ಚಿಕ್ಕಮಗಳೂರು: ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಅನೇಕ ಬಲಾಡ್ಯ ಕಂಪನಿಗಳು ಮು ಂದಾಗಿವೆ. ಈ ಮೂಲ ವೃತ್ತಿದಾರರು ಕುಲಕಸುಬನ್ನು ತ್ಯಜಿಸದೇ, ಉತ್ತೇಜಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ಬಳ ಸಿ ಕ್ಷೌರಿಕ ಉದ್ಯಮವನ್ನು ವೃದ್ದಿಸಬೇಕು ಎಂದು ವಕೀಲ ಪ್ರಕಾಶ್ ಹೇಳಿದರು.
ನಗರದ ನೆಹರು ರಸ್ತೆಯಲ್ಲಿ ಶ್ರೀರಾಮಮಂದಿರ ಆರ್ಯನಯಜ ಕ್ಷತ್ರಿಯ ಸವಿತಾ ಸಮಾಜ ಹಾಗೂ ಯುವ ವೇದಿಕೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ಧ ವಿಶ್ವ ಕ್ಷೌರಿಕ ದಿನಾಚರಣೆ ಹಾಗೂ ಕ್ಷೌರಿಕ ರಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಅಂದ-ಚೆಂದವನ್ನು ಹೆಚ್ಚಿಸುವ ಕ್ಷೌರಿಕ ವೃತ್ತಿ ಒಂದು ವಿಶೇಷವಾಗಿದೆ. ಇಂದಿನ ಯುವಕರು ಹೆಚ್ಚು ಮೂಲಕಸುಬನ್ನು ಕೈಬೀಡದೇ ಮುಂದುವರೆಸುವ ಕಾರ್ಯ ಮಾಡಬೇಕು. ಅಲ್ಲದೇ ವೃತ್ತಿ ಕಡಿಮೆ ವೆಚ್ಚದಲ್ಲಿ ಲಾಭಾಂಶ ಗಳಿಸಿಕೊಡುವ ಒಂದು ಉದ್ಯಮವಾಗಿದೆ ಎಂದು ತಿಳಿಸಿದರು.
ಇತ್ತೀಚಿನ ಹೊಸ ಹೊಸ ತಂತ್ರಜ್ಞಾನ ಬಳಕೆಯಿಂದ ಶೇವಿಂಗ್, ಹೇರ್ಕಟ್ಟಿಂಗ್ ಆಕರ್ಷಕತೆ ಬೆಳೆಸುತ್ತಿ ದೆ. ಗ್ರಾಹಕರಿಗೆ ಉತ್ತಮ ಸೇವೆ, ವಿಭಿನ್ನ ರೀತಿಯ ವಿನ್ಯಾಸಗಳು ಸೆಳೆಯುವ ಒಂದು ಸಾಧನ. ಹೀಗಾಗಿ ಹೆಚ್ಚು ಶ್ರಮಿಸಿದರೆ ಬದುಕನ್ನು ಬದಲಾಯಿಸುವ ಅಪರೂಪದ ಕಸುಬಾಗಿದೆ ಎಂದು ಹೇಳಿದರು.
ಶ್ರೀಮಾ ಬ್ಯೂಟಿಷಿಯನ್ ಅಕಾಡೆಮಿ ಸಂಸ್ಥಾಪಕಿ ಮಂಜುಳಾ ಮಾತನಾಡಿ ಇತ್ತೀಚಿನ ಯುವಕರು ಡಾಕ್ಟರ್, ಇಂಜಿನಿಯರ್ಗಳಾಗುವ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪೂರ್ವಿಕರ ಕಾಲಘಟ್ಟದಿಂದ ಹರಿದುಬಂದಿರುವ ವೃತ್ತಿಯನ್ನು ಮಾಡುತ್ತಿಲ್ಲ. ಹೀಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ವೃತ್ತಿ ಆರಂಭಿಸಿದರೆ, ಹಂತ ಹಂತವಾಗಿ ಬೆಳೆದು ದೊಡ್ಡಮಟ್ಟಿನ ಮಳಿಗೆಯಾಗಿ ಪರಿವರ್ತಿಸಬಹುದು ಎಂದರು.
ಶ್ರೀರಾಮಮಂದಿರ ಆರ್ಯನಯಜ ಕ್ಷತ್ರಿಯ ಸವಿತಾ ಸಮಾಜದ ಅಧ್ಯಕ್ಷ ಸಿ.ಎಂ.ಯೋಗೀಶ್ ಮಾತ ನಾಡಿ ಕಾರ್ಯಾಗಾರದಲ್ಲಿ ಆಧುನಿಕತೆಗೆ ತಕ್ಕಂತೆ ಹೇರ್ಕೇರ್, ಸ್ಟೈಲಿಂಗ್, ಹೇರ್ ಕಲರ್, ಕರ್ಲಿ, ಸ್ಕಿನ್ ಕೇ ರ್ ಸೇರಿದಂತೆ ವಿವಿಧ ಮಾದರಿಯ ತರಭೇತಿಯನ್ನು ನೀಡಲಾಗುತ್ತಿದ್ದು ಆಸಕ್ತಿಯುಳ್ಳವರು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಖಜಾಂಚಿ ಗಿರೀಶ್, ಕಾರ್ಯದರ್ಶಿ ಯಶ್ವಿನ್, ಸದಸ್ಯರಾದ ಬಸವರಾಜ್ಗೋಗಿ, ಲಕ್ಷ್ಮೀಕಾಂತ್, ಎನ್.ಶ್ರೀಧರ್, ನಾಗರಾಜ್, ಯುವ ವೇದಿಕೆ ಅಧ್ಯಕ್ಷ ಧನರಾಜ್, ಉ ಪಾಧ್ಯಕ್ಷ ನರೇಂದ್ರ, ಗೌರವಾಧ್ಯಕ್ಷ ಹರೀಶ್ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Work to promote the barbering profession.
Leave a comment