Home namma chikmagalur chikamagalur ಬಿಸಿಯೂಟ ಕಾರ್ಯಕರ್ತೆರ ವೇತನ ಬಿಡುಗಡೆಗೆ ಆಗ್ರಹಿಸಿ ಮನವಿ
chikamagalurHomeLatest Newsnamma chikmagalur

ಬಿಸಿಯೂಟ ಕಾರ್ಯಕರ್ತೆರ ವೇತನ ಬಿಡುಗಡೆಗೆ ಆಗ್ರಹಿಸಿ ಮನವಿ

Share
Share

ಚಿಕ್ಕಮಗಳೂರು: – ಬಿಸಿಯೂಟ ಕಾರ್ಯಕರ್ತೆಯರಿಗೆ ಬಾಕಿ ಉಳಿಸಿಕೊಂಡಿರುವ ಸಂಬಳವ ನ್ನು ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಕ್ಷರ ದಾಸೋಹ ಕಾರ್ಯಕರ್ತೆಯರ ಫೆಡರೇಷನ್ ಜಿಲ್ಲಾ ಸಮಿತಿ ಮುಖಂಡರು ಮಂಗಳವಾರ ಅಪರ ಜಿಲ್ಲಾಧಿಕಾರಿ ನಂಜು ಂಡೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಎಐಟಿಯುಸಿ ಜಿಲ್ಲಾದ್ಯಕ್ಷ ಎಸ್.ವಿಜಯ್‌ಕುಮಾರ್ ರಾಜ್ಯಾದ್ಯಂತ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಅಡುಗೆ ಮಾಡುವ ಕಾರ್ಯಕರ್ತೆಯರಿಗೆ ಸರ್ಕಾರಿ ೪೬೦೦ ರೂ.ಗಳನ್ನು ಮಾಸಿಕ ವೇತನವಾಗಿ ನೀಡುತ್ತಿದ್ದು ಇದು ಸಹ ಕಳೆದ ಮೂರು ತಿಂಗಳಿನಿಂದ ವೇತನ ನೀಡದೇ ಬಾಕಿ ಉ ಳಿಸಿಕೊಂಡಿದೆ ಎಂದು ತಿಳಿಸಿದರು.

ವೇತನವನ್ನು ನಂಬಿ ಬಿಸಿಯೂಟ ಕಾರ್ಯಕರ್ತೆಯರು ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಮೂರು ತಿಂಗಳ ವೇತನ ಕೂಡಲೇ ಬಿಡುಗಹಡೆ ಮಾಡಬೇಕು. ಮಕ್ಕಳ ಪೌಷ್ಠಿಕತೆಗೆ ಅನುಕೂಲವಾಗಲೆಂದು ನೀಡುತ್ತಿ ರುವ ಮೊಟ್ಟೆಯನ್ನು ಸುಲಿದು ಮಕ್ಕಳಿಗೆ ನೀಡಲು ಕನಿಷ್ಟ ೩೦ ಪೈಸೆಗಳಂತೆ ನೀಡಬೇಕು ಎಂದು ತಿಳಿಸಿದರು.

ಈಗಾಗಲೇ ೨೦೦೩-೦೩ನೇ ಸಾಲಿನಿಂದ ಅಡುಗೆ ಮಾಡಿ ನಿವೃತ್ತರಾದ ಕಾರ್ಯಕರ್ತೆಯರಿಗೆ ನೀಡಬೇ ಕಾದ ಹಿಡಿಗಂಟು ಹಣವನ್ನು ಇಲ್ಲಿಯವರೆಗೆ ನೀಡದೇ ನಿವೃತ್ತ ಕಾರ್ಯಕರ್ತೆಯರು ತಮ್ಮ ವೃದ್ದಾಪ್ಯವನ್ನು ನಿಭಾಯಿಸುವುದು ಬಹಷ್ಟು ಕಷ್ಟಕರವಾಗಿದ್ದು ಕೂಡಲೇ ಸರ್ಕಾರ ಹಿಡಿಗಂಟನ್ನು ಬಿಡುಗಡೆ ಮಾಡಿ ಕಾಯ ಕರ್ತೆಯರ ಸಹಾಯಕ್ಕೆ ಬರಬೇಕು ಎಂದರು.

