ತರೀಕೆರೆ: ಕುವೆಂಪು ರವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಗಾಂಧಿ ಮತ್ತು ಅರವಿಂದ ಘೋಷರ ಪ್ರಭಾವದಿಂದ ಮೂಡಿ ಬಂದ ಕೃತಿ ಯಾಗಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ಎಲ್ಲಾ ಶೋಷಣೆಗಳ ವಿರುದ್ಧ ಹೋರಾಟವನ್ನು ರಾಮಾಯಣ ಪಾತ್ರಗಳ ಮೂಲಕ ಕುವೆಂಪು ಕಟ್ಟಿಕೊಟ್ಟರು ಎಂದು ಕೊಪ್ಪದ ವಕೀಲ ಹಾಗೂ ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ ಅಭಿಪ್ರಾಯ ಪಟ್ಟರು
ಅವರು ಪಟ್ಟಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿ ಮತ್ತು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಶ್ರೀ ರಾಮಾಯಣ ದರ್ಶನಂ ಪುಸ್ತಕ ಓದು ಮತ್ತು ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯ ಗೀತ ಗಾಯನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು
ಕುವೆಂಪು ಅವರ ರಾಮಾಯಣ ದರ್ಶನಂ 10 ನೇ ಶತಮಾನದಲ್ಲಿ ಪಂಪ ರಚಿತ ಕನಾ೯ಟಕ ಭಾರತ ಕಥಾ ಮಂಜರಿಯ ನಂತರ 15 ನೇ ಶತಮಾನದಲ್ಲಿ ಕುಮಾರ ಭಾರತ ನಂತರ 20 ನೇ ಶತಮಾನದಲ್ಲಿ ಮೂಡಿ ಬಂದ ಮಹಾಕಾವ್ಯ ವಾಗಿದೆ. ರಾಮಾಯಣವನ್ನು ಜನಪದರು ತಮ್ಮ ಅನುಭವಗಳ ಮೂಲಕ ರಚಿಸಿದ್ದಾರೆ. ರಾಮ ಮನೋಹರ ಲೋಹಿಯಾ ಪ್ರಕಾರ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ನಿರಕ್ಷರಕುಕ್ಷಿಗು ಸೇರಿದ ಸಾಹಿತ್ಯ ವಾಗಿವೆ ಎಂದು ಹೇಳಿದರು
ಕುವೆಂಪು ರಾಮಾಯಣದಲ್ಲಿ ಹಿಂಸೆಗೆ ಅವಕಾಶವಿಲ್ಲದೆ ಪಶ್ಚಾತಾಪಕ್ಕೆ ಅವಕಾಶ ನೀಡಲಾಗಿದೆ. ಲಂಕೆಯನ್ನು ಗೆದ್ದು ಸೀತೆಯನ್ನು ಮರಳಿ ಪಡೆದ ರಾಮ ಯುದ್ಧದಲ್ಲಾದ ನಷ್ಟಗಳ ಕುರಿತು ಪಶ್ಚಾತ್ತಾಪ ಪಡುತ್ತಾನೆ. ವಾಲಿಯನ್ನು ಕೊಂದ ಸುಗ್ರೀವ ನಲ್ಲಿ ಪಶ್ಚಾತ್ತಾಪ ಕಾಡುತ್ತದೆ. ಯುದ್ಧಗಳಿಂದ ಯಾವುದೇ ಲಾಭವಿಲ್ಲ ಎನ್ನುವ ಅನಿಸಿಕೆಯನ್ನು ಕಾವ್ಯದಲ್ಲಿ ಬರುವ ರೈತ ವ್ಯಕ್ತಪಡಿಸುತ್ತಾನೆ. ರಾಮ ರಾವಣನ ಯುದ್ಧವು ಮೂಖ೯ರ ಯುದ್ಧ ಎಂದು ಕರೆಯುತ್ತಾನೆ. ಜಗತ್ತಿನ ಯಾವುದೆ ಮಹಿಳೆಗೆ ಯುದ್ಧ ನೋವು ತರುತ್ತದೆ. ಆದರೆ ಪುರುಷರು ಯುದ್ಧವನ್ನು ಸಂಭ್ರಮಿಸುತ್ತಾರೆ ಎಂದು ಪ್ರಚಲಿತ ಯುದ್ಧಗಿಗೆ ರಾಮಾಯಣ ದರ್ಶನಂ ಉತ್ತಮ ಪರಿಹಾರವಾಗಿದೆ.
