ಚಿಕ್ಕಮಗಳೂರು: ಒಬ್ಬ ಮುಖ್ಯಮಂತ್ರಿ ಜನರಿಂದ ದೂರ ಉಳಿಯುತ್ತೇನೆ ಎಂದರೆ ಏನರ್ಥ? ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಜನರ ಭಯವೇ? ಮತ್ತೇಕೆ ಬಿಡದಿಯ ರೈತರಿಂದ ಅವರು ದೂರವಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು. ಅವರು ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಡನೆ ಮಾತನಾಡುತ್ತಿದ್ದರು.
ರೈತ ಹೋರಾಟಕ್ಕೆ ನಾವು ರಾಜಕೀಯ ಬೆಂಬಲ ನೀಡುತ್ತಿದ್ದೇವೆ. ಇದು ರಾಜಕೀಯ ಹೋರಾಟವಾಗಿ ಪರಿವರ್ತನೆಗೊಂಡರೆ, ಆಗ ಮೂಲ ಹೋರಾಟಗಾರರು ಮತ್ತು ಮೂಲ ಸಮಸ್ಯೆ ಬದಿಗೆ ಸರಿಯುವಂತಾಗಬಹುದು. ಆ ರೀತಿ ಆಗಬಾರದು ಎನ್ನುವ ಕಾರಣದಿಂದ, ರೈತರ ಹೋರಾಟಕ್ಕೆ ರಾಜಕೀಯ ಬೆಂಬಲವನ್ನು ನೀಡುತ್ತಿದ್ದೇವೆ.
ನಾವು ಯಾರೂ ಅಭಿವೃದ್ಧಿ ವಿರೋಧಿಗಳಲ್ಲ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರು ಒಪ್ಪಿಗೆ ನೀಡಿದರೆ ಬಿಡದಿ ಟೌನ್ಶಿಪ್ ಯೋಜನೆ ಜಾರಿಗೆ ತರಲಿ. ಅವರ ಒಪ್ಪಿಗೆ ಇಲ್ಲದೆ, ವಿರೋಧದ ನಡುವೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಟೌನ್ಶಿಪ್ ಮಾಡಲು ಹೊರಟರೆ ಅದು ಪ್ರಜಾಪ್ರಭುತ್ವ ವಿರೋಧಿ, ರೈತ ವಿರೋಧಿ ನಡೆ ಎಂದು ರವಿ ಹೇಳಿದರು.
ಬಿಜೆಪಿ, ಜೆಡಿಎಸ್ಗಳ ಜೊತೆಗೆ, ಹಲವಾರು ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿವೆ. ಕಾಂಗ್ರೆಸ್ ಪಕ್ಷದಲ್ಲೇ ಬಹಳ ಜನ ನಮಗಿದು ಯಾಕೆ ಬೇಕಿತ್ತು ಎನ್ನುತ್ತಿದ್ದಾರೆ. ನಮ್ಮ ಭಾಗದ ರೈತರು ಶಾಂತಿಯುತ ಸತ್ಯಾಗ್ರಹ ಮಾಡುತ್ತಿದ್ದಾರೆಯೇ ಹೊರತು, ನಕ್ಸಲ್ ಮಾದರಿಯಲ್ಲಿ ಬಾಂಬ್, ಎಕೆ೪೭ ಇಟ್ಟುಕೊಂಡು ಹೋರಾಟ ಮಾಡುತ್ತಿಲ್ಲ ಎಂದು ರವಿ ಹೇಳಿದರು.
ಮುಖ್ಯಮಂತ್ರಿಗಳು ಯಾಕೆ ಹೀಗೆ ವರ್ತಿಸುತ್ತಿದ್ದಾರೆ? ಮಾಡಿಯೇ ಸಿದ್ದ ಅನ್ನೋದು ಸರ್ವಾಧಿಕಾರಿ ಮನಸ್ಥಿತಿಯನ್ನ ತೋರಿಸುತ್ತೆ. ನೀವು ಸರ್ವಾಧಿಕಾರಿಯಲ್ಲ. ನೀವೊಬ್ಬ ಮುಖ್ಯಮಂತ್ರಿ. ಸರ್ವಾಧಿಕಾರಿಯಂತೆ ವರ್ತನೆ ಮಾಡೋದಕ್ಕೆ ನಮ್ಮ ಸಂವಿಧಾನ ಅವಕಾಶ ನೀಡುವುದಿಲ್ಲ. ರೈತರನ್ನ ಎದುರು ಹಾಕಿಕೊಂಡರೆ ಯಾವ ಸರ್ಕಾರ ಉಳಿಯುತ್ತದೆ? ಇದುವರೆಗೆ ರೈತರನ್ನು ವಿರೋಧಿಸಿ, ಅವರನ್ನು ಎದುರು ಹಾಕಿಕೊಂಡಂತಹ ಯಾವ ಸರ್ಕಾರವೂ ಹೆಚ್ಚು ಕಾಲ ಉಳಿದಿಲ್ಲ. ರೈತ ವಿರೋಧಿಯಾಗಿ ವರ್ತನೆ ಮಾಡಿದರೆ ಸರ್ಕಾರದ ಆಯುಸ್ಸು ಕಡಿಮೆ ಆಗುತ್ತದೆ ಎಂದರು.
Is the Chief Minister afraid to face the people in Bidadi?
Leave a comment