Home namma chikmagalur chikamagalur ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ
chikamagalurHomeLatest Newsnamma chikmagalur

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

Share
Share

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ ದರ್ಗಾದ ಇತಿಹಾಸ ಹಾಗೂ ಸಂಪ್ರದಾಯಗಳ ಬಗ್ಗೆ ಕೆಲವು ವ್ಯಕ್ತಿಗಳು ಹರಡುತ್ತಿರುವ ತಪ್ಪು ಕಲ್ಪನೆಗಳು ಮತ್ತು ಆಕ್ಷೇಪಾರ್ಹ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ಸಯ್ಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.

ದರ್ಗಾದ ಇತಿಹಾಸವು ಕೇವಲ ಊಹಾಪೋಹಗಳ ಆಧಾರದ ಮೇಲೆ ನಿಂತಿಲ್ಲ, ಬದಲಿಗೆ ಹಳೆಯ ಅಧಿಕೃತ ದಾಖಲೆಗಳು, ಕಂದಾಯ ದಾಖಲೆಗಳು ಮತ್ತು ಸರ್ಕಾರದ ಆದೇಶಗಳ ಭದ್ರ ಬುನಾದಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರು ಸರ್ಕಾರದ 1890-91ರ ಅಪೀಲು ಸಂಖ್ಯೆ 1059 ಮತ್ತು ಇನಾಂ ಸೆಟ್ಲಮೆಂಟ್ ಪ್ರಕ್ರಿಯೆಗಳ ಪ್ರಕಾರ, ಈ ಪ್ರದೇಶವನ್ನು “ದತ್ತಾತ್ರೇಯ ಪೀಠ ದರ್ಗಾ” ಎಂಬ ಹೆಸರಿನ ಕಂದಾಯ ಗ್ರಾಮವಾಗಿ ಗುರುತಿಸಲಾಗಿತ್ತು.

ಅಲ್ಲದೆ, ಮೈಸೂರು ಸರ್ಕಾರದ ಮುಜರಾಯಿ ಕೈಪಿಡಿಯ (Muzrai Manual) 11ನೇ ಅಧ್ಯಾಯದಲ್ಲಿಯೂ ಈ ಕ್ಷೇತ್ರವನ್ನು ಮೊಹಮ್ಮದನ್ ಧಾರ್ಮಿಕ ಸಂಸ್ಥೆ (Mohammadan Institution) ಎಂದು ಉಲ್ಲೇಖಿಸಿರುವುದನ್ನು ಅವರು ನೆನಪಿಸಿದ್ದಾರೆ. ದರ್ಗಾದಲ್ಲಿರುವ ಪವಿತ್ರ ಸಮಾಧಿಗಳಿಗೆ ಹಸಿರು ಚಾದರ್ ಅರ್ಪಿಸುವುದು ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸುವುದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸೂಫಿ ಪರಂಪರೆಯ ಭಕ್ತಿಯ ಸಂಕೇತವೇ ಹೊರತು ಯಾವುದೇ ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಭಾರತಕ್ಕೆ ಕಾಫಿ ಬೀಜಗಳನ್ನು ಪರಿಚಯಿಸಿ ಕಾಫಿನಾಡಿನ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಬಾಬಾ ಬುಡನ್ ಅವರ ಪರಂಪರೆಯು ಭಕ್ತಿ, ಸತ್ಯ, ನ್ಯಾಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಒಳಗೊಂಡಿದೆ. ರಘು ಸಕಲೇಶಪುರ ಸೇರಿದಂತೆ ಕೆಲವರು ಹರಡುತ್ತಿರುವ ತಪ್ಪು ಮಾಹಿತಿಗಳು ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಜಿಲ್ಲಾಡಳಿತವು ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಯ್ಯದ್ ಫಕ್ರುದ್ದೀನ್ ಶಾ ಖಾದ್ರಿ ಆಗ್ರಹಿಸಿದ್ದಾರೆ.

ಯಾವುದೇ ಒತ್ತಡಗಳಿಗೆ ಮಣಿಯದೆ, ಹಳೆಯ ದಾಖಲೆಗಳು ಮತ್ತು ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿ ಭಕ್ತರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕು ಎಂದು ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Offering a green chadar is not a newly created ritual.

Share

Leave a comment

Leave a Reply

Your email address will not be published. Required fields are marked *

Don't Miss

ಗ್ರೌಂಡ್ ಸರ್ವೇ ಅಗತ್ಯ-’ಕಾರ್ಬನ್ ಕ್ರೆಡಿಟ್ ನಿಗಮ’ ಸ್ಥಾಪನೆಗೆ ಪ್ರಸ್ತಾಪ

ಚಿಕ್ಕಮಗಳೂರು:  ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ  ಸಂಬಂಧಿಸಿದಂತೆ ಉಪಗ್ರಹ ಆಧಾರಿತ ಚಿತ್ರಣವನ್ನು ಮಾತ್ರ ನೆಚ್ಚಿಕೊಂಡು ಅಧಿಸೂಚನೆ ಹೊರಡಿಸುತ್ತಿರುವುದು ಮಲೆನಾಡಿನ ರೈತರು ಹಾಗೂ ಸ್ಥಳೀಯ ಜನರಲ್ಲಿ ತೀವ್ರ ಆತಂಕ...

ಮಾಂಸ ಮಾರಾಟ- ಮೂವರ ಬಂಧನ

ಎನ್.ಆ‌ರ್. ಪುರ: ಕಾಡಿನಲ್ಲಿ ಮೇಯುತ್ತಿದ್ದ ಜಾನುವಾರನ್ನು ಹಿಡಿದು ತಂದು ಎಸ್ಟೇಟ್‌ ನ ಕೂಲಿಲೈನ್ ಬಳಿ ಬರ್ಬರವಾಗಿ ಕಡಿದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು...

Related Articles

ಸಹಕಾರಿ ರಂಗದಲ್ಲಿ ನಿಷ್ಟೆ, ಪ್ರಾಮಾಣಿಕತೆ ಮಹತ್ವ ನೀಡಿ

ಚಿಕ್ಕಮಗಳೂರು:  ಸಹಕಾರಿ ರಂಗದಲ್ಲಿ ನಿಷ್ಟೆ, ಪ್ರಾಮಾಣಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು. ಒಳ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ಎಂದಿಗೂ...

ಬರಗಾಲ ಪರಿಹಾರಕ್ಕೆ ಆಗ್ರಹಿಸಿ ಸೆ.28ರಂದು ರೈತ ಸಂಘದ ಪ್ರತಿಭಟನಾ ಮೆರವಣಿಗೆ

ಚಿಕ್ಕಮಗಳೂರು: ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ...

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ,...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ...