Home namma chikmagalur chikamagalur ಬೀರೂರಿನ ಫೈನಾನ್ಸ್ ಕಂಪನಿಗೆ ₹9.91 ಲಕ್ಷ ವಂಚನೆ
chikamagalurHomeLatest Newsnamma chikmagalur

ಬೀರೂರಿನ ಫೈನಾನ್ಸ್ ಕಂಪನಿಗೆ ₹9.91 ಲಕ್ಷ ವಂಚನೆ

Share
Share

ಬೀರೂರು: ಬೇರೊಬ್ಬ ವ್ಯಕ್ತಿಯಂತೆ ನಟಿಸಿ ಫೈನಾನ್ಸ್‌ನಲ್ಲಿ ಗಿರವಿ ಇಟ್ಟಿರುವ ಚಿನ್ನ ಬಿಡಿಸಿಕೊಡುವುದಾಗಿ ನಂಬಿಸಿ ನವರತ್ನ ಗೋಲ್ಡ್ ಕಂಪನಿಗೆ ₹9.91 ಲಕ್ಷ ವಂಚಿಸಿರುವ ಪ್ರಕರಣ ಬೀರೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಶಿವಮೊಗ್ಗದ ನವರತ್ನ ಗೋಲ್ಡ್ ಕಂಪನಿ ಮಾಲೀಕರಿಗೆ ಬೀರೂರಿನಿಂದ ರಾಘವೇಂದ್ರ ಎಂಬಾತ ಕರೆ ಮಾಡಿ, 101 ಗ್ರಾಂ ಚಿನ್ನವನ್ನು IIFL ಫೈನಾನ್ಸ್‌ನಲ್ಲಿ ₹9.91 ಲಕ್ಷಕ್ಕೆ ಗಿರವಿ ಇಟ್ಟಿದ್ದು, ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಚಿನ್ನ ಬಿಡಿಸಿಕೊಂಡು, ಉಳಿದ ಹಣವನ್ನು ತನಗೆ ನೀಡುವಂತೆ ಮನವಿ ಮಾಡಿದ್ದ ಎನ್ನಲಾಗಿದೆ.

ಆತನ ಮಾತನ್ನು ನಂಬಿದ ಕಂಪನಿ ಮಾಲೀಕರು ತಮ್ಮ ಸಿಬ್ಬಂದಿ ಟಿ.ಆರ್. ರಂಗನಾಥ ಮತ್ತು ಲೋಹಿತ್ ಅವರನ್ನು ಬೀರೂರಿಗೆ ಕಳುಹಿಸಿದ್ದಾರೆ. ಅಲ್ಲಿ ರಾಘವೇಂದ್ರ, ತಾನು ಕಾರ್ತಿಕ್ ಎಂದು ಪರಿಚಯಿಸಿಕೊಂಡು, ತನ್ನ ಹೆಸರಿನಲ್ಲೇ ಚಿನ್ನ ಗಿರವಿ ಇದೆ ಎಂದು ನಂಬಿಸಿದ್ದಾನೆ.

ನಂತರ ಕಾರ್ತಿಕ್ ನೀಡಿದ ಕೆನರಾ ಬ್ಯಾಂಕ್ ಖಾತೆಗೆ ಸಿಬ್ಬಂದಿ ₹9.91 ಲಕ್ಷ ಹಣವನ್ನು ಚಲನ್ ಮೂಲಕ ಜಮೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕಾರ್ತಿಕ್ ಸಿಬ್ಬಂದಿಯನ್ನು ಟೀ ಕುಡಿಯಲು ಕರೆದುಕೊಂಡು ಬ್ಯಾಂಕ್‌ನಿಂದ ಹೊರಗೆ ತೆರಳಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ₹5 ಲಕ್ಷವನ್ನು ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಉಳಿದ ₹4.91 ಲಕ್ಷವನ್ನು ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ತಡೆಹಿಡಿಯಲಾಗಿದೆ.

ನಂತರ IIFL ಫೈನಾನ್ಸ್‌ನಲ್ಲಿ ವಿಚಾರಿಸಿದಾಗ ಕಾರ್ತಿಕ್ ಹೆಸರಿನಲ್ಲಿ ಯಾವುದೇ ಚಿನ್ನ ಗಿರವಿ ಇರಲಿಲ್ಲ. ಬದಲಿಗೆ ಅನುಷಾ ಎಂಬವರ ಹೆಸರಿನಲ್ಲಿ ಚಿನ್ನ ಗಿರವಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ರಾಘವೇಂದ್ರ ಮತ್ತು ಕಾರ್ತಿಕ್ ಸೇರಿಕೊಂಡು ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಕಂಪನಿ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 118/2026 ದಾಖಲಾಗಿದೆ. BNS ಕಲಂ 318(2), 318(4), 319(2), 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Finance company in Birur cheated of ₹9.91 lakh

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ ಸಮೇತ ಪರಾರಿಯಾಗಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಬುಕ್ಕಾಂಬೂದಿ ಗ್ರಾಮದ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲೆಯ ಭೀಕರ ಬರಗಾರದ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಚಿಕ್ಕಮಗಳೂರು ತಾಲ್ಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ...

Related Articles

ಎರಡು ತಿಂಗಳ ಸುದೀರ್ಘ ವಿರಾಮದ ಬಳಿಕ ಜಿಲ್ಲೆಯಾದ್ಯಂತ ಭರ್ಜರಿ ಮಳೆ

ಚಿಕ್ಕಮಗಳೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನರಿಗೆ...

ನೀಲಕುರಿಂಜಿ ಅಲ್ಲ, ಚಂದ್ರದ್ರೋಣದಲ್ಲಿ ಅರಳಿದ್ದು ಗುರಿಂಜೆ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ–ಬಾಬಾಬುಡನ್‌ಗಿರಿ ಪ್ರದೇಶದಲ್ಲಿ ನೇರಳೆ ಬಣ್ಣದ ಹೂವುಗಳು ಅರಳಿ...

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ

ಚಿಕ್ಕಮಗಳೂರು: ವಿದ್ಯುತ್ ಪೂರೈಕೆಯಲ್ಲಿ ಇತ್ತೀಚೆಗೆ ಉಂಟಾದ ತಾತ್ಕಾಲಿಕ ವ್ಯತ್ಯಯವನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಿಲ್ಲ. ಮುಂದಿನ...

ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು

ಚಿಕ್ಕಮಗಳೂರು: ಬರಗಾಲದ ಸಂದರ್ಭದಲ್ಲಿ ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು. ನಿಯಮಾವಳಿ...