ಚಿಕ್ಕಮಗಳೂರು: ಜನಮುಖಿ ಮನಸ್ಸಿನ ನವಮಾಧ್ಯಮದ ಸಂವಹನಕಾರ ನಂಜೇಶ್ ಆರ್ ಬೆಣ್ಣೂರು ಈಗ ಭಾರತದ ಮಟ್ಟದಲ್ಲಿ ನವ ಮಾಧ್ಯಮದ ಬೆಳವಣಿಗೆಗೆ ಕೈ ಹಾಕಿದ್ದಾರೆ, ಮುಂದೆ ವಿಶ್ವಮಟ್ಟದಲ್ಲಿ ಅವರ ದೃಢ ಹೆಜ್ಜೆಗಳು ಪ್ರಜ್ವಲಿಸಲಿ, ಇದೇ 2026ರ ಜೂನ್ 30ಕ್ಕೆ ನಂಜೇಶ್ ಬೆಣ್ಣೂರು ಅವರು ಸಂಸ್ಥಾಪಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ಸಾಮಾಜಿಕ ತಂತ್ರಜ್ಞಾನದ ಮೊಬೈಲ್ ಅಪ್ಲಿಕೇಶನ್ ಸೆಲ್ಫಿ ಬುಕ್ (Selfybook. ai)ದೇಶದ ಜನತೆಗೆ ಲೋಕಾರ್ಪಣೆಗೊಂಡು ದೇಶದಾದ್ಯಂತ ಬಳಕೆಗೆ ಲಭ್ಯವಾಗಲಿದೆ.
ತಾನು ಹುಟ್ಟಿದ ಊರನ್ನು ತನ್ನ ಹೆಸರಿನೊಂದಿಗೆ ಅಂಟಿಸಿಕೊಂಡು ನಂಜೇಶ್ ಬೆಣ್ಣೂರು ಎಂದೇ ಚಿರಪರಿಚಿತರಾಗಿರುವ ನಂಜೇಶ್ ಬೆಣ್ಣೂರು ಅವರ ವಯಸ್ಸು ಇದೇ 2026ರ ಜೂನ್ 07ಕ್ಕೆ 36 ವಸಂತಗಳು ತುಂಬಿ 37ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ, ಇಂತಹ ತರುಣ ಉದ್ಯಮಿ ನಂಜೇಶ್ ಬೆಣ್ಣೂರು ಕುರಿತು ನ್ಯೂಸ್ ಕಿಂಗ್ ಸುದ್ದಿ ವಾಹಿನಿಯ ಒಂದು ವಿಶೇಷ ಅವಲೋಕನ….! ಜ್ಞಾನವೇ ನನ್ನ ಬಂಡವಾಳ, ಜನಸಂಪರ್ಕವೇ ನನ್ನ ಆಸ್ತಿ, ಇದು ನಂಜೇಶ್ ಬೆಣ್ಣೂರು ಅವರ ಅಂತರಾಳದ ಮಾತು. ಹೌದು, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ ಎಂಬ ಸ್ವಾಮಿ ವಿವೇಕಾನಂದರ ಮಾತು ಈ ಸಮಯದಲ್ಲಿ ನೆನಪಾಗುತ್ತಿದೆ
ಈಗಿನ ನವ ಮಾಧ್ಯಮಗಳ ತಲ್ಲಣಗಳ ಮಧ್ಯೆ ದ್ವಾಪರದಲ್ಲಿ ಶ್ರೀ ಕೃಷ್ಣ ಬ್ರಹ್ಮಾಂಡವನ್ನು ತನ್ನ ಬಾಯೊಳಗೆ ತೋರಿಸಿದ್ದನು ಎಂಬ ಕಥೆ ನೆನಪಾಗುತ್ತಿದೆ,ಆದರೆ ಈ ಕಲಿಯುಗದಲ್ಲಿ ಪ್ರಪಂಚವೇ ಸಾಮಾನ್ಯ ಜನರ ಬೆರಳ ತುದಿಯಲ್ಲಿದೆ ಎನ್ನಬಹುದು,ಬೆರಳ ತುದಿಯಿಂದ ಕಣ್ಣ ರೆಪ್ಪೆಯವರೆಗೂ ವಿದ್ಯುನ್ಮಾನ ಪುಸ್ತಕಗಳು (E Book ) ಕ್ಷಣ ಕ್ಷಣಕ್ಕೂ ಬದಲಾವಣೆಯನ್ನು ಕಂಡುಕೊಳ್ಳುತ್ತಾ ಸಾಗುತ್ತಿವೆ.
ಇದು ಸಾಮಾಜಿಕ ಮಾಧ್ಯಮಗಳ ಕಾಲ, ಅಂದರೆ ಸ್ಮಾರ್ಟ್ ಯುಗ
ಈಗ ಮನುಷ್ಯನ ಹೊಸ ಹೊಸ ಸಂದೇಶಗಳು ಕಣ್ಣು ಮಿಟುಕಿಸುವದೊರೊಳಗೆ ಬದಲಾವಣೆ ಎಂಬ ಬೃಹತ್ ಬಿರುಗಾಳಿ ಎಲ್ಲೆಡೆ ಅಪ್ಪಳಿಸುತ್ತಿದೆ, ಕೂಲಿ ಕಾರ್ಮಿಕರಿಂದ ಹಿಡಿದು ಧೀಮಂತ ಉದ್ದಿಮಿಯವರೆಗೂ ಸ್ಮಾರ್ಟ್ ಫೋನ್ ಗಳು ಈಗ ಎಳೆಯ ಮಕ್ಕಳ ಆಟಿಕೆಯಾಗಿ, ಅಡುಗೆ ಮನೆಯಲ್ಲಿರುವ ಗೃಹಿಣಿಯರಾದಿಯಾಗಿ ಈ ಟಚ್ ಸ್ಕ್ರೀನ್ ಎಂಬ ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಅಂಗೈಯೊಳಗೂ ಬೆಚ್ಚನೆಯ ಸ್ಪರ್ಶ ಪಡೆಡಿದ್ದಾವೆ, ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಜೀವನವೇ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಸಾಮಾಜಿಕ ಜಾಡ್ಯ ಅಥವಾ ಮಹಾ ಸೋಂಕಿಗೆ ಇಡೀ ಜಗತ್ತು ಒಳಗಾಗಿ ಒಂದು ಬೆರಗಿಗೆ ಒಳಗೊಂಡಿದೆ.
ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್( X) ಸ್ನಾಪ್ ಚಾಟ್ ಗಳು ಜಗತ್ತಿನ ಪ್ರಮುಖ ಸಾಮಾಜಿಕ ಜಾಲತಾಣಗಳಾಗಿವೆ.
ಸಾಮಾಜಿಕ ಜಾಲತಾಣದ ಹಿನ್ನೆಲೆ:
ಮಾರ್ಕ್ ಜೋಕರ್ ಬರ್ಗ್ (Mark Zuckerberg) ಅವರು 2004ರಲ್ಲಿ ಫೇಸ್ಬುಕ್ ಸ್ಥಾಪಿಸಿದರು. ಇನ್ಸ್ಟಾಗ್ರಾಮ್ ಅನ್ನು ಕೆವಿಯನ್ ಸಿಸ್ಟ್ರೋಮ್ (Kevin Systrom) ಮತ್ತು ಮಿಕೆ ಕ್ರಿಜ್ನರ್ (mike Krieger )2010ರಲ್ಲಿ ಆರಂಭಿಸಿದರು. ವಾಟ್ಸ್ಆಪ್ ಅನ್ನು ಜಾನ್ ಕೌಮ್( Jan Koum )ಮತ್ತು ಬ್ರೈನ್ ಅಕ್ಟೋನ್ (Brian Acton )2009ರಲ್ಲಿ ಸ್ಥಾಪಿಸಿದರು. ಟ್ವಿಟ್ಟರ್ (ಈಗಿನ X) ಅನ್ನು ಜಾಕ್ ಡಾರ್ಸ್ಯ್ (Jackg Dorsey) ಬಿಜ್ ಸ್ಟೋನ್ (Biz ಸ್ಟೋನ್) ಈವನ್ ವಿಲಿಯನ್ಸ್ ( Evan Williams )ಮತ್ತು ನೋಹ್ ಗ್ಲಾಸ್ (Noha Glass )2006ರಲ್ಲಿ ಆರಂಭಿಸಿದರು. ಸ್ನ್ಯಾಪ್ಚಾಟ್ ಅನ್ನು ಈವನ್ ಸ್ಪೀಗೆಲ್ (Evan Spiegel) ಬಬ್ಬಿ ಮುರ್ಫಿ (Bobby Murphy )ಮತ್ತು ರಿಗ್ಗಿ ಬ್ರೌನ್ (Reggie Brown) 2011ರಲ್ಲಿ ಸ್ಥಾಪಿಸಿದರು. ಪ್ರಸ್ತುತ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ಆಪ್ಗಳು [Meta Platforms] ಒಡೆತನದಲ್ಲಿದ್ದು, ಟ್ವಿಟ್ಟರ್ (X) ಅನ್ನು ಎಲೋನ್ ಮಸ್ಕ್ (Elon Musk) ಅವರು [X Corp.]