧಾನಿ ನರೇಂದ್ರ ಮೋದಿ...

ತಂಬಾಕು ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಿ

ಚಿಕ್ಕಮಗಳೂರು:  ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಿಲ್ಲೆಯ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಹಾಗೂ ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ...

Related Articles

ಕುವೆಂಪು ಶ್ರೀ ರಾಮಾಯಣ ದರ್ಶನಂನಲ್ಲಿ ಗಾಂಧಿ ಮತ್ತು ಅರವಿಂದರ ಪ್ರಭಾವ

ತರೀಕೆರೆ: ಕುವೆಂಪು ರವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಗಾಂಧಿ ಮತ್ತು ಅರವಿಂದ ಘೋಷರ ಪ್ರಭಾವದಿಂದ...

ಕಾರ್ಯನಿರ್ವಹಿಸದ ಉಪಕಾರಾಗೃಹದಲ್ಲಿ ಕಳ್ಳತನ

ತರೀಕೆರೆ:  ಕಾರ್ಯನಿರ್ವಹಿಸದ ತರೀಕೆರೆ ಉಪಕಾರಾಗೃಹದ ಹಿಂಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಹಲವು ವಸ್ತುಗಳನ್ನು ಕಳವು ಮಾಡಿರುವುದಲ್ಲದೆ,...

ಪ್ರತಿಭಟನೆಗೆ ಅಪ್ರಾಪ್ತ ಮಕ್ಕಳ ಬಳಕೆ – ಸಂಘಟಕನ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಕೈಗಾರಿಕಾ ಮಾಲಿನ್ಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಪ್ರಾಪ್ತ ಮಕ್ಕಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡ ಆರೋಪದಡಿ ಗ್ರಾಮಾಂತರ...

ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದ ಚಾಲಕ ಸಾವು

ಚಿಕ್ಕಮಗಳೂರು: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು...