Home namma chikmagalur chikamagalur ಮಾಂಸ ಮಾರಾಟ- ಮೂವರ ಬಂಧನ
chikamagalurHomeLatest Newsnamma chikmagalur

ಮಾಂಸ ಮಾರಾಟ- ಮೂವರ ಬಂಧನ

Share
Share

ಎನ್.ಆ‌ರ್. ಪುರ: ಕಾಡಿನಲ್ಲಿ ಮೇಯುತ್ತಿದ್ದ ಜಾನುವಾರನ್ನು ಹಿಡಿದು ತಂದು ಎಸ್ಟೇಟ್‌ ನ ಕೂಲಿಲೈನ್ ಬಳಿ ಬರ್ಬರವಾಗಿ ಕಡಿದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಗಂಟೆನಾಯ್ಕ ಎಸ್ಟೇಟ್‌ ನಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದಾರೆ ಎಂಬ ಖಚಿತ ಬಾತ್ಮೀದಾರರ ಮಾಹಿತಿ ಮೇರೆಗೆ ಬಾಳೆಹೊನ್ನೂರು ಠಾಣಾ ಪೊಲೀಸರು ಪಂಚರೊಂದಿಗೆ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಸ್ಥಳದಲ್ಲಿದ್ದ ಐವರ ಪೈಕಿ ಮೂವರನ್ನು ಪೊಲೀಸರು ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಉಳಿದ ಇಬ್ಬರು ಕತ್ತಲಿನಲ್ಲಿ ಕಾಲ್ಕಿತ್ತಿದ್ದಾರೆ. ಬಂಧಿತರನ್ನು ಅಸ್ಸಾಂ ಮೂಲದ ಕಾರ್ಮಿಕರಾದ ಹಶೀಮ್ ಅಲಿ (25), ಶಾಹದತ್ ಅಲಿ (19) ಹಾಗೂ ಆಸಾದುಲ್ ಹಕ್ (19) ಎಂದು ಗುರುತಿಸಲಾಗಿದ್ದು, ಪರಾರಿಯಾದ ಮುಬರಾಕ್ (27) ಮತ್ತು ಸಫಿಕುಲ್ ಇಸ್ಲಾಂ (32) ಗಾಗಿ ಶೋಧ ಮುಂದುವರಿದಿದೆ.

ಸ್ಥಳ ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಬಕೆಟ್‌ಳಲ್ಲಿದ್ದ ಸುಮಾರು 20 ಕೆ.ಜಿ ಜಾನುವಾರಿನ ಮಾಂಸ, ಕೃತ್ಯಕ್ಕೆ ಬಳಸಲಾಗಿದ್ದ ಎರಡು ಕತ್ತಿಗಳು ಹಾಗೂ ಮರದ ತುಂಡುಗಳನ್ನು ಪೊಲೀಸರು ಮಹಜರ್ ನಡೆಸಿ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಜಾನುವಾರು ವಧೆ ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Meat sale – Three arrested

Share

Leave a comment

Leave a Reply

Your email address will not be published. Required fields are marked *

Don't Miss

ಕೆಎಸ್‌ಆರ್‌ಟಿಸಿ ಬಸ್‌ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು-ಗ್ರಾಮಸ್ಥರು

ಕಡೂರು: ಗ್ರಾಮೀಣ ಭಾಗದ ಕುಗ್ರಾಮಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಕಡೂರು ತಾಲೂಕಿನ ಕಬ್ಬಳ್ಳಿ ಗೇಟ್ ಬಳಿ...

ವಿಶೇಷ ಅಧಿವೇಶನದಲ್ಲಿ ಪಕ್ಷಭೇದ ಮರೆತು ಮಲೆನಾಡಿನ ಸಮಸ್ಯೆ ಚರ್ಚಿಸಲು ಒತ್ತಾಯ

ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21, 22 ಮತ್ತು 23ರಂದು ಮೂರು ದಿನಗಳ ವಿಶೇಷ ಅಧಿವೇಶನ ಕರೆದಿರುವುದನ್ನು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಸ್ವಾಗತಿಸಿದೆ....

Related Articles

ಪೌರ ಕಾರ್ಮಿಕರಿಗೆ ಸವಲತ್ತು ಕಲ್ಪಿಸಿ

ಚಿಕ್ಕಮಗಳೂರು:  ಪೌರಕಾರ್ಮಿಕರಿಗೆ ವಸತಿ ಸೌಲಭ್ಯ, ರಜೆ, ಮಕ್ಕಳ ಶಿಕ್ಷಣ ಸೇರಿದಂತೆ ಅವರ ಕಲ್ಯಾಣಕ್ಕೆ ಅಗತ್ಯ ಸೌಕರ್ಯಗಳನ್ನು...

ಗ್ರೌಂಡ್ ಸರ್ವೇ ಅಗತ್ಯ-’ಕಾರ್ಬನ್ ಕ್ರೆಡಿಟ್ ನಿಗಮ’ ಸ್ಥಾಪನೆಗೆ ಪ್ರಸ್ತಾಪ

ಚಿಕ್ಕಮಗಳೂರು:  ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ  ಸಂಬಂಧಿಸಿದಂತೆ ಉಪಗ್ರಹ ಆಧಾರಿತ ಚಿತ್ರಣವನ್ನು...

ನಕಲಿ ಬೀಗದ ಕೈ ಬಳಸಿ ಮನೆಯಲ್ಲಿದ್ದ ನಗ-ನಗದು ಕಳವು

ಚಿಕ್ಕಮಗಳೂರು: ಮನೆಯ ಯಜಮಾನರು ಹಬ್ಬದ ಸಂಭ್ರಮಕ್ಕೆಂದು ಊರಿಗೆ ತೆರಳಿದ್ದ ಸಮಯವನ್ನೇ ಹೊಂಚು ಹಾಕಿ ಕಾದು, ನಕಲಿ...

ಮನೆಗೆ ಕನ್ನಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಕೊಪ್ಪ: ಮಗಳ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಣುಂಬಿಕೊಳ್ಳಲು ಇಡೀ ಕುಟುಂಬವೇ ಸಂಭ್ರಮದಿಂದ ಶಾಲೆಗೆ ತೆರಳಿದ್ದ ವೇಳೆ, ಖದೀಮರು...