ಯಾವುದೇ ರಾಮಾಯಣದಲ್ಲಿ ಉಮಿ೯ಳೆಗೆ ನ್ಯಾಯ ದೊರಕಿಲ್ಲ. ಕುವೆಂಪು ಉಮಿ೯ಳೆಯ ಮನಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಮಲೆನಾಡಿನ ಸೊಬಗನ್ನು ತಮ್ಮ ಕಾವ್ಯದಲ್ಲಿ ತೆರೆದಿಡುವ ಮೂಲಕ ಕುವೆಂಪು ತಮಗಿದ್ದ ಪರಿಸರ ಪ್ರೇಮವನ್ನು ಉಣಬಡಿಸಿದ್ದಾರೆ ಎಂದು ಹೇಳಿದರು
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಟಿ ಎಸ್ ಪ್ರಕಾಶ್ ವಮಾ೯ ಶ್ರೀ ರಾಮಾಯಣ ದರ್ಶನಂ ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕಾವ್ಯ ಎನ್ನುವುದು ಹೆಗ್ಗಳಿಕೆಯ ವಿಷಯ. ಸುಧೀರ್ ಕುಮಾರ್ ಮುರೊಳ್ಳಿ ಸರಳ ಮಾತಿನಲ್ಲಿ ಕಾವ್ಯವನ್ನು ಅನಾವರಣ ಗೊಳಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮಲ್ಲಿ ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಮೂಡಿಸುತ್ತವೆ ಎಂದು ಹೇಳಿದರು
ರಾಮಾಯಣವನ್ನು ವಿಭಿನ್ನವಾಗಿ ನೋಡಬಹುದು ಎನ್ನುವ ಮತ್ತು ಈಗೀನ ವ್ಯವಸ್ಥೆಗೆ ಪರಿಹಾರವಾಗಿ ಬಳಸುವ ಮೂಲಕ ಒಂದು ಕಾವ್ಯವನ್ನು ಹೇಗೆ ಅಥ೯ಮಾಡಿಕೊಳ್ಳಬಹುದೆಂಬ ಖಚಿತತೆಯನ್ನು ಉಪನ್ಯಾಸ ಕಟ್ಟಿಕೊಟ್ಟಿದೆ ಎಂದು ಹೇಳಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಟಿ ದಾದಾಪೀರ್ ವಾಲ್ಮೀಕಿ ರಾಮಾಯಣದ ಮೂಲ ಆಶಯವನ್ನು ಇಟ್ಟುಕೊಂಡು ರಚಿತವಾದ ಅನೇಕ ಕಾವ್ಯಗಳಲ್ಲಿ ಕುವೆಂಪು ರಾಮಾಯಣ ದರ್ಶನಂ ವಿಭಿನ್ನವಾಗಿದೆ. ಮಲೆನಾಡಿನ ಪರಿಸರ , ಸಮನ್ವಯತೆ, ಸಮಾನತೆ, ದೂರದೃಷ್ಟಿ ಹೊಂದಿರುವ ಕಾವ್ಯವಾಗಿದೆ ಎಂದು ಹೇಳಿದರು
ಸ್ಥಳೀಯ ಗಾಯಕ ರಾದ ಸುನೀತಾ ಕಿರಣ್, ಲತಾ ಕೃಷ್ಣಮೂರ್ತಿ, ರೋಹಿಣಿ ನರಸಿಂಹ ಮೂರ್ತಿ, ವಿಜಯ ಪ್ರಕಾಶ್ , ಉಮಾ ಪ್ರಕಾಶ್, ಶ್ರೀನಿವಾಸ ಕುವೆಂಪು ವಿರಚಿತ ಗೀತೆ ಹಾಡಿದರು
ತಾಲ್ಲೂಕು ಪಂಚಾಯಿತಿ ಕಾರ್ಯ ನಿವ೯ಹಣಾಧಿಕಾರಿ ದೇವೆಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷೆ ಹೇಮಲತಾ, ನೌಕರರ ಸಂಘದ ಅಧ್ಯಕ್ಷ ಅನಂತಪ್ಪ, ಶರಣ ಸಾಹಿತ್ಯ ಪರಿಷತ್ತಿನ ಮುಖಂಡರಾದ ಮಧು ಸೂಧನ್, ಚೇತನ್ ಗೌಡ, ಟಿ. ಎಸ್. ನಾಗರಾಜ್, ಮನಸುಳಿ ಮೋಹನ್ ಇದ್ದರು
The Influence of Gandhi and Aurobindo on Kuvempu’s *Sri Ramayana Darshanam*
Leave a comment