ಹೊಂದಿದ್ದಾರೆ ಸ್ನ್ಯಾಪ್ಚಾಟ್ನ್ನು [Snap Inc.] ಸಹ-ಸ್ಥಾಪಕ ಇವನ್ ಸ್ಪೀಗೆ ಲ್ (Evan Spiegel )ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಲಕಾಲಕ್ಕೆ ಆದ್ಯತೆಗಳು ಅವಶ್ಯಕತೆಗಳು ಬದಲಾದಂತೆ ಜನ ಬದಲಾವಣೆ ಬಯಸುವ ಸಂದರ್ಭವಿದು, ಈಗ ಸಾಮಾಜಿಕ ಜಾಲತಾಣಗಳ ಯುಗ ಮುಗಿದು ಕೃತಕ ಬುದ್ಧಿಮತ್ತೆ ( AI) ಕಡೆ ಜಗತ್ತಿನ ಜನ ಹೊರಳುತ್ತಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಭಾರತದ್ದೆ ಆದ ಸಾಮಾಜಿಕ ಜಾಲತಾಣವನ್ನು ನಿರ್ಮಿಸಲು ಇದು ಸೂಕ್ತ ಸಮಯವಾಗಿದೆ. ಭಾರತವು ವಿಶ್ವದ ಅತಿದೊಡ್ಡ ಇಂಟರ್ನೆಟ್ ಬಳಕೆದಾರರ ಸಮುದಾಯವನ್ನು ಹೊಂದಿದ್ದು, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಪ್ರತಿಭೆಗಳನ್ನು ಉತ್ತೇಜಿಸುವ ವೇದಿಕೆಗಳ ಅಗತ್ಯತೆ ಹೆಚ್ಚುತ್ತಿದೆ. AI ತಂತ್ರಜ್ಞಾನದ ಸಹಾಯದಿಂದ ಬಳಕೆದಾರರಿಗೆ ಉತ್ತಮ ಅನುಭವ, ಪ್ರತಿಭೆ ಪ್ರದರ್ಶನ ಮತ್ತು ಆದಾಯ ಗಳಿಕೆಯ ಅವಕಾಶಗಳನ್ನು ಒದಗಿಸುವ ಭಾರತೀಯ ಸಾಮಾಜಿಕ ಜಾಲತಾಣಗಳು ಡಿಜಿಟಲ್ ಭಾರತದ ಭವಿಷ್ಯವನ್ನು ರೂಪಿಸಬಹುದು. ಈ ನಿಟ್ಟಿನಲ್ಲಿ, ಭಾರತದ AI ಆಧಾರಿತ ಸಾಮಾಜಿಕ ಜಾಲತಾಣವಾದ Selfybook ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಗಳನ್ನು ತಲುಪಿ, ಭಾರತೀಯ ನವೋದ್ಯಮದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸ ಬೇಕಾಗಿರುವುದು ಈ ಹೊತ್ತಿನ ಅನಿವಾರ್ಯವಾಗಿದೆ.
ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರ ಹೊಸ ಹೊಸ ಜಾಲತಾಣಗಳನ್ನು ನಿರ್ಮಾಣ ಮಾಡುತ್ತಿರುವುದರಲ್ಲಿ ಅತ್ಯಂತ ಹಿಂದುಳಿದಿದೆ ಎನ್ನಬಹುದು, ಇಂತಹ ಸಮಯದಲ್ಲಿ ಕೃತಕ ಬುದ್ಧಿಮತ್ತೆ ಅಂತಹ ಹೊಸ ಹೊಸ ತಾಂತ್ರಿಕತೆಯ ಕಡೆಗೆ ಹೊರಳಬೇಕಾಗಿರುವುದು ಅನಿವಾರ್ಯವಾಗಿದೆ, ಏಕೆಂದರೆ ಭಾರತದಲ್ಲಿ ಅತಿ ದೊಡ್ಡ ಇಂಟರ್ನೆಟ್ ಬಳಕೆದಾರರ ಸಮೂಹವಿದೆ, ಹೀಗಿದ್ದು ಕೂಡ ಸಾಮಾಜಿಕ ಜಾಲತಾಣವನ್ನು ಅಭಿವೃದ್ಧಿಪಡಿಸುವಲ್ಲಿ ಜಗತ್ತಿನ ಮುಂದೆ ಎದೆತಟ್ಟಿ ಹೇಳಿಕೊಳ್ಳುವಂತಹ ಸಾಧನೆಯನ್ನು ಭಾರತದಂತಹ ರಾಷ್ಟ್ರ ಮಾಡಿಲ್ಲ, ಆದರೆ ಭಾರತದ ಪ್ರತಿಭೆಗಳನ್ನು ವಿದೇಶಿಗರು ಬರಮಾಡಿಕೊಂಡು ಅವರಿಂದ ದುಡಿಸಿಕೊಂಡು ತನ್ನ ದೇಶದ ಹೆಗ್ಗಳಿಕೆಯನ್ನು ಜಗತ್ತಿಗೆ ತೋರಿಸುತ್ತಿರುವುದನ್ನು ಕಾಣಬಹುದಾಗಿದೆ.
ಇಂತಹ ಸಮಯದಲ್ಲಿ ಚಿಕ್ಕಮಗಳೂರಿನ ನಂಜೇಶ್ ಬೆಣ್ಣೂರು ಅವರು ನವಮಾಧ್ಯಮಗಳ ಜೊತೆಗೆ ಕೃತಕ ಬುದ್ಧಿಮತ್ತೆ (AI) ಕಡೆ ಚಿತ್ತಹರಿಸಿರುವುದು ಯುವ ಜನತೆಗೆ ಒಂದು ಭರವಸೆಯನ್ನು ದೊರಕಿಸಿಕೊಡುವಂತೆ ಆಗಲಿ, ಈ ಕಾರಣಕ್ಕಾಗಿ ನಂಜೇಶ್ ಬೆಣ್ಣೂರು ಅವರ ಈ ನಡೆಯನ್ನು ಸ್ವಾಗತಿಸುತ್ತಾ ಈ ಮೂಲಕ ಅವರಿಗೆ ಸದಾಭಿನಂದನೆಗಳನ್ನು ಸಲ್ಲಿಸಬೇಕಾಗಿದೆ.
ಕಾರಣ, ಕೃತಕ ಬುದ್ಧಿಮತ್ತೆ ಆಧಾರಿತ (AI) ಸೆಲ್ಫಿ ಬುಕ್ (Selfy Book ) ಮೂಲಕ ಜಾಗತಿಕ ಮಟ್ಟದಲ್ಲಿ ಚಾಪು ಮೂಡಿಸಲು ಹೊರಟಿರುವ ನಂಜೇಶ್ ಬೆಣ್ಣೂರು ಅವರಿಗೆ ನಿರೀಕ್ಷೆ ಮೀರಿದ ಯಶಸ್ಸು ದೊರೆಯಬೇಕಾಗಿದೆ.
ನಂಜೇಶ್ ಬೆಣ್ಣೂರು ರವರು ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬೆಣ್ಣೂರು ಗ್ರಾಮದವರು, ಈ ಬೆಣ್ಣೂರು ಗ್ರಾಮ ಬೇಲೂರು ತಾಲೂಕಿಗೆ ಸೇರಿದ್ದಾದರೂ ಕೂಡ ಅದು ಚಿಕ್ಕಮಗಳೂರು ತಾಲೂಕಿಗೆ ಅಂಟಿಕೊಂಡಿರುವ ಗಡಿ ಗ್ರಾಮವಾಗಿದೆ, ರಾಜ್ಯ ಲೆಕ್ಕಪತ್ರ ಇಲಾಖೆಯ ಲೆಕ್ಕಾಧಿಕಾರಿಯಾಗಿದ್ದ ಬಿ ಎನ್ ರಾಜೇಗೌಡ ಮತ್ತು ಸರೋಜಮ್ಮ ದಂಪತಿಯ ಮಗನಾಗಿ, ಚಿಕ್ಕಮಗಳೂರು ನಗರದ ಮಧ್ಯೆ ಇರುವ ಬೀಕನಹಳ್ಳಿ ಗ್ರಾಮದ ಮೊಮ್ಮಗನಾಗಿ, ಬೇಲೂರು ತಾಲೂಕಿನ ಬೆಣ್ಣೂರಿನಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡ ಈಗ ಸುಮಾರು 30 ವರ್ಷಗಳಿಂದ ನೆಲೆಗೊಂಡಿರುವುದು ಚಿಕ್ಕಮಗಳೂರಿನಲ್ಲಿ.
ನಂಜೇಶ್ ಬೆಣ್ಣೂರು ಅವರು ಕೃತಕ ಬುದ್ಧಿಮತ್ತೆ (Artificial Intelligence), ವಿಸ್ತರಿಸಬಹುದಾದ ತಂತ್ರಜ್ಞಾನ ವ್ಯವಸ್ಥೆಗಳು (Scalable Systems) ಹಾಗೂ ಡಿಜಿಟಲ್ ವೇದಿಕೆಗಳ ಅಭಿವೃದ್ಧಿ ಕ್ಷೇತ್ರಗಳಲ್ಲಿ ಗಟ್ಟಿಯಾದ ನೆಲೆಯುಳ್ಳ ಸಂಶೋಧಕ, ತಂತ್ರಜ್ಞಾನ ತಜ್ಞ, ಶಿಕ್ಷಣತಜ್ಞ ಮತ್ತು ಉದ್ಯಮಿಯಾಗಿದ್ದಾರೆ.
ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU)ದಿಂದ ಮಾಹಿತಿ ವಿಜ್ಞಾನ ಮತ್ತು ಅಭಿಯಾಂತ್ರಿಕತೆಯಲ್ಲಿ (Information Science and Engineering) ಬಿ.ಇ. ಪದವಿ ಹಾಗೂ ಕಂಪ್ಯೂಟರ್ ವಿಜ್ಞಾನ ಮತ್ತು ಅಭಿಯಾಂತ್ರಿಕತೆಯಲ್ಲಿ (Computer Science and Engineering) ಎಂ.ಟೆಕ್ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ಯಂತ್ರ ಅಧ್ಯಯನ (Machine Learning) ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳ ಕುರಿತಾಗಿ ಪಿಎಚ್ಡಿ ಸಂಶೋಧನೆ ನಡೆಸುತ್ತಿದ್ದಾರೆ.
2013ರಿಂದ 2023ರ ವರೆಗೆ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲದ ಶೈಕ್ಷಣಿಕ ಹಾಗೂ ಸಂಶೋಧನಾ ಅನುಭವವನ್ನು ಹೊಂದಿರುವ ಅವರು, IEEE, Elsevier ಮತ್ತು Springer ಸೇರಿದಂತೆ ಅಂತರರಾಷ್ಟ್ರೀಯ ಖ್ಯಾತಿಯ ವೇದಿಕೆಗಳಲ್ಲಿ 26ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಮುಖ ಪರಿಣತಿ ಕ್ಷೇತ್ರಗಳು ಕೃತಕ ಬುದ್ಧಿಮತ್ತೆ, ಸಮಾನಾಂತರ ಗಣಕಯಂತ್ರ ವ್ಯವಸ್ಥೆಗಳು (Parallel Computing), ಚಿತ್ರ ಸಂಸ್ಕರಣೆ (Image Processing) ಹಾಗೂ ವಿಸ್ತರಿಸಬಹುದಾದ ಡಿಜಿಟಲ್ ತಂತ್ರಜ್ಞಾನ ವಿನ್ಯಾಸಗಳಾಗಿವೆ.
ಅವರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮೂರು ಪೇಟೆಂಟ್ಗಳನ್ನು ಹಾಗೂ ಕೆನಡಾದಲ್ಲಿ ಒಂದು ಕಾಪಿರೈಟ್ನ್ನು ಪಡೆದಿದ್ದು, ಸಂಶೋಧನೆಯನ್ನು ಪ್ರಾಯೋಗಿಕ ನವೋದ್ಯಮವಾಗಿ ರೂಪಿಸುವಲ್ಲಿ ನಿರಂತರ ಸಾಧನೆ ಮಾಡಿದ್ದಾರೆ, ಇತ್ತೀಚಿಗೆ ಜರ್ಮನಿಯಲ್ಲಿ ವೆಬ್ಸೈಟ್ ವೊಂದನ್ನು ತೆರೆದಿದ್ದಾರೆ ಅಲ್ಲದೆ, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸಂಸ್ಥೆ (VGST) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಸಂಶೋಧನೆ ಮತ್ತು ನವೋದ್ಯಮ ಅನುದಾನಗಳನ್ನು ಪಡೆದುಕೊಂಡಿದ್ದಾರೆ.
ಸಂಶೋಧನೆಯ ಜೊತೆಗೆ, ಅವರು Iterative International Publishers ಸಂಸ್ಥೆಯ ಅಡಿಯಲ್ಲಿ ಪ್ರಕಟಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವಾರು ಯಶಸ್ವಿ ಉದ್ಯಮಗಳನ್ನು ನಿರ್ಮಿಸಿ ಬೆಳೆಸಿದ್ದಾರೆ. ಈ ವೇದಿಕೆಗಳು ಸಾವಿರಾರು ಸೃಜನಶೀಲರು ಮತ್ತು ಬಳಕೆದಾರರಿಗೆ ಸೇವೆ ಸಲ್ಲಿಸಿದ್ದು, 3,500ಕ್ಕೂ ಅಧಿಕ ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸಿದ್ದಾರೆ,ಜೊತೆಗೆ, 44000ಕ್ಕೂ ಹೆಚ್ಚು ಬರಹಗಾರರು,ಲೇಖಕ ಸದಸ್ಯರನ್ನು ಒಳಗೊಂಡು ಇವರೆಲ್ಲರಿಂದ ಪುಸ್ತಕಕ್ಕೆ ಬೇಕಾದ ಬಿಡಿ ಬಿಡಿ ಲೇಖನಗಳನ್ನು, ಇಡಿಯಾದ ಸಾಹಿತ್ಯವನ್ನು ಐಐಪಿ ಪ್ರಕಾಶನದ ಮೂಲಕ ಒಂದು ದೊಡ್ಡ ಸಮುದಾಯವನ್ನು ನಿರ್ಮಿಸಿದ್ದಾರೆ,
ಪ್ರಸ್ತುತ SelfyBook ಸಂಸ್ಥೆಯಲ್ಲಿ ಅವರು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ (AI/ML) ಅಭಿವೃದ್ಧಿ ಮಾರ್ಗಸೂಚಿ, ಬಳಕೆದಾರರ ತೊಡಗಿಸಿಕೊಳ್ಳುವಿಕೆ (Engagement) ವಿನ್ಯಾಸ, ಆದಾಯೀಕರಣ (Monetization) ವ್ಯವಸ್ಥೆಗಳು, ವಿಶ್ವಾಸಾರ್ಹತೆ ಮೌಲ್ಯಮಾಪನ (Trust-Scoring) ಮೂಲಸೌಕರ್ಯ ಹಾಗೂ ದೀರ್ಘಕಾಲೀನ ಡೀಪ್ಟೆಕ್ (DeepTech) ದೃಷ್ಟಿಕೋನದ ನೇತೃತ್ವ ವಹಿಸಿದ್ದಾರೆ.
ಸಂಶೋಧನಾ ಸಾಮರ್ಥ್ಯ, ಉತ್ಪನ್ನ ಅಭಿವೃದ್ಧಿಯ ದೃಷ್ಟಿಕೋನ, ಸೃಜನಶೀಲ ಆರ್ಥಿಕತೆಯ (Creator Economy) ಆಳವಾದ ಅರಿವು ಹಾಗೂ ವಿಸ್ತರಿಸಬಹುದಾದ ಡಿಜಿಟಲ್ ವೇದಿಕೆಗಳ ನಿರ್ಮಾಣ ತಂತ್ರಗಳನ್ನು ಸಮನ್ವಯಗೊಳಿಸಿರುವ ಅವರು, SelfyBook ಅನ್ನು ಬಲವಾದ ತಾಂತ್ರಿಕ ಅಡಿಪಾಯದ ಮೇಲೆ ನಿರ್ಮಿತವಾದ ಡೀಪ್ಟೆಕ್ ಸ್ಟಾರ್ಟ್ಅಪ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ವರೆಗೆ ಬೇಲೂರಿನಲ್ಲಿ ವಿದ್ಯಾಭ್ಯಾಸ ಮಾಡಿ,ನಂತರ ಪದವಿ ಪೂರ್ವ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ ಮುಗಿಸಿ ತದನಂತರ ಬಿ ಇ ಮತ್ತು ಎಮ್ ಟೆಕ್ ಪದವಿಯನ್ನು ಚಿಕ್ಕಮಗಳೂರಿನ ಆದಿಚುಂಚನಗಿರಿ ಮಹಾವಿದ್ಯಾಲಯದಲ್ಲಿ ಪಡೆದು, ತಾಂತ್ರಿಕ ಪದವಿ ಪಡೆದ ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿಯೇ ಹತ್ತು ವರ್ಷಗಳ ಕಾಲ ಇನ್ಫಾರ್ಮಶನ್ ಸೈನ್ಸ್ ವಿಭಾಗದಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈಗ ಕೃತಕ ಬುದ್ಧಿಮತ್ತೆ ಕುರಿತು (AI ) ಸಂಶೋಧಕ ವಿದ್ಯಾರ್ಥಿಯಾಗಿ ಪಿಎಚ್ಡಿ ಮಾಡುತ್ತಿದ್ದಾರೆ.
ಈಗಾಗಲೇ ಐ ಐ ಪಿ ಹಾಗೂ ಸೆಲ್ಫಿ book ಮೂಲಕ ಸುಮಾರು 80ಕ್ಕೂ ಹೆಚ್ಚು ಯುವ ಜನತೆಗೆ ಉದ್ಯೋಗ ನೀಡಿರುವ ನಂಜೇಶ್ ಬೆಣ್ಣೂರು ಕನಸುಗಳೆಲ್ಲ ಟಿಸಿಲೋಡೆದು ಹಬ್ಬಿ ಹರಿದಾಡಲಿ
ಚಿಕ್ಕಮಗಳೂರಿನ ಏಐಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾಗ ಅದೇ ಕಾಲೇಜಿನಲ್ಲಿ ಓದಿ ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪರಿತಪಿಸುತ್ತಿರುವುದನ್ನು ನೋಡಿ, ಈ ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕೆಂಬ ಹಠದಿಂದ ತನ್ನ ಉಪನ್ಯಾಸಕ ವೃತ್ತಿ ಬದುಕಿಗೆ ವಿದಾಯ ಹೇಳಿ, ಐಐಪಿ ಎಂಬ ಪ್ರಕಾಶನ ಮುದ್ರಣವನ್ನು ಸಂಸ್ಥಾಪಿಸಿ, ಈ ಮುದ್ರಣದ ಮೂಲಕ ಸುಮಾರು ಎಂಟು ವರ್ಷಗಳಿಂದ ಸ್ವಯಂ ಉದ್ಯೋಗವನ್ನು ಕೈಗೊಂಡು, ಹಲವಷ್ಟು ಜನರಿಗೆ ಉದ್ಯೋಗವನ್ನು ನೀಡಿ , ಈ ಸ್ವಯಂ ಉದ್ಯೋಗದ ಜೊತೆ ಜೊತೆಗೆ ಸಾರ್ವಜನಿಕ ಬದುಕಿನಲ್ಲಿ ವಿಭಿನ್ನ ಆಯಾಮಗಳಲ್ಲಿ ಗುರುತಿಸಿಕೊಂಡಿದ್ದಾರೆ, ಹಾಗೂ ನಾಡಿನ ಯುವ ಜನತೆಗೆ ಉದ್ಯೋಗ ಕಲ್ಪಿಸುವ ಮಹತ್ವಕಾಂಕ್ಷೆಯನ್ನು ನಂಜೇಶ್ ಬೆಣ್ಣೂರು ಅವರು ಹೊಂದಿದ್ದಾರೆ.
ಪುಸ್ತಕ ಪ್ರಕಟಣೆಯ ಜೊತೆ ಜೊತೆಗೆ ಮೂರು ಪೇಟೆಂಟುಗಳನ್ನು ಕೂಡ ಪಡೆದಿದ್ದಾರೆ, ಇವರ ಪ್ರೋಗ್ರಾಮಿಂಗ್ ಬುಕ್ ಗಳು ಹಲವು ಪ್ರಮುಖ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವುದು ಇವರ ಸಾಧನೆಯ ಮತ್ತೊಂದು ಗರಿಯಾಗಿದೆ.
ನವಮಾಧ್ಯಮದ ಸಾಧಕ ಬಾಧಕಗಳನ್ನು ಕುರಿತು ಕೆಲವು ಸಂಘಟನೆಗಳ ಸಂಯುಕ್ತಾಕ್ಷರದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ತನ್ನ ಸಂಸ್ಥೆ ವತಿಯಿಂದ ಆರ್ಥಿಕ ನೆರವು ನೀಡಿ, ವಿದ್ಯಾರ್ಥಿ ಯುವ ಜನರು ಸೇರಿದಂತೆ ನವ ಮಾಧ್ಯಮಗಳ ಅವಶ್ಯಕತೆ ಇರುವ ಪತ್ರಕರ್ತರು, ಕೃಷಿಕರು, ಬೆಳೆಗಾರರು, ವಿವಿಧ ಜನಮುಕಿ ಹೋರಾಟಗಾರರಿಗೆ ಸ್ವಯಂ ಸ್ಫೂರ್ತಿಯಿಂದ ತನ್ನ ಸಹಪಾಠಿಗಳೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಯಶಸ್ವಿ ತರಬೇತಿ ಶಿಬಿರಗಳನ್ನು ನಂಜೇಶ್ ಬೆಣ್ಣೂರು ಅವರು ನಡೆಸಿ ಕೊಟ್ಟಿರುತ್ತಾರೆ.
