ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಖಂಡಿಸಿ ಕರೆ ನೀಡಿದ್ಧ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ನಗರದಲ್ಲಿ ಖಾಲಿಕೊಡ ಹಿಡಿದು, ಉರುಳುಸೇವೆ ಮುಖಾಂತರ ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಕನ್ನಡಸೇನೆ ಕಚೇರಿಯಿಂದ ಪ್ರತಿಭಟನಾ ಜಾಥಾ ಆರಂಭಿಸಿದ ಕನ್ನಡಸೇನೆ, ರೈತ ಸಂಘ ಸೇರಿ ದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಹನುಮಂತಪ್ಪ ವೃತ್ತದಿಂದ ಉರುಳುಸೇವೆ ಆರಂಭಿಸಿದರು. ಅಲ್ಲಿ ಂದ ಪ್ರತಿಭಟನಾ ಕಾಲ್ನಡಿಗೆ ಜಾಥಾದ ಮೂಲಕ ಆಜಾದ್‌ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು.
ಈ ಕುರಿತು ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಕಾವೇರಿ ಕರ್ನಾಟಕದ ಹಕ್ಕು. ಈ ನೀರನ್ನು ನೆರೆ ರಾಜ್ಯಕ್ಕೆ ಬಿಟ್ಟುಕೊಡಲು ಎಂದಿಗೂ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಉರುಳುಸೇವೆ, ಖಾಲಿ ಕೊಡ ಹಿಡಿದು ರಾಜ್ಯದ ಮುಖ್ಯಮಂತ್ರಿಗಳಿಗೆ ಹೋರಾಟದ ಮೂಲಕ ಸಂದೇಶ ನೀಡಲಾಗುತ್ತಿದೆ ಎಂದರು.
ಕರ್ನಾಟಕ ಕಾವೇರಿ ಜಲಾಶಯವನ್ನು ತಮಿಳುನಾಡು ಮುಖ್ಯಮಂತ್ರಿ ಒಮ್ಮೆ ವೀಕ್ಷಿಸುವ ಕಾರ್ಯ ಮೊ ದಲ ಮಾಡಬೇಕು. ರಾಜ್ಯದ ಜನತೆಗೆ ನೀರಿನ ಅಭಾವ ಸಂಭವಿಸಿದಾಗ ನೆರೆ ರಾಜ್ಯಕ್ಕೆ ನೀರು ಬಿಡಲಾಗುವು ದಿಲ್ಲ. ಇದನ್ನು ನೆರೆ ರಾಜ್ಯದ ಮುಖ್ಯಮಂತ್ರಿ ಅರ್ಥ ಮಾಡಿಕೊಳ್ಳದೇ ಕಿತಾಪತಿ ತೆಗೆಯುವ ಕೆಲಸ ಮಾಡುತ್ತಿ ದ್ದಾರೆ ಎಂದು ದೂರಿದರು.
ಕಾವೇರಿ ನೀರಿನ ಅವಶ್ಯವಿರುವ ತಮಿಳುನಾಡು ರಾಜ್ಯ ಅಲ್ಲಿನ ಜನರ ಹಿತ ಕಾಪಾಡಲು ಮೊದಲು ಡ್ಯಾ ಂ ನಿರ್ಮಿಸುವ ಮೂಲಕ ಶೇಖರಿಸುವ ಕಾರ್ಯ ಮಾಡಿದರೆ, ನೀರು ಬಿಟ್ಟಂಥ ಸಂದರ್ಭದಲ್ಲಿ ಇದು ಸಹ ಕಾರಿಯಾಗಲಿದೆ. ಆದರೆ ತಮಿಳುನಾಡು ಹರಿದ ನೀರನ್ನು ಕೂಡಾ ಸಮುದ್ರಕ್ಕೆ ಹರಿಬಿಡುವ ಮೂಲಕ ಉದ್ದ ಟತನ ಮರೆಯುತ್ತಿದೆ ಎಂದು ಆರೋಪಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ಕಾವೇರಿ ನೀರು ಹಂಚಿಕೆ ವಿಷ ಯ ಆಗಬೇಕು. ಆದರೆ ನೀರಿನ ಮೂಲ ಹರಿವು, ಸ್ಥಳೀಯ ನಿವಾಸಿಗಳಿಗೆ ಮೊದಲ ಆದ್ಯತೆ ಕೊಡಬೇಕು. ಹೆಚ್ಚಿನ ಮಳೆಯಿಂದ ನೀರು ತುಂಬಿದ್ದಲ್ಲಿ ನೀರನ್ನು ಹರಿಬಿಡುವುದು ಸಹಜವಾಗಿದೆ ಎಂದು ತಿಳಿಸಿದರು.
