ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಗಳವಾರ ಸಖರಾಯಪಟ್ಟಣ ನಾಡಕಚೇರಿ ಎದು ರು ಚಿಕ್ಕಮಗಳೂರು ಬಿಜೆಪಿ ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ಹಮ್ಮಿಕೊಂಡಿದ್ಧ ಧರಣಿಯಲ್ಲಿ ವೃದ್ದ ರು, ಕಾರ್ಯಕರ್ತರು ಒಟ್ಟಾಗಿ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸಖರಾಯಪಟ್ಟಣದ ರಾಷ್ಟ್ರೀಯ ಹೆದ್ದಾರಿಯಿಂದ ನಾಡಕಚೇರಿವರೆಗೆ ನೂರಾರು ಸಂಖ್ಯೆಯಲ್ಲಿ ಹಿರಿ ಯ ವೃದ್ದರು, ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಬಡವರ ವೃದ್ದಾಪ್ಯ, ವಿಧವಾ ವೇತನವನ್ನು ಕಸಿದುಕೊಂ ಡಿರುವ ಭ್ರಷ್ಟ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ಕಾಲ್ನಾಡಿಗೆ ಜಾಥಾದಲ್ಲಿ ದಾರಿಯುದ್ದಕ್ಕೂ ಧಿಕ್ಕಾರ ಕೂಗಿ ನಾಡಕಚೇರಿದತ್ತ ಸಮಾವೇಶಗೊಂಡರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಬಡಜನರಿಗೆ ಮೀಸ ಲಿಟ್ಟ ಪಿಂಚಣಿ ಹಣವನ್ನು ಕೂಡಲೇ ರಾಜ್ಯಸರ್ಕಾರ ಬಿಡುಗಡೆಗೊಳಿಸುವಲ್ಲಿ ವಿಳಂಭ ನೀತಿ ಅನುಸರಿಸಿದರೆ, ನಾಡಕಚೇರಿಗೆ ಸೀಮಿತವಾದ ಪ್ರತಿಭಟನೆ ಹಂತ ಹಂತವಾಗಿ ವಿಧಾನಸೌಧ ಸೇರಿದಂತೆ ಮುಖ್ಯಮಂತ್ರಿಗಳ ಮನೆ ಮುತ್ತಿಗೆವರೆಗೂ ತಲುಪಲಿದೆ ಎಂದು ಎಚ್ಚರಿಸಿದರು.
ಪಿಂಚಣಿ ಸೌಲಭ್ಯಕ್ಕಾಗಿ ಫಲಾನುಭವಿಗಳಿಗೆ ರಾಜ್ಯಸರ್ಕಾರ ಬದುಕಿವಾಗಲೇ ಮರಣ ದೃಢೀಕರಣ ಪತ್ರ ನೀಡುವಂತೆ ವಿಚಿತ್ರವಾದ ಸುತ್ತೋಲೆ ಹೊರಡಿಸಿದೆ. ಈ ಆದೇಶ ಮಾಡಿದವರಿಗೆ ಬುದ್ದಿಭ್ರಮಣೆ ಅಥವಾ ಬಡವರಿಗೆ ತೊಂದರೆ ಕೊಡುವುದಕ್ಕಾಗಿ ಆ ಸ್ಥಾನದಲ್ಲಿ ಅಲಂಕರಿಸುವಂತೆ ಕಾಣುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಿಗೆ ಕಾಂಗ್ರೆಸ್ ಸರ್ಕಾರ ತಿಂಗಳಿಗೆ ಸರಿಯಾಗಿ ವೇತನ ಪಾವತಿ ಸುತ್ತಿದೆ. ಅದೇ ವಿಧವಾ, ವೃದ್ದಾಪ್ಯ, ವಿಕಲಚೇತನ ಪೈಕಿ ರಾಜ್ಯದಲ್ಲಿ ಸುಮಾರು ೧೯ ಲಕ್ಷ, ಜಿಲ್ಲೆಯಲ್ಲಿ ೬೭ ಸಾವಿರ ಹಾಗೂ ಸಖರಾಯಪಟ್ಟಣ ಹೋಬಳಿಯೊಂದರಲ್ಲೇ ೫ ಸಾವಿರ ಫಲಾನುಭವಿಗಳಿಗೆ ತಿಂಗಳಿಗೊಮ್ಮೆ ಪಿಂಚಣಿ ನೀಡದೇ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.
ಬಿಪಿಎಲ್ ಕಾರ್ಡ್‌ಗೆ ಕನಿಷ್ಟ ೧.೨೦ ಲಕ್ಷ ಆಧಾಯ ಮಿತಿಯಿದೆ. ಅದೇ ವೃದ್ದಾಪ್ಯ, ವಿಕಲಚೇತನ, ವಿಧವೆ ವೇತನಕ್ಕೆ ೩೭ ಸಾವಿರ ಮಾಡಿರುವುದು ನ್ಯಾಯಸಮಂಜಸವಲ್ಲ. ಇಂದಿನ ಕೂಲಿಕಾರ್ಮಿಕರಿಗೆ ಪ್ರತಿದಿನ ಕನಿ ಷ್ಟ ೩೮೨ ರೂ. ವೇತನವಿದಂತೆ ನೂರುದಿನ ಕೆಲಸ ಮಾಡಿದರೂ ೩೮ ಸಾವಿರ ದುಡಿಮೆಯಿದ್ದು ಆ ರೀತಿಯ ಲ್ಲೂ ರಾಜ್ಯಸರ್ಕಾರ ಲೆಕ್ಕಹಾಕುತ್ತಿದೆ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಬಡವರ ಹಣವನ್ನು ದೋಚಿಕೊಂಡು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚಿನ ಉಳಿಗಾಲವಿಲ್ಲ. ಗ್ಯಾರಂ ಟಿ ಯೋಜನೆಗಳಿಗೂ ವೃದ್ದರು, ವಿಧವೆ, ಅಂಗವಿಕಲರ ಹಣ ಬಳಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿದರು. ಇದೇ ವೇಳೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂದು ತಹಶೀಲ್ದಾರ್ ಪೂರ್ಣಿಮಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯ ದರ್ಶಿ ಪ್ರಕಾಶ್, ರಾಜೀವ್, ಉ ಪಾಧ್ಯಕ್ಷ ಪಿಳ್ಳೇನಹಳ್ಳಿ ರಮೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರ ವೀಂದ್ರ ಬೆಳವಾಡಿ, ಮುಖಂಡರುಗಳಾದ ನಂದೀಶ್ ಮದಕರಿ, ಚಂದ್ರುಹುಲಿಕೆರೆ, ಕೊಲ್ಲಾಬೋವಿ, ಅರುಣ ಜಯಪ್ಪ, ಶಿವಮೂರ್ತಿ, ಉಮೇಶ್, ನಾಗೇಗೌಡ, ಲೋಕೇಶ್ ಮುಂತಾದವರಿದ್ದರು.
BJP protests against delay in old age disability pensions
Leave a comment