ಇಂತಹ ನಂಜೇಶ್ ಬೆಣ್ಣೂರು ಅವರ ಬುದ್ಧಿವಂತಿಕೆಯನ್ನು ಅವಲೋಕಿಸಿ ಅಂದಿನ ಉಪಮುಖ್ಯಮಂತ್ರಿ ಇಂದಿನ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ನಂಜೇಶ್ ಬೆಣ್ಣೂರು ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿ, ಯೂಥ್ ಕಾಂಗ್ರೆಸ್ ಘಟಕದ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಬಹುದು.
ಸಾಮಾಜಿಕ ಮಾಧ್ಯಮದ ರಾಜ್ಯ ಸಂಚಾಲಕರಾಗಿ ಒಂದು ವರ್ಷಗಳ ಕಾಲ ದುಡಿದ ಅನುಭವದ ಹಿನ್ನೆಲೆಯಲ್ಲಿ, ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಸ್ಪರ್ಧೆ ಮಾಡಿ ರಾಜಕೀಯ ಕ್ಷೇತ್ರಕ್ಕೂ ಅವರು ಸ್ಪರ್ಧಿಸಿದ್ದು ನಂಜೇಶ್ ಅವರ ಬಹುಮುಖ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
ನಂಜೇಶ್ ಕಣ್ಣಿನ ಪ್ರಕಾಶಮಾನ್ಯ ಹೊಳಪು…..
ವಿಶ್ವಮಟ್ಟದಲ್ಲಿ ನೂತನ ದಾಖಲೆ ಸೃಷ್ಟಿ ಮಾಡಿ ಈ ದೇಶದ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಸೃಷ್ಟಿಸಿ ಕಟ್ಟಿಕೊಡಬೇಕು ಎಂಬ ಮಹಾದಾಸೆ ನಂಜೇಶ್ ಅವರ ಕಣ್ಣಿನ ಹೊಳಪಿನೊಳಗಿದೆ ಎಂಬ ಸತ್ಯ ಸಂಗತಿ ಅವರನ್ನು ಮಾತನಾಡಿಸಿದಾಗ ನ್ಯೂಸ್ ಕಿಂಗ್ ಗೆ ಒಂದು ಅಚ್ಚರಿಯಂತೆ ಗೋಚರಿಸಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಮ್ಮ ಸಾಧನಕೇರಿಯ ವರಕವಿ ದ ರಾ ಬೇಂದ್ರೆಯವರು ತಮ್ಮ ಕವನದಲ್ಲಿ ಹೇಳಿರುವಂತೆ, “ಪ್ರಯತ್ನ ರಹಸ್ಯವಾಗಿರಲಿ ಆದರೆ ಬೆಳೆದ ಫಲ ಮಾತ್ರ ಜನರಿಗೆ ಕಾಣುವಂತಿರಲಿ” ಎಂಬ ಆಶಯದಂತೆ ನಂಜೇಶ್ ಆಶಯ ಕೂಡ ಗುಪ್ತಗಾಮಿನಿಯಂತೆ ಜೀವಸೆಲೆಯಾಗಿ ಹರಿಯುತ್ತಿದೆ.
ಎಲ್ಲ ಪ್ರಯತ್ನದ ಭಾಗವಾಗಿ ಕಳೆದ ಹಲವಾರು ವರ್ಷಗಳಿಂದ ಪರಿಶ್ರಮ ಬದ್ಧತೆಯೊಂದಿಗೆ ಶ್ರಮಪಟ್ಟು, Selfy Book ಎಂಬ ಹೆಸರಿನಲ್ಲಿ ನೂತನವಾದ ಮೊಬೈಲ್ ಆ್ಯಪ್ ವೊಂದನ್ನು ಇದೇ 2026 ರ ಜೂನ್ 30ರಂದು ರಾಜ್ಯದ ರಾಜಧಾನಿ ಬೆಂಗಳೂರಿನ ಪ್ರಸಿದ್ಧ ದಾಸ್ ಕ್ಯಾಪಿಟಲ್ ಹೋಟೆಲ್ ಸಭಾಂಗಣದಲ್ಲಿ ಮೊಬೈಲ್ ಅಪ್ಲಿಕೇಶನ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದ ಉದ್ಘಾಟನೆ ಮಾಡುವ ಸಂಭವವಿದೆ, ಈ ಸಂದರ್ಭದಲ್ಲಿ ಹಲವಾರು ಮಂತ್ರಿಗಳು, ನಾಡಿನ ಹೆಸರಾದ ಚಿಂತಕರು, ಮೇರು ಸಾಹಿತಿಗಳು,ನಂಜೇಶ್ ಅವರ ಆಪ್ತವಲಯ ಈ ಸಂದರ್ಭದಲ್ಲಿ ಸಾಕ್ಷಿಯಾಗಲಿದ್ದಾರೆ,ಇದು ನಂಜೇಶ್ ಬೆಣ್ಣೂರು ಅವರ ವೃತ್ತಿ ಬದುಕಿನ ಹಾದಿಗೆ ಹೊಸ ಚೈತನ್ಯ ನೀಡುವ ವೇದಿಕೆಯಾಗಲಿದೆ ಎಂಬ ಭರವಸೆ ಇದೆ.
