Home namma chikmagalur chikamagalur ಅಜ್ಜಂಪುರದ ಇಲಿಗೆ ‘ಹಣದ ಮೋಹ’
chikamagalurHomeLatest Newsnamma chikmagalur

ಅಜ್ಜಂಪುರದ ಇಲಿಗೆ ‘ಹಣದ ಮೋಹ’

Share
Share

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ ನಿರ್ಮಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದ ‘ಜಮ್-ಜಮ್ ಚಿಕನ್ ಅಂಗಡಿ’ಯಲ್ಲಿ ಈ ಸ್ವಾರಸ್ಯಕರ ಘಟನೆ ನಡೆದಿದೆ. ಅಂಗಡಿಯ ಮಾಲೀಕರಾದ ಸಿದ್ದಿಕ್ ಅವರು ಪ್ರತಿದಿನ ವ್ಯಾಪಾರ ಮುಗಿಸಿ ಗಲ್ಲಾಪೆಟ್ಟಿಗೆಯಲ್ಲಿ ಇಡುತ್ತಿದ್ದ 10, 20 ಮತ್ತು 50 ರೂಪಾಯಿ ನೋಟುಗಳು ಆಗಾಗ್ಗೆ ಮಂಗಮಾಯವಾಗುತ್ತಿದ್ದವು.

ಸಣ್ಣಪುಟ್ಟ ಮೌಲ್ಯದ ನೋಟುಗಳಾಗಿದ್ದರಿಂದ ಆರಂಭದಲ್ಲಿ ಅವರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ದಿನಗಳು ಕಳೆದಂತೆ ನೋಟುಗಳು ನಾಪತ್ತೆಯಾಗುವುದು ಹೆಚ್ಚಾದಾಗ, ಯಾರೋ ಕಳ್ಳರು ಅಂಗಡಿಗೆ ಕನ್ನ ಹಾಕುತ್ತಿದ್ದಾರೆ ಎಂಬ ಅನುಮಾನ ಮಾಲೀಕರಿಗೆ ಬಲವಾಗಿದೆ.

ಅನುಮಾನಗೊಂಡ ಮಾಲೀಕ ಸಿದ್ದಿಕ್ ಅವರು ಅಂಗಡಿಯ ಮೂಲೆ ಮೂಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಅಸಲಿ ಕಳ್ಳನ ಚೇಷ್ಟೆ ಬಯಲಾಗಿದೆ. ಅಂಗಡಿಯ ಮೂಲೆಯಲ್ಲಿದ್ದ ಪ್ಲಾಸ್ಟಿಕ್ ಕವರ್ ಒಂದನ್ನು ತೆರೆದು ಪರಿಶೀಲಿಸಿದಾಗ ಅಲ್ಲಿ ಇಲಿಯೊಂದು ರಾಜಗಾಂಭೀರ್ಯದಲ್ಲಿ ಬೆಚ್ಚಗೆ ಕುಳಿತಿರುವುದು ಕಂಡುಬಂದಿದೆ.

ಅಷ್ಟೇ ಅಲ್ಲ, ಆ ಇಲಿ ತಾನು ವಾಸಿಸಲು ಬರಿ ಹುಲ್ಲು-ಕಡ್ಡಿಗಳನ್ನು ಬಳಸದೆ, ಗಲ್ಲಾಪೆಟ್ಟಿಗೆಯಿಂದ ಕದ್ದು ತಂದ ನೋಟುಗಳನ್ನೇ ಹಾಸಿಗೆ ಹಾಗೂ ಹೊದಿಕೆಯನ್ನಾಗಿ ಮಾಡಿಕೊಂಡು ರಾಯಲ್ ಆಗಿ ಗೂಡು ಕಟ್ಟಿರುವುದು ಪತ್ತೆಯಾಗಿದೆ.

ಇಲಿಯ ಈ ವಿಶೇಷವಾದ ‘ಹಣದ ಮೋಹ’ ಮತ್ತು ಶಿಸ್ತಿನ ಕಳ್ಳತನವನ್ನು ಕಂಡು ಮಾಲೀಕ ಸಿದ್ದಿಕ್ ಅಚ್ಚರಿಯಿಂದ ದಂಗಾಗಿದ್ದಾರೆ. ಹಣವನ್ನು ಗಲ್ಲಾಪೆಟ್ಟಿಗೆಯಲ್ಲಿ ಭದ್ರವಾಗಿಟ್ಟರೂ ಇಲಿಯಿಟ್ಟ ಕನ್ನಕ್ಕೆ ಸಿದ್ದಿಕ್ ಅವರ ಹಣ ಈಗ ನೋಟಿನ ಗೂಡಾಗಿ ಪರಿವರ್ತನೆಯಾಗಿದ್ದು, ಈ ‘ಶ್ರೀಮಂತ ಇಲಿ’ಯ ಕಥೆ ಹಾಗೂ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Ajjampura’s rat ‘loves money’

Share

Leave a comment

Leave a Reply

Your email address will not be published. Required fields are marked *

Don't Miss

ಅನಧಿಕೃತ ಜೀಪ್‌ಗಳ ಹಾವಳಿ ತಪ್ಪಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು:  ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನಧಿಕೃತ ಮತ್ತು ಅಕ್ರಮ ಜೀಪ್ ಗಳ ಹಾವಳಿ ತಡೆಗಟ್ಟಿ ಪ್ರವಾಸಿಗರ ಸುರಕ್ಷತೆ ಕಾಪಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯ ಸ್ಥಳೀಯ ನಾಗರೀ ಕರು ಸೋಮವಾರ ಅಪರ ಜಿಲ್ಲಾಧಿಕಾರಿ...

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಾಫಿಯಾ ದಂದೆಗಳು ?

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಅಗ್ರಸ್ಥಾನವಿದೆ.ನಿಜವಾದ ಪ್ರವಾಸಿಗರು ಜಿಲ್ಲೆಯ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಸ್ಥಳಗಳು, ಝರಿಗಳ ಜೊತೆಗೆ ಬೋರ್ಗರಿಯುವ ನದಿಗಳು, ಉಪ ನದಿಗಳು,ಅರಣ್ಯದ ಜೊತೆಗೆ ಕಾಡು ಪ್ರಾಣಿಗಳು...

Related Articles

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ...

ಅಂಚೆ ನಾಗಭೂಷಣ್ ಗೆ’ಪತ್ರಿಕಾ ರತ್ನ’ ಪ್ರಶಸ್ತಿ ಪ್ರಧಾನ

ತರೀಕೆರೆ : ಪಟ್ಟಣದ ಹಿರಿಯ ಪತ್ರಕರ್ತರು, ಜಿಲ್ಲಾ ಕನ್ನಡ ವಾರಪತ್ರಿಕೆ ಅಂಚೆವಾರ್ತೆ ಸಂಪಾದಕರು ಆದ ಅಂಚೆ...

ಇಂದು ಆರ್‌ಟಿಒ ರಾಕೇಶ್ ಕುಮಾರ್ ವಿರುದ್ಧ ವಿಚಾರಣೆ

ಚಿಕ್ಕಮಗಳೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮಗಳ ಆರೋಪ ಕೇಳಿಬಂದಿರುವ ಬೆನ್ನಲ್ಲೇ...

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು...