Home namma chikmagalur chikamagalur ಜಿಲ್ಲೆಯಲ್ಲಿ ಮಂತ್ರಿಯಾಗಲಿಲ್ಲ ರಗಳೆ ಬಿಟ್ಟಿಲ್ಲ
chikamagalurHomeLatest Newsnamma chikmagalur

ಜಿಲ್ಲೆಯಲ್ಲಿ ಮಂತ್ರಿಯಾಗಲಿಲ್ಲ ರಗಳೆ ಬಿಟ್ಟಿಲ್ಲ

Share
Share

ಚಿಕ್ಕಮಗಳೂರು; ಮದುವೆ ಆಗಲಿಲ್ಲ, ಹುಚ್ಚು ಬಿಡಲಿಲ್ಲ ಎಂಬ ಸ್ಥಿತಿ ಮಂತ್ರಿ ಆಗಲಿಲ್ಲ, ಓಡಾಡುವುದು ತಪ್ಪಲಿಲ್ಲ.ಎಂಬ ದುಸ್ಥಿತಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳದ್ದು. ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಂತ್ರಿಗಿರಿ ಸಿಗುವುದಿಲ್ಲ ಎಂಬುದಕ್ಕೆ ಕಾರಣ ನೀಡಿ “ನ್ಯೂಸ್ ಕಿಂಗ್” ನಲ್ಲಿ ಬರೆದಿದ್ದ ಸುದ್ದಿ ನೂರಕ್ಕೆ ನೂರರಷ್ಟು ನಿಜವಾಗಿದೆ.

ಜಿಲ್ಲೆಯಲ್ಲಿ ಟಿ.ಡಿ.ರಾಜೇಗೌಡ ಮತ್ತು ಜಿ.ಹೆಚ್.ಶ್ರೀನಿವಾಸ್ ಮಂತ್ರಿ ಸ್ಥಾನಕ್ಕೆ ದೊಡ್ಡ ಮಟ್ಟದ ಲಾಭಿ ಮಾಡಿ ನ್ಯೂಸ್ ಛಾನಲ್ ಗಳಲ್ಲಿ ಹೆಸರು ಬರುವಂತೆ ಮಾಡಿದ್ದು ನೋಡಿದರೆ ಖಾಲಿ ಡಬ್ಬಗಳು ಹೆಚ್ಚು ಸೌಂಡ್ ಮಾಡುತ್ತವೆ ಎಂಬಂತೆ ಆಯಿತು.ಟಿ.ಡಿ.ರಾಜೇಗೌಡರಿಗೆ ಸಿ,ಎಂ.ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಮಂತ್ರಿ ಮಾಡಲು ಸಾಧ್ಯವಿಲ್ಲ.

ಕ್ಷೇತ್ರದಲ್ಲಿ ನಡೆಯುತ್ತಿರುವ ರಗಳೆ ಬಗ್ಗೆ ಗಮನ ಹರಿಸು ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡು ಎಂದು ಹೇಳಿ ಕಳುಹಿಸಿದ್ದಾರೆ.ಇದೇ ರೀತಿ ಜಿ.ಹೆಚ್.ಶ್ರೀನಿವಾಸ್ ಗೆ ಮಾಜಿ ಸಿ.ಎಂ.ಸಿದ್ದರಾಮಯ್ಯ ನಿಮ್ಮ ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದರೂ ಶ್ರೀನಿವಾಸ್ ಅತಿ ಹೆಚ್ಚು ಲಾಭಿ ಮಾಡಿದ್ದರು. ಇವರಿಗೆ ತಡೆ ಹಾಕಲು ಆನಂದ್ ರವರನ್ನು ಆಡ್ಡ ತರಲಾಗಿತ್ತು .ಇದರ ಮಧ್ಯೆ ಹೆಚ್ಚು ಪ್ರಚಾರದಲ್ಲಿ ಇದ್ದ ಹೆಸರು ನಯನ ಮೋಟಮ್ಮರವರದ್ದು ಇದಕ್ಕಾಗಿ ಮೋಟಮ್ಮ ನನ್ನ ಮಗಳಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಹಲವರನ್ನು ದೂರಿದ್ದು ಉಂಟು.

ಇವರೆಲ್ಲರನ್ನು ಮೀರಿ ಅರತಿ ಕೃಷ್ಣ ಹೆಸರು ರಾಷ್ಟ್ರ ಮತ್ತು ಅಂತರ್ ರಾಷ್ಟ್ರದ ಮಧ್ಯೆ ಎನ್.ಆರ್.ಐ.ನಲ್ಲಿ ತೊಡಗಿಸಿಕೊಂಡಿರುವ ಪ್ರಭಾವದಿಂದ ಮಂತ್ರಿ ಆಗುತ್ತಾರೆ ಎಂದು ನಂಬಲಾಗಿತ್ತು. ಇಷ್ಟು ಜನರ ಮಧ್ಯೆ ಗಾಯಿತ್ರಿ ಶಾಂತೇಗೌಡ ವಿಧಾನ ಪರಿಷತ್ ಸದಸ್ಯತ್ವದ ಬಗ್ಗೆ ಇದ್ದ ಕೇಸ್ ಕ್ಲಿಯರ್ ಆಗಿ ವಿಧಾನ ಪರಿಷತ್ ಸದಸ್ಯರಾಗಲು ಕಾತರಿಸುತ್ತಿರುವಾಗ ಹೈಕಮಾಂಡ್ ಕಳುಯಿಹಿದ ಪಟ್ಟಿಯಲ್ಲಿ ಗಾಯಿತ್ರಿ ಹೆಸರು ಮಂತ್ರಿ ಹೆಸರು ಬಂದಾಗ ನಿಜವೋ,ಸುಳ್ಳೋ ಎಂದು ಮೈ ಜಿಗಟಿಕೊಂಡವರ ಜೊತೆಗೆ ಲಾಭಿ ಮಾಡಿದವರು ಅವರ ಹಿಂಬಾಕರನ್ನು ಕರೆದು ಮೈ ಕೆರೆಸಿಕೊಂಡರು.