ಭಾರತದಲ್ಲಿ ಇಂತಹ ಪ್ರಯತ್ನಕ್ಕೆ ಕೈ ಹಾಕಿದವರು ಬಹುಶಃ ಬಹಳ ಕಡಿಮೆ, ಈಗ ನಂಜೇಶ್ ಬೆಣ್ಣೂರು ಅವರು ಇಂಥ ಪ್ರಯತ್ನಕ್ಕೆ ಕೈ ಹಾಕಿದವರಲ್ಲಿ ದೇಶದಲ್ಲೇ ಎರಡನೆಯವರು ಎಂಬುದನ್ನು ಚಿಕ್ಕಮಗಳೂರಿನ ಜನತೆ ಮಾತ್ರವಲ್ಲ ಇಡೀ ಭಾರತವೇ ಅರ್ಥ ಮಾಡಿಕೊಂಡು ಹೆಮ್ಮೆ ಪಡಬೇಕಾದ ವಿಷಯವಾಗಿದೆ , ಜೊತೆಗೆ Selfybook ಭಾರತದ ಉದಯೋನ್ಮುಖ AI ಆಧಾರಿತ ಎಂಗೇಜ್ಮೆಂಟ್ ಮತ್ತು ಪ್ರತಿಭಾ ವೇದಿಕೆಯಾಗಿದ್ದು, ಬಳಕೆದಾರರು ತಮ್ಮ ನಿಜವಾದ ವ್ಯಕ್ತಿತ್ವವನ್ನು ಪ್ರಸ್ತುತಪಡಿಸಲು, ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಹಾಗೂ ಅರ್ಥಪೂರ್ಣ ಡಿಜಿಟಲ್ ಸಂಪರ್ಕಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.
ಸಾಂಪ್ರದಾಯಿಕ ಸಾಮಾಜಿಕ ಜಾಲತಾಣಗಳಿಗಿಂತ ಭಿನ್ನವಾಗಿ, Selfybook ಎಂಗೇಜ್ಮೆಂಟ್ ಆಧಾರಿತ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಬಳಕೆದಾರರ ಸೃಜನಶೀಲತೆ, ಪ್ರತಿಭೆ ಮತ್ತು ನೈಜ ಸಂವಹನಕ್ಕೆ ಹೆಚ್ಚಿನ ಮೌಲ್ಯ ನೀಡುತ್ತದೆ. AI ತಂತ್ರಜ್ಞಾನವನ್ನು ಬಳಸಿಕೊಂಡು ಸುರಕ್ಷಿತ, ಪಾರದರ್ಶಕ ಮತ್ತು ಮೌಲ್ಯಾಧಾರಿತ ಸಾಮಾಜಿಕ ಅನುಭವವನ್ನು ಒದಗಿಸುವ ಮೂಲಕ, ಭಾರತದ್ದೆ ಆದ ಜಾಗತಿಕ ಮಟ್ಟದ ಸಾಮಾಜಿಕ ಮಾಧ್ಯಮ ವೇದಿಕೆಯಾಗುವ ಕನಸಿನೊಂದಿಗೆ Selfybook ಮುನ್ನಡೆಯುವ ಆಶಯ ನಂಜೇಶ್ ಬೆಣ್ಣೂರು ಅವರದ್ದಾಗಿದೆ.
ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಾಗೂ ಐಓಎಸ್ ಫೋನ್ ಬಳಕೆ ದಾರರಿಗೆ ಆಪಲ್ ಸ್ಟೋರ್ ನಲ್ಲಿ ಜೂನ್ 30 ರಿಂದ ಬಳಕೆಗೆ ಲಭ್ಯವಿರುತ್ತದೆ. ನಮ್ಮ ಚಿಕ್ಕಮಗಳೂರಿನ ಈ ಕುವರ ಕರ್ನಾಟಕದ ಕೂಸು ಎಂಬ ಭಾವನೆಯಿಂದ, ಭಾರತದ ಸುಪುತ್ರ ಎಂಬ ಹಂಬಲದೊಂದಿಗೆ ವಿಶ್ವಮಟ್ಟದಲ್ಲಿ ವಿಜೃಂಭಿಸಲಿ, ನಂಜೇಶ್ ಬೆಣ್ಣೂರು ಎಂಬ ಗ್ರಾಮೀಣ ಭಾರತದ ಪ್ರತಿಭೆಯ ಕನಸಿಗೆ ಇಡೀ ಭಾರತೀಯ ಸಮಾಜ ಒಂದಾಗಿ ಸಹಕಾರ ಪ್ರೋತ್ಸಾಹ ನೀಡುವುದರ ಮೂಲಕ, ನಾವು ನಿಮ್ಮೊಂದಿಗೆ ನಿಂತಿದ್ದೇವೆ ಎಂಬ ಭರವಸೆಯನ್ನು ತುಂಬಿ ಬೆಳೆಸಬೇಕಾಗಿದೆ.
May Nanjesh Bennur shine as a new star of the new media…
Leave a comment