Home namma chikmagalur chikamagalur ದೇಶವಿರೋಧಿ ಮನಸ್ಥಿತಿ ವಿರುದ್ಧ ಕಠಿಣ ಕ್ರಮ ಅಗತ್ಯ
chikamagalurHomeLatest Newsnamma chikmagalur

ದೇಶವಿರೋಧಿ ಮನಸ್ಥಿತಿ ವಿರುದ್ಧ ಕಠಿಣ ಕ್ರಮ ಅಗತ್ಯ

Share
Share

ಮೂಡಿಗೆರೆ : ಕಾಫಿನಾಡಿನ ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಹಾಕಿ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ಬಲವಾಗಿ ಖಂಡಿಸಿ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿಯೇ ಹುಟ್ಟಿ, ಇಲ್ಲಿಯ ಅನ್ನ ತಿಂದು, ದೇಶದ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಅನುಭವಿಸುತ್ತಿರುವ ಕೆಲವರು ಪಾಕಿಸ್ತಾನದ ಪರವಾಗಿ ಒಲವು ತೋರಿಸುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಅವರು ಕಿಡಿಕಾರಿದ್ದಾರೆ.

ಇಂದು ಪಾಕಿಸ್ತಾನದಲ್ಲಿ ಅನ್ನವೂ ಇಲ್ಲದೆ, ಉದ್ಯೋಗವೂ ಸಿಗದೆ ಇಡೀ ದೇಶವೇ ಆರ್ಥಿಕವಾಗಿ ಕಂಗಾಲಾಗಿ ಬಿಕಾರಿಯಾಗಿದೆ. ಅಂತಹ ದೇಶದ ಪರವಾಗಿ ಜಿಂದಾಬಾದ್ ಕೂಗುವುದು ಅಥವಾ ಹಾಡುಗಳನ್ನು ಹಾಕುವುದು ಆ ದೇಶದ ಮೇಲಿನ ಪ್ರೀತಿಯಿಂದಲ್ಲ, ಅದರ ಹಿಂದೆ ಬೇರೆಯದೇ ದುರುದ್ದೇಶವಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನ ಪರ ಘೋಷಣೆಗಳು ಕೇವಲ ನೆಪ ಮಾತ್ರವಾಗಿದ್ದು, ಇದರ ಹಿಂದಿರುವ ನಿಜವಾದ ಅಜೆಂಡಾ ಇಡೀ ದೇಶವನ್ನು ಇಸ್ಲಾಮೀಕರಣ ಮಾಡುವುದೇ ಆಗಿದೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ. ದೇಶದ ನೆಲದಲ್ಲೇ ಇದ್ದು ಇಂತಹ ದೇಶವಿರೋಧಿ ಮನಸ್ಥಿತಿ ಪ್ರದರ್ಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Strict action is needed against anti-national sentiment

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯ ಹಿಂಭಾಗದಲ್ಲಿ ಬೆಳೆದಿದ್ದ 12.250 ಕೆ.ಜಿ. ಹಸಿ ಗಾಂಜಾ ವಶ

ತರೀಕೆರೆ: ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ನಿವಾಸಿ ದಿನೇಶ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು ೧೨.೨೫೦ ಕೆ.ಜಿ. ತೂಕದ ಹಸಿ ಗಾಂಜಾವನ್ನು ತರೀಕೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಆನಂದ್ ಡಿ....

ಪತ್ನಿ ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹75 ಸಾವಿರ ದಂಡ...

Related Articles

ಕೆಎಸ್‌ಆರ್‌ಟಿಸಿ ಬಸ್‌ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು-ಗ್ರಾಮಸ್ಥರು

ಕಡೂರು: ಗ್ರಾಮೀಣ ಭಾಗದ ಕುಗ್ರಾಮಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು...

ವಿಶೇಷ ಅಧಿವೇಶನದಲ್ಲಿ ಪಕ್ಷಭೇದ ಮರೆತು ಮಲೆನಾಡಿನ ಸಮಸ್ಯೆ ಚರ್ಚಿಸಲು ಒತ್ತಾಯ

ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21, 22 ಮತ್ತು 23ರಂದು ಮೂರು...

ಸಿ.ಎಸ್. ಸುಮಿತ್ರಾಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ವಿಶೇಷ ಪ್ರಶಸ್ತಿ

ಚಿಕ್ಕಮಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗಳನ್ನು ಉಳಿಸಿ, ಅವುಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವಲ್ಲಿ...

ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಪಲ್ಟಿ-ಮಹಿಳೆ ಸಾವು

ಎನ್.ಆ‌ರ್.ಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಕರನ್ನು ಮಾತನಾಡಿಸಿಕೊಂಡು ಊರಿಗೆ ಮರಳುತ್ತಿದ್ದ ಕುಟುಂಬಕ್ಕೆ ಮಾರ್ಗಮಧ್ಯೆಯೇ ಭೀಕರ ವಿಧಿ...