ಎಐಟಿಯುಸಿ ತಾಲ್ಲೂಕು ಅಧ್ಯಕ್ಷ ಇಂದುಮತಿ ಮಾತನಾಡಿ ದಿನಕ್ಕೆ ೬ ರಿಂದ ೭ ಗಂಟೆ ಕಾಲಾವಕಾ ಶವಿಲ್ಲದೇ ಬಿಸಿಯೂಟ ಕಾರ್ಯಕರ್ತೆಯರನ್ನು ಕನಿಷ್ಟ ವೇತನ ವ್ಯಾಪ್ತಿಗೆ ಒಳಪಡಿಸಬೇಕು ಎಂಸು ಸಂಘ ಟನೆ ಒತ್ತಾಯಿಸಿದ್ದು ೨೦ ವರ್ಷಕ್ಕೂ ಹಾಜರಾತಿ ಸಂಖ್ಯೆ ನಿಗಧಿಗಿ ಂತ ಕಡಿಮೆಯಾಗುತ್ತಿದ್ದಂತೆ ಕಾರ್ಯ ಕರ್ತೆರ ಶ್ರಮ ಮತ್ತು ಸೇವೆ ಪರಿಗಣಿಸದೇ ಏಕಾಏಕಿ ಕೆಲಸದಿಂದ ತೆಗೆ ದು ಹಾಕಿ ಬೀದಿಪಾಲು ಮಾಡಲಾ ಗುತ್ತಿದೆ. ಈ ನೀತಿಯನ್ನು ಬದಲಾಯಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಐಟಿಯುಸಿ ತಾಲ್ಲೂಕು ಕಾರ್ಯದರ್ಶಿ ಶಮಿಮ ಬಾನು, ಉಪಾಧ್ಯಕ್ಷೆ ನಾಗಮ ಣಿ, ಕಡೂರು ತಾಲ್ಲೂಕು ಕಾರ್ಯದರ್ಶಿ ಸ್ವಪ್ನ ಮುಂತಾದವರು ಉಪಸ್ಥಿತರಿದ್ದರು.

Appeal demanding release of salaries of hot meal workers

 

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯ ಹಿಂಭಾಗದಲ್ಲಿ ಬೆಳೆದಿದ್ದ 12.250 ಕೆ.ಜಿ. ಹಸಿ ಗಾಂಜಾ ವಶ

ತರೀಕೆರೆ: ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ನಿವಾಸಿ ದಿನೇಶ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು ೧೨.೨೫೦ ಕೆ.ಜಿ. ತೂಕದ ಹಸಿ ಗಾಂಜಾವನ್ನು ತರೀಕೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಆನಂದ್ ಡಿ....

ಪತ್ನಿ ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹75 ಸಾವಿರ ದಂಡ...

Related Articles

ದೇಶವಿರೋಧಿ ಮನಸ್ಥಿತಿ ವಿರುದ್ಧ ಕಠಿಣ ಕ್ರಮ ಅಗತ್ಯ

ಮೂಡಿಗೆರೆ : ಕಾಫಿನಾಡಿನ ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಹಾಕಿ ವೈರಲ್ ಮಾಡಿದ್ದ ಪ್ರಕರಣಕ್ಕೆ...

ಕೆಎಸ್‌ಆರ್‌ಟಿಸಿ ಬಸ್‌ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು-ಗ್ರಾಮಸ್ಥರು

ಕಡೂರು: ಗ್ರಾಮೀಣ ಭಾಗದ ಕುಗ್ರಾಮಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು...

ವಿಶೇಷ ಅಧಿವೇಶನದಲ್ಲಿ ಪಕ್ಷಭೇದ ಮರೆತು ಮಲೆನಾಡಿನ ಸಮಸ್ಯೆ ಚರ್ಚಿಸಲು ಒತ್ತಾಯ

ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21, 22 ಮತ್ತು 23ರಂದು ಮೂರು...

ಸಿ.ಎಸ್. ಸುಮಿತ್ರಾಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ವಿಶೇಷ ಪ್ರಶಸ್ತಿ

ಚಿಕ್ಕಮಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗಳನ್ನು ಉಳಿಸಿ, ಅವುಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವಲ್ಲಿ...