ಕಾವೇರಿ ನೀರಿನ ಹೋರಾಟವು ಹಲವಾರು ವರ್ಷಗಳಿಂದ ನಡೆದುಕೊಂಡು ಸಾಗುತ್ತಿದೆ. ಇದಕ್ಕೆ ಶಾಶ್ವ ತ ಪರಿಹಾರ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ನೈತಿಕತೆ ಪ್ರದರ್ಶನ ಮಾಡಬೇಕಿತ್ತು. ರಾಜ್ಯ ದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಅಧಿಕಾರ ನಡೆಸಿದರೂ ಕಾವೇರಿ ನೀರಿನ ಯೋಜನೆ ಬಗೆಹರಿಸುವ ಕೆಲಸ ಮಾಡಿಲ್ಲ ಎಂದು ದೂರಿದರು.
ಕಾವೇರಿ ನೀರು ಹಂಚಿಕೆ ಜೊತೆಗೆ ಮೇಕೆ ದಾಟು ಯೋಜನೆ ಸಮಸ್ಯೆ ಬಗ್ಗೆ ಆಳುವ ಸರ್ಕಾರಗಳು ಗ ಮನಹರಿಸಿದರೆ ಅನೇಕ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ. ಆದರೆ ರಾಜ್ಯದಲ್ಲಿ ಆಳುವ ಪಕ್ಷಗಳು ಮೌ ನ ವಹಿಸಿದರೆ, ಆಳ್ವಿಕೆ ನಡೆಸಿ ಸೋತಿರುವ ಪಕ್ಷಗಳು ವಿರೋಧಿಸುತ್ತಿವೆ. ಹೀಗಾಗಿ ರಾಜಕೀಯ ಒಳಜಗಳ ಬದಿಗಿರಿಸಿ ಕಾವೇರಿ ನೀರಿನ ಹಂಚಿಕೆ ಸಮಸ್ಯೆ ಶೀಘ್ರವೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸುನೀಲ್ ಮಾತನಾಡಿ ಕಾವೇರಿ ನೀರು ಕರ್ನಾಟಕ ಜನರು, ಕೃಷಿಕರ ಬಹು ದೊಡ್ಡ ಆಸ್ತಿ. ಇಲ್ಲಿನ ಜನರಿಗೆ ನೀರಿನ ಕೊರತೆ ಎದುರಾದಾಗ ನೀರು ಕೊಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ರಾಜ್ಯಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ನೆರೆರಾಜ್ಯಕ್ಕೆ ನೀರು ಹರಿಬಿಡದಂತೆ ಸೂ ಕ್ತ ಕ್ರಮ ವಹಿಸಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ನಗರಾಧ್ಯಕ್ಷ ಸತೀಶ್, ಉ ಪಾಧ್ಯಕ್ಷರಾದ ಪಾಪಣ್ಣ, ಆನಂದ್, ಅಭಿ, ಮಹಾದೇವ್, ಹರಿಶಂಕರ್, ಡಿ.ಜೆ.ಹರೀಶ್, ಜಗದೀಶ್, ಜಿಲ್ಲಾ ವಕ್ತಾರರಾದ ಹುಣಸೇಮಕ್ಕಿ, ಕಳವಾಸೆ ರವಿ, ಮುಖಂಡರುಗಳಾದ ಅನ್ವರ್, ಮಂಜುಳಾ, ಮೇಘ, ಇಂದ್ರಾ, ದಾಕ್ಷಯಿಣಿ, ಅಪ್ಪು, ಮಾಗೇಶ್, ಹರೀಶ್, ಸುಜಿತ್, ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.
New sit-in to condemn order to release Cauvery water
Leave a comment