Home namma chikmagalur chikamagalur ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ
chikamagalurCrime NewsHomeLatest Newsnamma chikmagalur

ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ

Share
Share

ಚಿಕ್ಕಮಗಳೂರು: ಅರಣ್ಯ ಇಲಾಖೆಯ ಐಬಿ ಎದುರಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಸಹಿತ ಆರೋಪಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯ ಮತ್ತಾವರ ಅರಣ್ಯ ಇಲಾಖೆಯ ಎದುರಿಗಿರುವ ಖಾಸಗಿ ಕಂಪನಿಯೊಂದರ ಗ್ಯಾರೇಜ್‌ನ ಆವರಣದಲ್ಲಿ ಗಾಂಜಾ ಬೆಳೆದಿರುವ ಕುರಿತು ಖಚಿತ ಮಾಹಿತಿ ಆಧಾರದ ಮೇರೆಗೆ ಕಾರ್ಯಪ್ರವೃತ್ತರಾದ ಅಬಕಾರಿ ಸಿಬ್ಬಂದಿ ದಾಳಿ ನಡೆಸಿ ಮುಸೈಫ್ ಎಂಬ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಮುಸೈಫ್ ಇದೇ ಖಾಸಗಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದು, ಯಾರಿಗೂ ಸಂಶಯ ಬಾರದಂತೆ ಗ್ಯಾರೇಜ್‌ನ ಹಿಂಭಾಗದ ಜಾಗದಲ್ಲಿ ಗಾಂಜಾ ಗಿಡವನ್ನು ಪೋಷಿಸುತ್ತಿದ್ದ. ಈ ಗಿಡವು ಸರಿಸುಮಾರು ನಾಲ್ಕು ಅಡಿಗೂ ಹೆಚ್ಚು ಎತ್ತರಕ್ಕೆ ದಷ್ಟಪುಷ್ಟವಾಗಿ ಬೆಳೆದು ನಿಂತಿತ್ತು.

ಕಣ್ಣೆದುರೇ ಇಷ್ಟೊಂದು ದೊಡ್ಡದಾಗಿ ಗಿಡ ಬೆಳೆದಿದ್ದರೂ, ಅದು ಗಾಂಜಾ ಗಿಡ ಎಂಬ ಸಣ್ಣ ಸುಳಿವೂ ಇಲ್ಲದೆ ಗ್ಯಾರೇಜ್‌ನ ಇತರ ಸಿಬ್ಬಂದಿ ದಿನನಿತ್ಯ ಓಡಾಡುತ್ತಿದ್ದರು.

ತಮ್ಮ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಇಂತಹದೊಂದು ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದ ಮತ್ತು ತಮ್ಮ ಕಣ್ಣೆದುರೇ ಗಾಂಜಾ ಬೆಳೆಸುತ್ತಿದ್ದ ಎಂಬ ಸತ್ಯ ಬಯಲಾಗುತ್ತಿದ್ದಂತೆ ಗ್ಯಾರೇಜ್‌ನ ಇತರೆ ಸಿಬ್ಬಂದಿ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಸದ್ಯ ಆರೋಪಿಯನ್ನು ಗಾಂಜಾ ಸಹಿತ ವಶಕ್ಕೆ ಪಡೆದಿರುವ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Suspect arrested for illegally growing marijuana

Share

Leave a comment

Leave a Reply

Your email address will not be published. Required fields are marked *

Don't Miss

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ ಸಾಗುತ್ತಿದ್ದೇವೆ ಎನ್ನಿಸುತ್ತದೆ. ಮಠಗಳು ಮಿತಿ ದಾಟಿದರೆ ಸಂಘಟನೆಗಳು ಲಾಭಿ ಮಾಡುತ್ತಿರುವುದು “ಸೇವೆಗಾಗಿಯೋ” ಜಾತಿಗಾಗಿಯೋ ಆಥವಾ...

ಕಾಫಿ ಮೂಟೆ ಸಾಗಿಸುತ್ತಿದ್ದ ಲಾರಿ ಅಪಘಾತ

ಚಿಕ್ಕಮಗಳೂರು: ಕಾಫಿ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಲಾರಿ ಕಣಿವೆಯ...

Related Articles

ಮುದುಗುಂಡಿ ಗ್ರಾಮದಲ್ಲಿ ಹೆಣ್ಣು ಚಿರತೆ ಸೆರೆ

ತರೀಕೆರೆ: ತಾಲ್ಲೂಕಿನ ಮುದುಗುಂಡಿ ಗ್ರಾಮದಲ್ಲಿ ಸುಮಾರು 3 ವರ್ಷ ವಯಸ್ಸಿನ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ...

ಮಕ್ಕಳ ಲೈಂಗಿಕ ಶೋಷಣೆ ಚಿತ್ರ ದೃಶ್ಯ ಹಂಚಿಕೊಂಡ ನಗರದ ಮಹಿಳೆ

ಚಿಕ್ಕಮಗಳೂರು: ಮಕ್ಕಳ ಲೈಂಗಿಕ ಶೋಷಣೆ ಮತ್ತು ಆಕ್ಷೇಪಣಾರ್ಹ ಚಿತ್ರ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ...

ನಂಜೇಶ್ ಬೆಣ್ಣೂರು ನವಮಾಧ್ಯಮದ ನವತಾರೆಯಾಗಿ ಬೆಳಗಲಿ…

ಚಿಕ್ಕಮಗಳೂರು:  ಜನಮುಖಿ ಮನಸ್ಸಿನ ನವಮಾಧ್ಯಮದ ಸಂವಹನಕಾರ ನಂಜೇಶ್ ಆರ್ ಬೆಣ್ಣೂರು ಈಗ ಭಾರತದ ಮಟ್ಟದಲ್ಲಿ ನವ...

ಕಾಫಿನಾಡಿನಲ್ಲಿ ಲಾಂಗು – ಮಚ್ಚುಗದ್ದೆ ಸುದ್ದಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಲಾಂಗು ಮತ್ತು ಮಚ್ಚುಗಳಂತಹ ಮಾರಕಾಸ್ತ್ರಗಳು ಬಳಕೆ ತೀರಾ ಸಾಮಾನ್ಯ...