ಮಂತ್ರಿ ಸ್ಥಾನ ಪಡೆಯಲು ಮಂದಾದ ಗಾಯಿತ್ರಿ ಶಾಂತೇಗೌಡರನ್ನು ಮುಖ್ಯಮಂತ್ರಿ ಕರೆಯಲಿಲ್ಲ .ಇದಕ್ಕೆ ಸಿದ್ದರಾಮಯ್ಯ ಕಾರಣ ಎನ್ನಲಾಗುತ್ತಿದೆ.ಅತ್ತೂ ಕರೆದರು ಪ್ರಯೋಜನವಾಗಲಿಲ್ಲ. ಗಾಯಿತ್ರಿ ಶಾಂತೇಗೌಡರ ಹೆಸರನ್ನು ಯಾರೂ ಶಿಫಾರಸ್ಸು ಮಾಡಿರಲಿಲ್ಲ ಹೆಸರು ಹೇಗೆ ಬಂತು ಎಂದು ಹುಡುಕಿದಾಗ ಇದರಲ್ಲಿ ವ್ಯವಹಾರದ ಘಾಟು ಹೊಡೆಯ ತೊಡಗಿತ್ತು. ಹೈಕಮಾಂಡ್ ಉಸ್ತುವಾರಿ ಸುರ್ಜೇ ವಾಲ್ ಹೆಸರು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿತು.ನಾಲ್ಕು ದಿನ ಪ್ರಯತ್ನ ನಡೆಯಿತು ಫಲಿತಾಂಶ ಮಾತ್ರ ಶೂನ್ಯ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾರು ಮಂತ್ರಿಯಾಗುವುದಿಲ್ಲ ಎಂಬ ನಿರಾಸೆ ಮೂಡಿದೆ.

ಚಿಕ್ಕಮಗಳೂರು ಜಿಲ್ಲೆ ಯಲ್ಲಿ ಪ್ರಭಾವಿಗಳ ಕೊರತೆ ಇದೆ.ಬಿ.ಎಲ್.ಶಂಕರ್ ಭರವಸೆ ಮೂಡಿಸಿದ್ದರು ಆದರೆ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಏನು ಆಗಿಲ್ಲ ಆದೇ ಚಿತ್ರಕಲಾ ಪರಿಷತ್ ನಲ್ಲಿ ಕಲ್ಲು ಏಣಿಸುವುದರ ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಲು ಪಟ್ಟಿ ಹಿಡಿದುಕೊಂಡು ಬಲು ಭಾಷಣ ಕುಟ್ಟಿ ಹೋಗುತ್ತಿದ್ದಾರೆ ಎಂದು ಜನರ ಮಾಡಿಕೊಳ್ಳುತ್ತಿದ್ದ ಅರೆ. ಜಾರ್ಜ್ ಹೆಲಿಕಾಪ್ಟರ್ ಲ್ಲಿ ಬಂದು ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವುದಕ್ಕಿಂತ ಕಾಫಿ ತೋಟ ಹೆಚ್ಚು ಕೊಂಡು ಕೊಳ್ಳುತ್ತಿದ್ದಾರೆ.ಜಿಲ್ಲೆಯಲ್ಲಿ ಸಮಸ್ಯೆಗಳನ್ನು ಕೇಳುವವರ ಧಿಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನೊಂದು ಕೊಂಡು ಕಾಂಗ್ರೆಸ್ ಗಿಡ ತೆಗೆಯಲು “ರೌಡಂಪ್” ಔಷದಿ ಸ್ಟಾಕ್ ಮಾಡುತ್ತಿದ್ದಾರೆ.

He did not become a minister in the district he did not leave any trouble.

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ ಸಮೇತ ಪರಾರಿಯಾಗಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಬುಕ್ಕಾಂಬೂದಿ ಗ್ರಾಮದ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲೆಯ ಭೀಕರ ಬರಗಾರದ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಚಿಕ್ಕಮಗಳೂರು ತಾಲ್ಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ...

Related Articles

ಎರಡು ತಿಂಗಳ ಸುದೀರ್ಘ ವಿರಾಮದ ಬಳಿಕ ಜಿಲ್ಲೆಯಾದ್ಯಂತ ಭರ್ಜರಿ ಮಳೆ

ಚಿಕ್ಕಮಗಳೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನರಿಗೆ...

ನೀಲಕುರಿಂಜಿ ಅಲ್ಲ, ಚಂದ್ರದ್ರೋಣದಲ್ಲಿ ಅರಳಿದ್ದು ಗುರಿಂಜೆ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ–ಬಾಬಾಬುಡನ್‌ಗಿರಿ ಪ್ರದೇಶದಲ್ಲಿ ನೇರಳೆ ಬಣ್ಣದ ಹೂವುಗಳು ಅರಳಿ...

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ

ಚಿಕ್ಕಮಗಳೂರು: ವಿದ್ಯುತ್ ಪೂರೈಕೆಯಲ್ಲಿ ಇತ್ತೀಚೆಗೆ ಉಂಟಾದ ತಾತ್ಕಾಲಿಕ ವ್ಯತ್ಯಯವನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಿಲ್ಲ. ಮುಂದಿನ...

ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು

ಚಿಕ್ಕಮಗಳೂರು: ಬರಗಾಲದ ಸಂದರ್ಭದಲ್ಲಿ ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು. ನಿಯಮಾವಳಿ...